ಕರ್ನಾಟಕ

karnataka

ETV Bharat / bharat

ರಾಜಸ್ಥಾನದ 8 ಜಿಲ್ಲೆಗಳಲ್ಲಿ ರಾತ್ರಿ ಕರ್ಫ್ಯೂ; ಪ್ರವಾಸಿಗರಿಗೆ RT-PCR ಪರೀಕ್ಷೆ ಕಡ್ಡಾಯ - ರಾಜಸ್ಥಾನದಲ್ಲಿ ರಾತ್ರಿ ಕರ್ಫ್ಯೂ

ರಾಜಸ್ಥಾನದ ಅಜ್ಮೀರ್, ಭಿಲ್ವಾರಾ, ಜೋಧ್‌ಪುರ, ಕೋಟಾ, ಉದಯಪುರ, ಸಾಗ್ವಾರಾ, ಕುಶಲ್‌ಘರ್​ ಮತ್ತು ಜೈಪುರ ಜಿಲ್ಲೆಗಳಲ್ಲಿ ಸೋಮವಾರದಿಂದ ಪ್ರತಿದಿನ ರಾತ್ರಿ 11 ರಿಂದ ಬೆಳಗ್ಗೆ 5 ಗಂಟೆವರೆಗೆ ರಾತ್ರಿ ಕರ್ಫ್ಯೂ ವಿಧಿಸಲಾಗಿದೆ.

Night curfew in 8 districts
ರಾಜಸ್ಥಾನದ 8 ಜಿಲ್ಲೆಗಳಲ್ಲಿ ರಾತ್ರಿ ಕರ್ಫ್ಯೂ ಜಾರಿ

By

Published : Mar 22, 2021, 7:12 AM IST

ಜೈಪುರ:ಕೊರೊನಾ ವೈರಸ್​ನ ಎರಡನೇ ಅಲೆ ಆತಂಕದ ಮಧ್ಯೆ, ರಾಜಸ್ಥಾನ ಸರ್ಕಾರ ಎಂಟು ಜಿಲ್ಲೆಗಳಲ್ಲಿ ರಾತ್ರಿ ಕರ್ಫ್ಯೂ ವಿಧಿಸುವುದಾಗಿ ಭಾನುವಾರ ಘೋಷಿಸಿದೆ. ಜೊತೆಗೆ ರಾಜ್ಯಕ್ಕೆ ಬರುವ ಪ್ರವಾಸಿಗರಿಗೆ ಆರ್​​ಟಿ-ಪಿಸಿಆರ್ ನೆಗೆಟಿವ್​ ವರದಿಯನ್ನು ಕಡ್ಡಾಯಗೊಳಿಸಿದೆ.

