ಕರ್ನಾಟಕ

karnataka

ETV Bharat / bharat

ಲವ್ ಜಿಹಾದ್ ಪ್ರಕರಣ: ಧರ್ಮಗುರು ಸೇರಿದಂತೆ ಇತರರ ತನಿಖೆಗಾಗಿ ಬಾಂಗ್ಲಾದೇಶ ತಲುಪಿದ ಎನ್‌ಐಎ ತಂಡ - ನವದೆಹಲಿ

ಕಳೆದ ವರ್ಷ ಆಗಸ್ಟ್‌ನಲ್ಲಿ ಲವ್ ಜಿಹಾದ್ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಭಾರತೀಯ ಮಹಿಳೆ ಮತ್ತು ನಫೀಸ್ ಎಂಬ ಬಾಂಗ್ಲಾದೇಶದ ರಾಜಕಾರಣಿಯ ಮಗ ಹಾಗೂ ಆತನ ತಂದೆ ಸೇರಿದಂತೆ ಧರ್ಮಗುರುವಿನ ವಿಚಾರಣೆ ನಡೆಸಲು ಈ ತಂಡ ಬಾಂಗ್ಲಾದೇಶಕ್ಕೆ ಹೋಗಿದೆ.

ಲವ್ ಜಿಹಾದ್ ಪ್ರಕರಣ
ಲವ್ ಜಿಹಾದ್ ಪ್ರಕರಣ

By

Published : Jan 14, 2021, 11:22 PM IST

Updated : Dec 14, 2022, 4:35 PM IST

ನವದೆಹಲಿ: ಲವ್​ ಜಿಹಾದ್​ ಸಂಬಂಧ ತನಿಖೆ ನಡೆಸುವ ಉದ್ದೇಶದಿಂದ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತಂಡ ಬಾಂಗ್ಲಾದೇಶಕ್ಕೆ ಹೋಗಿದೆ.

ಕಳೆದ ವರ್ಷ ಆಗಸ್ಟ್‌ನಲ್ಲಿ ಲವ್ ಜಿಹಾದ್ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಭಾರತೀಯ ಮಹಿಳೆ ಮತ್ತು ನಫೀಸ್ ಎಂಬ ಬಾಂಗ್ಲಾದೇಶದ ರಾಜಕಾರಣಿಯ ಮಗ ಹಾಗೂ ಆತನ ತಂದೆ ಸೇರಿದಂತೆ ಧರ್ಮಗುರುವಿನ ವಿಚಾರಣೆ ನಡೆಸಲು ಈ ತಂಡ ಬಾಂಗ್ಲಾದೇಶಕ್ಕೆ ಹೋಗಿದೆ.

ಎನ್‌ಐಎ ಇತ್ತೀಚೆಗಷ್ಟೇ ಬಾಂಗ್ಲಾದಲ್ಲಿರುವ ಮಹಿಳೆಯನ್ನು ವಾಟ್ಸಾಪ್ ಮೂಲಕ ಪ್ರಶ್ನಿಸಿತ್ತು. ಈ ಮಹಿಳೆ ಚೆನ್ನೈ ಮೂಲದ ಉದ್ಯಮಿ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಹೆಚ್ಚಿನ ತನಿಖಾ ದೃಷ್ಟಿಯಿಂದ ಅಲ್ಲಿಗೆ ತೆರಳುತ್ತಿದ್ದು, ಮಹಿಳೆಯು ತನ್ನ ಇಚ್ಚೆಯಂತೆ ದುವೆಯಾಗಿದ್ದಾಳಾ? ಅಥವಾ ಲಂಡನ್​ನಿಂದ ಅಪಹರಿಸಲ್ಪಟ್ಟಿದ್ದಾಳಾ? ಎಂದು ಎನ್ಐಎ ಪ್ರಶ್ನಿಸಲಿದೆ.

ಈಕೆ ಉನ್ನತ ವ್ಯಾಸಂಗಕ್ಕಾಗಿ ಲಂಡನ್​ನಲ್ಲಿ ವಾಸಿಸುತ್ತಿದ್ದಳು. ನಂತರ ಬಾಂಗ್ಲಾದೇಶಕ್ಕೆ ಆಕೆಯನ್ನು ಕರೆದೊಯ್ಯಲಾಗಿತ್ತು.

ಬಾಲಕಿಯ ತಂದೆ ಕಳೆದ ವರ್ಷ ಮೇ ತಿಂಗಳಲ್ಲಿ ಚೆನ್ನೈ ಕೇಂದ್ರ ಅಪರಾಧ ಶಾಖೆಗೆ ದೂರು ನೀಡಿದ್ದರು. ಲಂಡನ್‌ನಲ್ಲಿ ಓದುತ್ತಿದ್ದ ತನ್ನ ಮಗಳು ಬಲವಂತವಾಗಿ ಇಸ್ಲಾಂಗೆ ಮತಾಂತರಗೊಂಡಿದ್ದಾಳೆ. ನ್ಯಾಯ ಒದಗಿಸಿ ಎಂದು ಮನವಿ ಮಾಡಿದ್ದರು.

Last Updated : Dec 14, 2022, 4:35 PM IST

ABOUT THE AUTHOR

...view details