ಕರ್ನಾಟಕ

karnataka

ETV Bharat / bharat

ಮಹಾರಾಷ್ಟ್ರದಲ್ಲಿ ಮಿತಿಮೀರಿದ ಕೋವಿಡ್: ಭಾನುವಾರದಿಂದ ನೈಟ್‌ ಕರ್ಫ್ಯೂ, ಮಾಲ್‌ಗಳಿಗೆ ಸಮಯ ನಿಗದಿ - Mumbai

ಕೊರೊನಾ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಏರುತ್ತಿರುವ ಕಾರಣ ಮಹಾರಾಷ್ಟ್ರ ಸರ್ಕಾರ ಭಾನುವಾರದಿಂದ ರಾತ್ರಿ ಕರ್ಫ್ಯೂ ಹೇರಲು ಮುಂದಾಗಿದೆ. ಪಟ್ಟಣಗಳಾದ ನಾಂದೇಡ್ ಮತ್ತು ಬೀಡ್‌ ಪ್ರದೇಶಗಳಲ್ಲಿ ಈಗಾಗಲೇ ಲಾಕ್‌ಡೌನ್‌ ವಿಧಿಸಲಾಗಿದೆ.

Night curfew in Maharashtra from next Sunday
ಮುಂದಿನ ಭಾನುವಾರದಿಂದ ಮಹಾರಾಷ್ಟ್ರದಲ್ಲಿ ರಾತ್ರಿ ಕರ್ಫ್ಯೂ ಜಾರಿ...

By

Published : Mar 26, 2021, 8:46 PM IST

Updated : Mar 26, 2021, 9:27 PM IST

ಮುಂಬೈ: ಹೆಚ್ಚುತ್ತಿರುವ ಕೊರೊನಾ ಪ್ರಕರಣ ಹಿನ್ನೆಲೆಯಲ್ಲಿ ನಿಯಂತ್ರಣಕ್ಕೆ ತರುವ ಉದ್ದೇಶದಿಂದ ಸಿಎಂ ಉದ್ಧವ್ ಠಾಕ್ರೆ ಅವರು ಭಾನುವಾರ ರಾತ್ರಿಯಿಂದ (ಮಾರ್ಚ್ 28) ರಾಜ್ಯದಲ್ಲಿ ರಾತ್ರಿ ಕರ್ಫ್ಯೂ ವಿಧಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಹೆಚ್ಚುತ್ತಿರುವ ಸೋಂಕನ್ನು ನಿಗ್ರಹಿಸಲು ಕಠಿಣ ಕ್ರಮಗಳನ್ನು ಜಾರಿಗೆ ತರಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ. ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಪ್ರಮುಖ ಅಂಶಗಳು:

- ರಾಜ್ಯದಲ್ಲಿ ರಾತ್ರಿ 8 ರಿಂದ ಬೆಳಗ್ಗೆ 7 ರತನಕ ಶಾಪಿಂಗ್‌ ಮಾಲ್‌ಗಳು ಬಂದ್‌ ಆಗಲಿವೆ.

- ಜಿಲ್ಲೆಗಳಲ್ಲಿ ಲಾಕ್‌ಡೌನ್‌ ಜಾರಿಗೆ ತರುವ ಬಗ್ಗೆ ಜಿಲ್ಲಾಧಿಕಾರಿಗಳು ನಿರ್ಧರಿಸುವಂತೆ ಸರ್ಕಾರದ ಸೂಚನೆ.

- ಸದ್ಯಕ್ಕೆ ರಾಜ್ಯಾದ್ಯಾಂತ ಲಾಕ್‌ಡೌನ್ ಇಲ್ಲ, ಹಾಗೊಂದು ವೇಳೆ ಜಾರಿ ಅನಿವಾರ್ಯವಾದರೆ ಸಾರ್ವಜನಿಕರಿಗೆ ಮುಂಚಿತವಾಗಿ ತಿಳಿಸಲಾಗುತ್ತದೆ ಎಂದು ಸಿಎಂ ತಿಳಿಸಿದ್ದಾರೆ.

- ಆಸ್ಪತ್ರೆಗಳಲ್ಲಿ ಬೆಡ್‌ ಸೌಕರ್ಯ, ಔಷಧಿಗಳನ್ನು ಸಾಕಷ್ಟು ಪ್ರಮಾಣದಲ್ಲಿ ಇರಿಸಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

Last Updated : Mar 26, 2021, 9:27 PM IST

For All Latest Updates

TAGGED:

Mumbai

ABOUT THE AUTHOR

...view details