ಕರ್ನಾಟಕ

karnataka

ETV Bharat / bharat

G20 Summit: ಭಾರತದ ಜಿ20 ಶೃಂಗಸಭೆ ಅಧ್ಯಕ್ಷ ಸ್ಥಾನವನ್ನು ಶ್ಲಾಘಿಸಿದ ನೈಜೀರಿಯಾದ ರಾಯಭಾರಿ ಸುಲೆ

Delhi G20 Summit: ಜಿ20 ಶೃಂಗಸಭೆಗೆ ನೈಜೀರಿಯಾವನ್ನು ಅತಿಥಿ ರಾಷ್ಟ್ರವಾಗಿ ಆಹ್ವಾನಿಸಿದ್ದಕ್ಕಾಗಿ ನೈಜೀರಿಯಾದ ರಾಯಭಾರಿ ಸುಲೆ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದ ಅರ್ಪಿಸಿದರು.

By ETV Bharat Karnataka Team

Published : Sep 7, 2023, 7:11 AM IST

Nigerian Ambassador to India Ahmed Sule  Ahmed Sule speaking to ETV Bharat  Ahmed Sule hails India G20 Summit presidency  African Union to join G20 soon  ಭಾರತದ ಜಿ20 ಶೃಂಗಸಭೆ  ಜಿ20 ಶೃಂಗಸಭೆ ಅಧ್ಯಕ್ಷ ಸ್ಥಾನ  ಅಧ್ಯಕ್ಷ ಸ್ಥಾನವನ್ನು ಶ್ಲಾಘಿಸಿದ ನೈಜೀರಿಯಾದ ರಾಯಭಾರಿ  ರಾಯಭಾರಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದ  ಜಿ20 ಶೃಂಗಸಭೆಗೆ ನೈಜೀರಿಯಾವನ್ನು ಅತಿಥಿ ರಾಷ್ಟ್ರ  ರಾಜಧಾನಿ ನವದೆಹಲಿಯಲ್ಲಿ ಜಿ20 ಶೃಂಗಸಭೆ  G2O ಶೃಂಗಸಭೆಗೆ ಮುನ್ನ ಭಾರತದಲ್ಲಿನ ನೈಜೀರಿಯಾದ ರಾಯಭಾರಿ  ನೈಜೀರಿಯಾದ ರಾಯಭಾರಿ ಅಹ್ಮದ್ ಸುಲೆ  ಆಫ್ರಿಕನ್ ಯೂನಿಯನ್‌ ಕುರಿತು ಪ್ರತಿಕ್ರಿಯಿಸಿದ ಸುಲೆ
ಭಾರತದ ಜಿ20 ಶೃಂಗಸಭೆ ಅಧ್ಯಕ್ಷ ಸ್ಥಾನವನ್ನು ಶ್ಲಾಘಿಸಿದ ನೈಜೀರಿಯಾದ ರಾಯಭಾರಿ ಸುಲೆ

ನವದೆಹಲಿ:ರಾಜಧಾನಿ ನವದೆಹಲಿಯಲ್ಲಿ ಜಿ20 ಶೃಂಗಸಭೆ ಆಯೋಜಿಸಲಾಗಿದ್ದು, ಇದಕ್ಕಾಗಿ ಈಗಾಗಲೇ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಭದ್ರತಾ ವಿಷಯದಲ್ಲೂ ಸರ್ಕಾರ ಹೆಚ್ಚಿನ ಕಾಳಜಿ ವಹಿಸಿದೆ. ಪ್ರಮುಖ ರಾಷ್ಟ್ರಗಳು ಸೇರಿದಂತೆ ಇತರ ದೇಶಗಳ ಅಧ್ಯಕ್ಷರು ಮತ್ತು ಪ್ರತಿನಿಧಿಗಳು ದೆಹಲಿಗೆ ಆಗಮಿಸಿದ್ದಾರೆ ಮತ್ತು ಆಗಮಿಸುತ್ತಿದ್ದಾರೆ. ಜಿ20 ಶೃಂಗಸಭೆಗೂ ಮುನ್ನ ಭಾರತದಲ್ಲಿನ ನೈಜೀರಿಯಾದ ರಾಯಭಾರಿ ಅವರು ತಮ್ಮ ಮನದಾಳದ ಮಾತುಗಳನ್ನು ಈಟಿವಿ ಭಾರತದ ಜೊತೆ ಹಂಚಿಕೊಂಡಿದ್ದಾರೆ.

