ಕರ್ನಾಟಕ

karnataka

ETV Bharat / bharat

ಜೈಲಿನ 9 ಕೈದಿಗಳಿಗೆ ಹೆಚ್​ಐವಿ ಸೋಂಕು ಪತ್ತೆ: ತನಿಖೆ ಚುರುಕು! - ಉತ್ತರಪ್ರದೇಶದಲ್ಲಿ ಜೈಲಿನ 9 ಕೈದಿಗಳಿಗೆ ಹೆಚ್​ಐವಿ ಸೋಂಕು ಪತ್ತೆ

ಜೈಲಿನ 9 ಕೈದಿಗಳಿಗೆ ಹೆಚ್​ಐವಿ ಸೋಂಕು ಪತ್ತೆಯಾಗಿರುವ ಘಟನೆ ಉತ್ತರ ಪ್ರದೇಶದ ಗೋರಖ್​ಪುರ ಜಿಲ್ಲೆಯಲ್ಲಿ ಕಂಡು ಬಂದಿದೆ.

gorakhpur news  uttar pradesh news  nine prisoners hiv positive  gorakhpur jail prisoners found hiv positive  ಜೈಲಿನ 9 ಕೈದಿಗಳಿಗೆ ಹೆಚ್​ಐವಿ ಸೋಂಕು ಪತ್ತೆ  ಉತ್ತರಪ್ರದೇಶದಲ್ಲಿ ಜೈಲಿನ 9 ಕೈದಿಗಳಿಗೆ ಹೆಚ್​ಐವಿ ಸೋಂಕು ಪತ್ತೆ  ಜೈಲಿನ 9 ಕೈದಿಗಳಿಗೆ ಹೆಚ್​ಐವಿ ಸೋಂಕು ಪತ್ತೆ ಸುದ್ದಿ
ಜೈಲಿನ 9 ಕೈದಿಗಳಿಗೆ ಹೆಚ್​ಐವಿ ಸೋಂಕು ಪತ್ತೆ

By

Published : Mar 13, 2021, 9:25 AM IST

ಗೋರಖ್‌ಪುರ:ಜಿಲ್ಲಾ ಜೈಲಿನಿಂದ ಅಚ್ಚರಿಯ ಪ್ರಕರಣವೊಂದು ಬೆಳಕಿಗೆ ಬಂದಿದೆ. ಜೈಲಿನ 9 ಕೈದಿಗಳಲ್ಲಿ ಎಚ್‌ಐವಿ ಸೋಂಕಿನ ಲಕ್ಷಣಗಳು ಕಂಡುಬಂದಿದ್ದು, ಜೈಲು ಮತ್ತು ಜಿಲ್ಲಾಡಳಿತದಲ್ಲಿ ಕೋಲಾಹಲ ಉಂಟಾಗಿದೆ.

ಸರ್ಕಾರದ ಸೂಚನೆಯ ಮೇರೆಗೆ ಗೋರಖ್‌ಪುರ ವೈದ್ಯಕೀಯ ಕಾಲೇಜಿನ ಸೂಕ್ಷ್ಮ ಜೀವವಿಜ್ಞಾನ ವಿಭಾಗದಲ್ಲಿ ಜಿಲ್ಲಾ ಕಾರಾಗೃಹದ ಬಂಧಿತರ ಹೆಚ್‌ಐವಿ ತಪಾಸಣೆ ನಡೆಸಲಾಗಿತ್ತು. ಇದರಲ್ಲಿ 9 ಕೈದಿಗಳಿಗೆ ಹೆಚ್​ಐವಿ ಸೋಂಕಿನ ಲಕ್ಷಣಗಳು ಕಂಡುಬಂದಿವೆ.

ಆರೋಗ್ಯ ಇಲಾಖೆಯು ಈ ಕೈದಿಗಳ ಮೇಲೆ ನಿಗಾ ಇಟ್ಟಿದೆ. ಈ ಘಟನೆ ಬಗ್ಗೆ ಜಿಲ್ಲಾಡಳಿತ ತನಿಖೆ ಕೈಗೊಂಡಿದೆ. ಗೋರಖ್‌ಪುರ ಜಿಲ್ಲಾ ಕಾರಾಗೃಹದಲ್ಲಿ ಪ್ರಸ್ತುತ ಸುಮಾರು 1,800 ಕೈದಿಗಳಿದ್ದು, ಈ ಪೈಕಿ 1200 ಕೈದಿಗಳನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದೆ. ಉಳಿದಿರುವ ಕೈದಿಗಳ ವೈದ್ಯಕೀಯ ಪರೀಕ್ಷೆ ನಡೆಸಲಾಗುವುದು. ಇನ್ನು ಕೈದಿಗಳಿಗೆ ಹೆಚ್​ವಿಐ ಸೋಂಕು ಯಾವ ರೀತಿ ಹರಡಿದೆ ಎಂಬುದರ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಜಿಲ್ಲಾಡಳಿತ ತಿಳಿಸಿದೆ.

ABOUT THE AUTHOR

...view details