ಮಹಾರಾಷ್ಟ್ರ:ತನ್ನ ಸಾಕು ನಾಯಿ ಅಪಘಾತದಲ್ಲಿ ಮೃತಪಟ್ಟಿದ್ದ ಪ್ರಕರಣದಲ್ಲಿಮಹಾರಾಷ್ಟ್ರದ ಚಂದ್ರಾಪುರದಲ್ಲಿರುವ ವ್ಯಕ್ತಿಯೊಬ್ಬ ಸತತ 9 ವರ್ಷದ ಕಾನೂನು ಹೋರಾಟದಲ್ಲಿ ಜಯಿಸಿ, ಕೋರ್ಟ್‌ನಿಂದ ₹3 ಲಕ್ಷ ಪರಿಹಾರ ಪಡೆದಿದ್ದಾರೆ.
ಉಮೇಶ್ ಭಟ್ಕರ್ ಎಂಬುವರು ಜಾನ್ ಎಂಬ ಹೆಸರಿನ ಶ್ವಾನ ಸಾಕಿದ್ದರು. 2013ರ ಜನವರಿ 10 ರಂದು ತಮ್ಮ ನಾಯಿಯೊಂದಿಗೆ ವಾಕಿಂಗ್ ಹೋಗಿದ್ದರು. ಈ ವೇಳೆ, ರಹೀಮ್ ಟ್ರಾವೆಲ್ಸ್‌ಗೆ ಸೇರಿದ MH40, N3766 ಸಂಖ್ಯೆಯ ಶಾಲಾ ವಾಹನ ಡಿಕ್ಕಿ ಹೊಡೆದ ಪರಿಣಾಮ, ನಾಯಿ ಸ್ಥಳದಲ್ಲೇ ಸಾವನ್ನಪ್ಪಿತ್ತು. ಇದು ಮಾಲೀಕನಿಗೆ ಭಾರಿ ಆಘಾತ ತಂದಿತ್ತು. ಕಾರಣ ಈ ನಾಯಿಯಿಂದಲೇ ಅವರ ಮನೆಯ ಜೀವನ ನಡೆಯುತ್ತಿತ್ತು.
ಆರತಿ ಇನ್ಫ್ರಾ ಎಂಬ ಕಂಪನಿಯಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಜಾನ್‌ನನ್ನು ನೇಮಿಸಿಕೊಳ್ಳಲಾಗಿತ್ತು. ಇದರಿಂದ ಉಮೇಶ್ ಭಟ್ಕರ್ ತಿಂಗಳಿಗೆ ಗೌರವ ಧನವಾಗಿ 8 ಸಾವಿರ ರೂಪಾಯಿ ಪಡೆಯುತ್ತಿದ್ದರು. ಆದರೆ, ಅಪಘಾತದಲ್ಲಿ ಜಾನ್ ಮೃತಪಟ್ಟ ಪರಿಣಾಮ ಇವರಿಗೆ ಆರ್ಥಿಕ ಮುಗ್ಗಟು ಎದುರಿಸುವಂತಾಯಿತು.
ಶಾಲಾ ಬಸ್ ಮಾಲೀಕರು ಹಾಗೂ ವಿಮಾ ಕಂಪನಿ ಪರಿಹಾರ ನೀಡುವಂತೆ ಮನವಿ ಮಾಡಿದರೂ ಸ್ಪಂದಿಸಿಲ್ಲ. ಈ ಕುರಿತು ಭಟ್ಕರ್ ಪೊಲೀಸರಿಗೆ ದೂರು ನೀಡಿದ್ದಾರೆ. ಅದರೊಂದಿಗೆ ನಾಯಿಯನ್ನು ಶವಪರೀಕ್ಷೆ ಮಾಡಲಾಯಿತು. ವರದಿಯಲ್ಲಿ ಜಾನ್ ಅಪಘಾತದಿಂದ ಸಾವನ್ನಪ್ಪಿರುವುದು ಸ್ಪಷ್ಟವಾಗಿದೆ.