ಹೌದು, G2O ಶೃಂಗಸಭೆಗೆ ಮುನ್ನ ಭಾರತದಲ್ಲಿನ ನೈಜೀರಿಯಾದ ರಾಯಭಾರಿ ಅಹ್ಮದ್ ಸುಲೆ ಅವರು ಬುಧವಾರ ಈಟಿವಿ ಭಾರತಗೆ ನೀಡಿದ ವಿಶೇಷ ಸಂದರ್ಶನದಲ್ಲಿ, ನಮ್ಮ ರಾಷ್ಟ್ರೀಯ ಹಿತಾಸಕ್ತಿಯ ಬಗ್ಗೆ ನಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ಮತ್ತು ಜಾಗತಿಕ ದಕ್ಷಿಣ ದೇಶಗಳಿಗೆ ಅದನ್ನು ತೋರಿಸಲು G20 ನೈಜೀರಿಯಾಕ್ಕೆ ವೇದಿಕೆಯಾಗಿದೆ. ನಾವು ಸಾಮಾನ್ಯ ಕಾರ್ಯಸೂಚಿಯಲ್ಲಿ ಒಮ್ಮುಖವಾಗಲು ಈ ಜಂಟಿ ವೇದಿಕೆಯನ್ನು ಬಳಸಿಕೊಳ್ಳುತ್ತೇವೆ. ಆ ಮೂಲಕ ನಾವು ಜಾಗತಿಕ ಉತ್ತರ ದೇಶಗಳೊಂದಿಗೆ ಮಾತುಕತೆ ನಡೆಸಬಹುದು ಎಂದರು.

ಭಾರತದ ಜಿ 20 ಅಧ್ಯಕ್ಷ ಸ್ಥಾನವನ್ನು ಶ್ಲಾಘಿಸಿದ ಅಹ್ಮದ್ ಸುಲೆ, ಭಾರತದ ಪ್ರಸ್ತುತ ಅಧ್ಯಕ್ಷ ಸ್ಥಾನವು ಅತ್ಯುತ್ತಮವಾಗಿದೆ ಮತ್ತು ವಿಶ್ವಮಟ್ಟದ ಮಾನದಂಡವನ್ನು ರಚಿಸಿದ್ದಾರೆ. ಮುಂದಿನ ವರ್ಷ ಜಿ 20 ಅಧ್ಯಕ್ಷ ಸ್ಥಾನವನ್ನು ಅಲಂಕರಿಸುವ ಬ್ರೆಜಿಲ್ ದೇಶವು ಭಾರತ ದೇಶವನ್ನು ಅನುಸರಿಸಬೇಕು. ಭಾರತವು ನಾಯಕತ್ವವನ್ನು ನಿಭಾಯಿಸಿದೆ. ಅದಕ್ಕಾಗ ನಾನು ಸರ್ಕಾರಕ್ಕೆ ಧನ್ಯವಾದ ಅರ್ಪಿಸುತ್ತೇನೆ ಎಂದು ಹೇಳಿದರು.

ನೈಜೀರಿಯಾದ ರಾಯಭಾರಿ ಅವರು ಜಿ 20 ಶೃಂಗಸಭೆಗೆ ನೈಜೀರಿಯಾವನ್ನು ಅತಿಥಿ ದೇಶವಾಗಿ ಆಹ್ವಾನಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದ ಅರ್ಪಿಸಿದರು. ಬಳಿಕ ಭಾರತ ಮತ್ತು ನೈಜೀರಿಯಾ ನೈಸರ್ಗಿಕ ಮಿತ್ರರಾಷ್ಟ್ರಗಳು ಮತ್ತು ಎರಡು ದೇಶಗಳ ನಡುವಿನ ಸಂಬಂಧಗಳು ಗಟ್ಟಿಯಾಗಿವೆ ಎಂದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನೈಜೀರಿಯಾದ ಅಧ್ಯಕ್ಷ ಬೋಲಾ ಟಿನುಬು ಅವರಿಗೆ ವಿಶೇಷ ಆಹ್ವಾನವನ್ನು ನೀಡಿದರು. ನೈಜೀರಿಯಾವು ಪ್ರಮುಖ ವಿಶ್ವ ಆರ್ಥಿಕತೆಗಳ G20 ಗುಂಪಿಗೆ ಸೇರಲು ಪರಿಗಣಿಸುತ್ತದೆ ಮತ್ತು ಅದರ ಸದಸ್ಯತ್ವವು ಇನ್ನೂ ಪರಿಗಣನೆಯಲ್ಲಿದೆ.

