ಬುಲಂದ್‌ಶಹರ್ (ಉತ್ತರಪ್ರದೇಶ) :ಮದರಸಾವೊಂದರಲ್ಲಿ 9 ವರ್ಷದ ಬಾಲಕನೋರ್ವನನ್ನು ಆತನ 14 ವರ್ಷದ ಸಹಪಾಟಿ ಕೊಲೆ ಮಾಡಿರುವ ಘಟನೆ ಉತ್ತರಪ್ರದೇಶದ ಬುಲಂದ್‌ಶಹರ್‌ನ ಧಮೇದಾ ಪ್ರದೇಶದಲ್ಲಿ ಭಾನುವಾರ ನಡೆದಿದೆ. ಬಾಲಕನನ್ನು ಇಟ್ಟಿಗೆಯಿಂದ ಕೊಂದಿದ್ದು, ಕೊಲೆಗೆ ಕಾರಣ ಏನು ಎಂಬುದು ಇನ್ನೂ ತಿಳಿದು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಬುಲಂದ್‌ಶಹರ್ ಎಸ್‌ಪಿ ಸಿ ಟಿ ಸುರೇಂದ್ರನಾಥ್ ತಿವಾರಿ ಹತ್ಯೆಯ ತನಿಖೆಯನ್ನು ಪ್ರಾರಂಭಿಸಿದ್ದು, ಆರೋಪಿಯನ್ನು ಬಂಧಿಸಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.