ಶ್ರೀನಗರ:ಹಿಜ್ಬುಲ್ ಮುಜಾಹಿದ್ದೀನ್ ಮುಖ್ಯಸ್ಥ ಸೈಯದ್ ಸಲಾವುದ್ದೀನ್ನ ಇಬ್ಬರು ಪುತ್ರರ ಆಸ್ತಿಯನ್ನು ಎನ್‌ಐಎ ಸೋಮವಾರ ಮುಟ್ಟುಗೋಲು ಹಾಕಿಕೊಂಡಿದೆ. ಉಗ್ರಗಾಮಿಗಳ ಪರ ಮತ್ತು ನಿಷೇಧಿತ ಸಂಘಟನೆ ಹಿಜ್ಬುಲ್ ಮುಜಾಹಿದ್ದೀನ್ ಮುಖ್ಯಸ್ಥ, ಯುನೈಟೆಡ್ ಜಿಹಾದ್‌ನ ಅಧ್ಯಕ್ಷ ಸೈಯದ್ ಸಲಾವುದ್ದೀನ್ನ ಇಬ್ಬರು ಪುತ್ರರಿಗೆ ಸೇರಿದ ಎರಡು ಆಸ್ತಿಗಳನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ವಶಪಡಿಸಿಕೊಳ್ಳಲಾಗಿದೆ ಎಂದು ಎನ್ಐಎ ವಕ್ತಾರರು ತಿಳಿಸಿದರು.
ಯುಎಪಿಎ ಕಾಯ್ದೆಯಡಿ ಆಸ್ತಿಗಳ ಜಪ್ತಿ:ಎನ್‌ಐಎ ವಕ್ತಾರರ ಪ್ರಕಾರ, ಬುದ್ಗಾಮ್ ಜಿಲ್ಲೆಯ ಸುಯಾಬೋಗ್ ಮತ್ತು ಶ್ರೀನಗರದ ನರಸಿಂಗ್‌ಗಢ್ ರಾಮ್‌ಬಾಗ್‌ನಲ್ಲಿರುವ ಶಾಹಿದ್ ಯೂಸುಫ್ ಮತ್ತು ಸೈಯದ್ ಅಹ್ಮದ್ ಶಕೀಲ್ ಅವರ ಆಸ್ತಿಗಳನ್ನು ಯುಎಪಿಎ ಕಾಯ್ದೆಯಡಿ ಜಪ್ತಿ ಮಾಡಲಾಗಿದೆ. ಹಿಜ್ಬುಲ್ ಮುಜಾಹಿದ್ದೀನ್ ಮುಖ್ಯಸ್ಥನ ಇಬ್ಬರು ಪುತ್ರರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.
ತಿಹಾರ್ ಜೈಲಿನಲ್ಲಿರುವ ಸೈಯದ್ ಸಲಾವುದ್ದೀನ್ನ ಇಬ್ಬರು ಪುತ್ರರು:ಶಾಹಿದ್ ಯೂಸುಫ್ ಮತ್ತು ಸೈಯದ್ ಅಹ್ಮದ್ ಶಕೀಲ್ರನ್ನು ಅಕ್ಟೋಬರ್ 2017 ಮತ್ತು ಆಗಸ್ಟ್ 2018ರಲ್ಲಿ ಬಂಧಿಸಿದ ನಂತರ ದೆಹಲಿ ತಿಹಾರ್ ಜೈಲಿನಲ್ಲಿ ಇಡಲಾಗಿದೆ ಎಂದು ಅವರು ಹೇಳಿದರು. ಈ ಇಬ್ಬರ ವಿರುದ್ಧ ಕ್ರಮವಾಗಿ 20 ಏಪ್ರಿಲ್ 2018 ಮತ್ತು 20 ನವೆಂಬರ್ 2018 ರಂದು ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಲಾಗಿತ್ತು. ಇಬ್ಬರೂ ತಮ್ಮ ತಂದೆಯ ಸಹಚರರ ಮತ್ತು ಹಿರಿಯ ಹಿಜ್ಬುಲ್ ಮುಜಾಹಿದ್ದೀನ್ ಕಾರ್ಯಕರ್ತರ ಸಹಾಯದಿಂದ ವಿದೇಶದಿಂದ ಹಣವನ್ನು ಪಡೆಯುತ್ತಿದ್ದರು ಎಂದು ಎನ್ಐಎ ವಕ್ತಾರರು ಮಾಹಿತಿ ನೀಡಿದರು.