ಆಫ್ರಿಕನ್ ಯೂನಿಯನ್‌ ಕುರಿತು ಪ್ರತಿಕ್ರಿಯಿಸಿದ ಸುಲೆ, ಯುರೋಪಿಯನ್ ಒಕ್ಕೂಟದಂತೆಯೇ ಜಿ 20 ಬ್ಲಾಕ್‌ಗೆ ಸೇರಲು ಆಫ್ರಿಕನ್ ಒಕ್ಕೂಟದ ಆಸಕ್ತಿಯನ್ನು ಬೆಂಬಲಿಸುವ ಭಾರತದ ನಾಯಕತ್ವಕ್ಕೆ ನಾನು ಧನ್ಯವಾದ ಮತ್ತು ಪ್ರಶಂಸಿಸುತ್ತೇನೆ ಎಂದು ಹೇಳಿದರು.

ಆಫ್ರಿಕನ್ ಯೂನಿಯನ್ ಸದಸ್ಯರಾಗಿ ಸೇರ್ಪಡೆಗೊಳ್ಳುವುದರೊಂದಿಗೆ G20 ದೇಶಗಳ ಗುಂಪು ಶೀಘ್ರದಲ್ಲೇ G21 ಆಗುವ ಸಾಧ್ಯತೆಯಿದೆ. 55 ದೇಶಗಳು ಆಫ್ರಿಕ ಒಕ್ಕೂಟದ ಸದಸ್ಯರಾಗಿದ್ದಾರೆ. ಪ್ರಸ್ತುತ ಜಿ 20 ಅಧ್ಯಕ್ಷ ಸ್ಥಾನವನ್ನು ಹೊಂದಿರುವ ಭಾರತವು ಆಫ್ರಿಕನ್ ಯೂನಿಯನ್ ಅನ್ನು ಪೂರ್ಣ ಸದಸ್ಯರನ್ನಾಗಿ ಸೇರಿಸಲು ಪ್ರಸ್ತಾಪಿಸಿದೆ.

ನೈಜೀರಿಯಾ ಕೂಡ G20 ಗುಂಪಿಗೆ ಸೇರಲು ಎದುರು ನೋಡುತ್ತಿದೆ ಮತ್ತು ನೈಜೀರಿಯಾ ಅಧ್ಯಕ್ಷರು G20 ಶೃಂಗಸಭೆಯ ಅವಕಾಶವನ್ನು ಬಳಸುತ್ತಾರೆ. ನೈಜೀರಿಯಾವು G20 ನಲ್ಲಿರಲು ಎಲ್ಲಾ ಗುಣಗಳನ್ನು ಹೊಂದಿದೆ. ಕಳೆದ ಸತತ ಐದು ವರ್ಷಗಳಿಂದ ಆಫ್ರಿಕನ್ ಖಂಡದಲ್ಲಿ ನಾವು ಅತಿದೊಡ್ಡ ದೇಶವಾಗಿದ್ದೇವೆ ಮತ್ತು ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿದ್ದೇವೆ. ಆದ್ದರಿಂದ ಜಿ 20 ನ ಭಾಗವಾಗಲು ನಮಗೆ ಎಲ್ಲಾ ಅರ್ಹತೆಗಳಿವೆ ಎಂದು ಸುಲೆ ಹೇಳಿದರು.

ನೈಜೀರಿಯಾ G20 ಬ್ಲಾಕ್‌ಗೆ ಸೇರಿದರೆ ದಕ್ಷಿಣ ಆಫ್ರಿಕಾದ ನಂತರ ವಿಶ್ವದ ಅತ್ಯಂತ ಕೈಗಾರಿಕೀಕರಣಗೊಂಡ ರಾಷ್ಟ್ರಗಳ ಗುಂಪಿಗೆ ಸೇರುವ ಎರಡನೇ ಆಫ್ರಿಕನ್ ದೇಶವಾಗಿದೆ. ವಿಶ್ವ ಬ್ಯಾಂಕ್ ಪ್ರಕಾರ, ನೈಜೀರಿಯಾ ಆಫ್ರಿಕಾದಲ್ಲಿ ಅತಿ ಹೆಚ್ಚು ಜಿಡಿಪಿ ಹೊಂದಿರುವ ರಾಷ್ಟ್ರವಾಗಿದೆ.

ಓದಿ:ಜಿ20 ಶೃಂಗಸಭೆ: ವಿದೇಶಿ ಪ್ರತಿನಿಧಿಗಳ ರಕ್ಷಣೆಗಾಗಿ ಶಕ್ತಿಯುತ ವಿಶೇಷ ಪಡೆಗಳ ನಿಯೋಜನೆ: ಭದ್ರತೆ ಹೇಗಿರುತ್ತೆ ಗೊತ್ತಾ?

ABOUT THE AUTHOR

...view details