ಅಮರಾವತಿ(ಆಂಧ್ರ ಪ್ರದೇಶ): ಪೂರ್ವ ಲಡಾಕ್‌ನಲ್ಲಿ ಸೈನ್ಯವನ್ನು ನಿಯೋಜಿಸುವ ಪ್ರಕ್ರಿಯೆ ಕುರಿತು ಭಾರತ ಹಾಗೂ ಚೀನಾದ ಹಿರಿಯ ಮಿಲಿಟರಿ ಕಮಾಂಡರ್‌ಗಳ ಒಂಬತ್ತನೇ ಸುತ್ತಿನ ಮಾತುಕತೆ ನಡೆದಿದ್ದು, ಇದು ಭವಿಷ್ಯದಲ್ಲೂ ಹೀಗೆ ಮುಂದುವರಿಯುವ ಸಾಧ್ಯತೆ ಇದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಶನಿವಾರ ಹೇಳಿದ್ದಾರೆ.
ವಿಜಯವಾಡದಲ್ಲಿ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಅವರು, ಇಲ್ಲಿಯವರೆಗೆ ನಡೆದ ಮಾತುಕತೆಗಳಿಂದ ಯಾವುದೇ ಅಭಿಪ್ರಾಯಗೋಚರಿಸಿಲ್ಲ, ಇದೊಂದು ನಿರಾಶಾದಾಯಕ ಮಾತುಕತೆ. ಸೈನ್ಯವನ್ನು ಅವಲಂಬಿಸಿದ ಇದು ತುಂಬಾ ಸಂಕೀರ್ಣವಾದ ವಿಷಯವಾಗಿದೆ. ನಾವು ಭೂ ವ್ಯಾಪ್ತಿಯನ್ನು ಅರಿತಿದ್ದು, ಏನಾಗುತ್ತಿದೆ ಎಂಬುದನ್ನು ತಿಳಿದುಕೊಳ್ಳಬೇಕು, ಅದನ್ನು ಮಿಲಿಟರಿ ಕಮಾಂಡರ್‌ಗಳು ಮಾಡುತ್ತಿದ್ದಾರೆ ಎಂದು ಹೇಳಿದರು.