ಕರ್ನಾಟಕ

karnataka

ETV Bharat / bharat

ಆಮ್ಲಜನಕದ ಕೊರತೆ : ಒಂಬತ್ತು ಕೊರೊನಾ ಸೋಂಕಿತರು ಸಾವು - ಆಮ್ಲಜನಕದ ಕೊರತೆ ಒಂಬತ್ತು ಕೊರೊನಾ ಸೋಂಕಿತರು ಸಾವು

ಆಮ್ಲಜನಕದ ಕೊರತೆ ಹೆಚ್ಚಾಗಿದ್ದು ಬೇಡಿಕೆಯ ಪ್ರಕಾರ ಆಮ್ಲಜನಕ ಸಿಗುತ್ತಿಲ್ಲ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಆದರೆ ಜಿಲ್ಲಾಡಳಿತ ಮಾತ್ರ ಯಾವುದೇ ಆಮ್ಲಜನಕ ಸಿಲಿಂಡರ್‌ಗಳ ತೊಂದರೆ ಇಲ್ಲ..

ಒಂಬತ್ತು ಕೊರೊನಾ ಸೋಂಕಿತರು ಸಾವು
ಒಂಬತ್ತು ಕೊರೊನಾ ಸೋಂಕಿತರು ಸಾವು

By

Published : Apr 27, 2021, 12:49 PM IST

ಉತ್ತರ ಪ್ರದೇಶ : ಮೀಳರತ್ ಜಿಲ್ಲೆಯಲ್ಲಿ ಆಮ್ಲಜನಕದ ಬಿಕ್ಕಟ್ಟು ಹೆಚ್ಚುತ್ತಿದೆ. ಆಮ್ಲಜನಕದ ಕೊರತೆಯಿಂದ ನಗರದ ಕೆಎಂಸಿ ಆಸ್ಪತ್ರೆಯಲ್ಲಿ ಕಳೆದ 24 ಗಂಟೆಗಳಲ್ಲಿ ಒಂಬತ್ತು ಜನ ಸಾವನ್ನಪ್ಪಿದ್ದಾರೆ.

ಕಳೆದ 24 ಗಂಟೆಗಳಲ್ಲಿನಗರದ ವಿವಿಧ ಆಸ್ಪತ್ರೆಯೊಳಗೆ 30 ಜನರು ಸಾವನ್ನಪ್ಪಿದ್ದಾರೆ. ಈ ಪೈಕಿ 22 ಜನರು ಕೊರೊನಾ ಸೋಂಕಿನಿಂದ ಸಾವನ್ನಪ್ಪಿದರೆ, ಇನ್ನುಳಿದ ಎಂಟು ಜನರು ಕೊರೊನಾ ಶಂಕಿತರಾಗಿದ್ದರು ಎಂದು ವರದಿಯಾಗಿದೆ.

ವೈದ್ಯಕೀಯ ಕಾಲೇಜಿನಲ್ಲಿ 13 ಮತ್ತು ಕೆಎಂಸಿಯಲ್ಲಿ ಒಂಬತ್ತು ಜನ ಆಮ್ಲಜನಕ ಕೊರತೆಯಿಂದ ಸಾವನ್ನಪ್ಪಿದರೆ, ಕೆಲವು ಬೇರೆ ಬೇರೆ ಆಸ್ಪತ್ರೆಗಳಲ್ಲಿ ಎಂಟು ಮಂದಿ ಸಾವನ್ನಪ್ಪಿದ್ದಾರೆ.

ಮತ್ತೊಂದೆಡೆ, ಮನೆಯಲ್ಲಿಯೆ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳು ಆಮ್ಲಜನಕದ ಕೊರತೆಯಿಂದಾಗಿ ಬಳಲುತ್ತಿದ್ದಾರೆ.

ಆಮ್ಲಜನಕದ ಕೊರತೆ ಹೆಚ್ಚಾಗಿದ್ದು ಬೇಡಿಕೆಯ ಪ್ರಕಾರ ಆಮ್ಲಜನಕ ಸಿಗುತ್ತಿಲ್ಲ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಆದರೆ ಜಿಲ್ಲಾಡಳಿತ ಮಾತ್ರ ಯಾವುದೇ ಆಮ್ಲಜನಕ ಸಿಲಿಂಡರ್‌ಗಳ ತೊಂದರೆ ಇಲ್ಲಾ ಎಂದು ಹೇಳಿದೆ.

ಇದನ್ನೂ ಓದಿ : ಮಕ್ಕಳಿಗಾಗಿ ಹೊಸ ಕನ್ನಡ ಚಾನಲ್ ಲೋಕಾರ್ಪಣೆ​: ನಿಮ್ಮ ಮನೆಯಂಗಳಕ್ಕೆ 'ಈಟಿವಿ ಬಾಲ ಭಾರತ'

For All Latest Updates

ABOUT THE AUTHOR

...view details