ಅಜ್ಮೀರ್, ಭಿಲ್ವಾರಾ, ಜೋಧ್‌ಪುರ, ಕೋಟಾ, ಉದಯಪುರ, ಸಾಗ್ವಾರಾ, ಕುಶಲ್‌ಘರ್​ ಮತ್ತು ಜೈಪುರದಲ್ಲಿ ಸೋಮವಾರದಿಂದ ಪ್ರತಿದಿನ ರಾತ್ರಿ 11 ರಿಂದ ಬೆಳಗ್ಗೆ 5 ರವರೆಗೆ ರಾತ್ರಿ ಕರ್ಫ್ಯೂ ವಿಧಿಸಲಾಗುವುದು. ಆದರೆ ಎಲ್ಲಾ ತುರ್ತು ಸೇವೆಗಳಿಗೆ ಕರ್ಫ್ಯೂ ನಿರ್ಬಂಧಗಳಿಂದ ವಿನಾಯಿತಿ ನೀಡಲಾಗಿದೆ. ಈ ರಾತ್ರಿ ಕರ್ಫ್ಯೂ ಕಾರ್ಖಾನೆಗಳಿಗೆ ಅನ್ವಯಿಸಲಾಗುವುದಿಲ್ಲ. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅಧ್ಯಕ್ಷತೆಯಲ್ಲಿ ಭಾನುವಾರ ನಡೆದ ಕೊರೊನಾ ಕೋರ್ ಗ್ರೂಪ್ ಸಮಿತಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಕೋವಿಡ್ -19 ಹರಡುವುದನ್ನು ತಡೆಯಲು, ರಾಜ್ಯದ ಎಲ್ಲಾ ನಗರಗಳಲ್ಲಿ ರಾತ್ರಿ 10 ರಿಂದ ಮಾರುಕಟ್ಟೆಗಳನ್ನು ಮುಚ್ಚುವಂತೆ ಆದೇಶ ಹೊರಡಿಸಲಾಗಿದೆ. ಮಾರ್ಚ್ 25 ರಿಂದ ರಾಜಸ್ಥಾನಕ್ಕೆ ಪ್ರಯಾಣಿಸುವವರಿಗೆ 72 ಗಂಟೆಗಳಿಗಿಂತ ಹೆಚ್ಚು ಹಳೆಯದಾಗಿರದ ಆರ್​​ಟಿ-ಪಿಸಿಆರ್ ನೆಗೆಟಿವ್​ ವರದಿ ಕಡ್ಡಾಯಗೊಳಿಸಲಾಗಿದೆ. ಈ ಹಿಂದೆ ಕೇರಳ, ಮಹಾರಾಷ್ಟ್ರ, ಗುಜರಾತ್, ಪಂಜಾಬ್, ಹರಿಯಾಣ ಮತ್ತು ಮಧ್ಯಪ್ರದೇಶದಿಂದ ಬರುವವರು ತಮ್ಮೊಂದಿಗೆ ಕೋವಿಡ್ ನೆಗೆಟಿವ್ ವರದಿಯನ್ನು ತರುವಂತೆ ಆದೇಶಿಸಲಾಗಿತ್ತು. ಇದೀಗ ಕೊರೊನಾ ನೆಗೆಟಿವ್​ ವರದಿಯಿಲ್ಲದೆ ರಾಜಸ್ಥಾನಕ್ಕೆ ಬರುವ ಪ್ರಯಾಣಿಕರು 15 ದಿನಗಳವರೆಗೆ ಕ್ವಾರಂಟೈನ್​ಗೆ ಒಳಗಾಗಬೇಕು ಎಂದು ಘೋಷಿಸಲಾಗಿದೆ.

ಐದು ಆ್ಯಕ್ಟಿವ್ ಪ್ರಕರಣಗಳನ್ನು ಹೊಂದಿರುವ ಸ್ಥಳಗಳನ್ನು ಮಿನಿ ಕಂಟೈನ್‌ಮೆಂಟ್ ವಲಯಗಳಾಗಿ ಪರಿವರ್ತಿಸಲಾಗುತ್ತದೆ. ಮುಂದಿನ ಆದೇಶದವರೆಗೆ ಪ್ರಾಥಮಿಕ ಶಾಲೆಗಳು ಮುಚ್ಚಲ್ಪಡುತ್ತವೆ ಹಾಗೂ ಶೇ 50 ಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳಿಗೆ ತರಗತಿಗಳು ಮತ್ತು ಕಾಲೇಜುಗಳಿಗೆ ಹಾಜರಾಗಲು ಅವಕಾಶವಿರುವುದಿಲ್ಲ. ಈ ಸಂಸ್ಥೆಗಳಲ್ಲಿ ಸ್ಕ್ರೀನಿಂಗ್, ರ್ಯಾಂಡಮ್​ ಪರೀಕ್ಷೆಯನ್ನು ಕಡ್ಡಾಯಗೊಳಿಸಲಾಗುತ್ತದೆ. ಪೋಷಕರು ಒಪ್ಪಿಗೆ ಕೊಟ್ಟರಷ್ಟೇ ಮಕ್ಕಳು ಶಾಲೆಗೆ ಬರಲು ಅವಕಾಶ. ಮದುವೆ ಮತ್ತು ಅಂತ್ಯಕ್ರಿಯೆಯಂಥ ಸಮಾರಂಭದಲ್ಲಿ ಪಾಲ್ಗೊಳ್ಳುವವರ ಸಂಖ್ಯೆಯನ್ನು 20 ಕ್ಕೆ ಸೀಮಿತಗೊಳಿಸಲಾಗುತ್ತದೆ.

ಇದನ್ನೂ ಓದಿ:ಕೊರೊನಾ ಕಾಟ: ಛತ್ತೀಸ್​ಗಢದಲ್ಲಿ ಶಾಲಾ-ಕಾಲೇಜು ಮತ್ತೆ ಬಂದ್

ABOUT THE AUTHOR

...view details