ಗುಜರಾತ್: ಮಹಾಮಾರಿ ಕೊರೊನಾ ಸೋಂಕಿತರ ಪ್ರಮಾಣ ಕೊಂಚ ಇಳಿಮುಖವಾಗುತ್ತಾ ಬಂದ ಹಿನ್ನೆಲೆ ಜನರು ನಿರಾತಂಕವಾಗಿದ್ದರು. ಆದ್ರೆ ಇದೀಗ ಸೋಂಕಿತರ ಪ್ರಮಾಣ ಏರಿಕೆಯಾಗುತ್ತಿರುವ ಹಿನ್ನೆಲೆ ಗುಜರಾತ್ನ ನಾಲ್ಕು ಮಹಾನಗರಗಳಲ್ಲಿ ರಾತ್ರಿ ಕರ್ಫ್ಯೂ ವಿಧಿಸಲಾಗುತ್ತಿದೆ ಎಂದು ಗುಜರಾತ್ ಸರ್ಕಾರ ಘೋಷಿಸಿದೆ.
ಮಾರ್ಚ್ 17ರಿಂದ ಗುಜರಾತ್ನ ಹಲವೆಡೆ ನೈಟ್ ಕರ್ಫ್ಯೂ - Night curfew
ಮಾರ್ಚ್ 17ರಿಂದ ಮಾರ್ಚ್ 31ರವರೆಗೆ ರಾತ್ರಿ 10 ರಿಂದ ಬೆಳಗ್ಗೆ 6ರವರೆಗೆ ಗುಜರಾತ್ನ ನಾಲ್ಕು ಮಹಾನಗರಗಳಾದ ಅಹಮದಾಬಾದ್, ವಡೋದರಾ, ಸೂರತ್ ಮತ್ತು ರಾಜ್‌ಕೋಟ್‌ನಲ್ಲಿ ರಾತ್ರಿ ಕರ್ಫ್ಯೂ ಜಾರಿಗೆ ತರಲು ಗುಜರಾತ್ ಸರ್ಕಾರ ನಿರ್ಧರಿಸಿದೆ.
ಮಾರ್ಚ್ 17 ರಿಂದ ಗುಜರಾತ್ನ ಹಲವೆಡೆ ನೈಟ್ ಕರ್ಫ್ಯೂ ಮುಂದುವರಿಕೆ
ಇದನ್ನೂ ಓದಿ:ಕೊರೊನಾ ಆರ್ಭಟ: ಪುಣೆಯಲ್ಲಿ ನೈಟ್ ಕರ್ಫ್ಯೂ, ಶಾಲಾ-ಕಾಲೇಜ್ ಬಂದ್!
ಮಾರ್ಚ್ 17ರಿಂದ ಮಾರ್ಚ್ 31ರವರೆಗೆ ರಾತ್ರಿ 10ರಿಂದ ಬೆಳಗ್ಗೆ 6ರವರೆಗೆ ಗುಜರಾತ್ನ ನಾಲ್ಕು ಮಹಾನಗರಗಳಾದ ಅಹಮದಾಬಾದ್, ವಡೋದರಾ, ಸೂರತ್ ಮತ್ತು ರಾಜ್‌ಕೋಟ್‌ನಲ್ಲಿ ರಾತ್ರಿ ಕರ್ಫ್ಯೂ ಜಾರಿಗೆ ತರಲು ಗುಜರಾತ್ ಸರ್ಕಾರ ನಿರ್ಧರಿಸಿದೆ. ಈ ನಾಲ್ಕು ಮಹಾನಗರಗಳಲ್ಲಿ ಮಾರ್ಚ್ 16ರವರೆಗೆ (ಇಂದು) ರಾತ್ರಿ 12ರಿಂದ 6ರವರೆಗೆ ರಾತ್ರಿ ಕರ್ಫ್ಯೂ ಇರಲಿದೆ.