ಕರ್ನಾಟಕ

karnataka

ETV Bharat / bharat

ಐಎಸ್ ಸಂಪರ್ಕದಲ್ಲಿ ಯುವಕ-ಯುವತಿಯರು..ದೇಶ ವಿರೋಧಿ ಚಟುವಟಿಕೆಯ ತಾಣವಾಗುತ್ತಿದೆಯಾ ಕಾಶ್ಮೀರ, ಮಂಗಳೂರು, ಬೆಂಗಳೂರು! - ರಾಷ್ಟ್ರೀಯ ತನಿಖಾ ಸಂಸ್ಥೆ ಸುದ್ದಿ

ರಾಷ್ಟ್ರೀಯ ತನಿಖಾ ಸಂಸ್ಥೆಯು ಮೂರು ವಿಭಿನ್ನ ಸ್ಥಳಗಳಲ್ಲಿ ಕನಿಷ್ಠ ಹನ್ನೆರಡು ಜನರನ್ನು ಇಸ್ಲಾಮಿಕ್ ಸ್ಟೇಟ್ಸ್ ಕಾರ್ಯಕರ್ತರೊಂದಿಗೆ ಸಂಪರ್ಕ ಹೊಂದಿರುವುದರ ಮೇಲೆ ನಿಕಟ ನಿಗಾ ಇರಿಸಲಾಗಿದೆ ಎಂದು ಬಹಿರಂಗಪಡಿಸಿದೆ.

NIA reveals several under scanner over IS links  IS links in Kashmir Mangaluru Bengaluru ಇಸ್ಲಾಮಿಕ್ ಸ್ಟೇಟ್ಸ್ ಸಂಪರ್ಕ್​ ಬಹಿರಂಗ ಪಡಿಸಿದ ಎನ್​ಐಎ  ಐಎಸ್​ ಸಂಪರ್ಕದಲ್ಲಿ ಬೆಂಗಳೂರು ಮಂಗಳೂರು ಮತ್ತು ಕಾಶ್ಮೀರ್
ರಾಷ್ಟ್ರೀಯ ತನಿಖಾ ಸಂಸ್ಥೆ

By

Published : Jan 5, 2022, 6:55 AM IST

ನವದೆಹಲಿ:ಇಸ್ಲಾಮಿಕ್ ಸ್ಟೇಟ್ಸ್ (ಐಎಸ್) ಕಾರ್ಯಕರ್ತರೊಂದಿಗೆ ಸಂಪರ್ಕ ಹೊಂದಿದ್ದರ ಜಾಡು ಹಿಡಿದಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಭಾರತದಾದ್ಯಂತ ಮೂರು ವಿಭಿನ್ನ ಸ್ಥಳಗಳಲ್ಲಿನ ಕನಿಷ್ಠ 12 ಜನರ ಮೇಲೆ ನಿಕಟವಾದ ನಿಗಾ ಇರಿಸಿದೆ.

ಶಂಕಿತರು ಭಾರತ ವಿರೋಧಿ ಚಟುವಟಿಕೆಗಳನ್ನು ನಡೆಸಲು ಹಣ ಸಂಗ್ರಹಿಸುವುದರ ಜೊತೆಗೆ ಯುವಕರ ಆಮೂಲಾಗ್ರೀಕರಣ ಮತ್ತು ಹೊಸ ನೇಮಕಾತಿಯಲ್ಲಿ ತೊಡಗಿದ್ದಾರೆ ಎಂದು ಹೊಸದಿಲ್ಲಿಯ ಹಿರಿಯ ಎನ್‌ಐಎ ಅಧಿಕಾರಿಯೊಬ್ಬರು ಮಂಗಳವಾರ ಈಟಿವಿ ಭಾರತ್‌ಗೆ ತಿಳಿಸಿದ್ದಾರೆ.

ಓದಿ:ತವರಿನಲ್ಲೇ ನ್ಯೂಜಿಲ್ಯಾಂಡ್​ಗೆ ಮರ್ಮಾಘಾತ: ಕಿವೀಸ್​ ನೆಲದಲ್ಲಿ ಐತಿಹಾಸಿಕ ಟೆಸ್ಟ್​ ಗೆದ್ದ ಬಾಂಗ್ಲಾದೇಶ!

ಕಾಶ್ಮೀರ, ಮಂಗಳೂರು ಮತ್ತು ಬೆಂಗಳೂರಿನಲ್ಲಿರುವ ಶಂಕಿತರು ಐಎಸ್ ಕಾರ್ಯಕರ್ತರೊಂದಿಗೆ ಸಂಪರ್ಕ ಹೊಂದಿದ್ದಾರೆ ಮತ್ತು ಅವರ ಮೇಲೆ ನಿಗಾ ಇರಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ವಾಸ್ತವವಾಗಿ, ಕಳೆದ ವರ್ಷ ಆಗಸ್ಟ್‌ನಲ್ಲಿ ಎನ್‌ಐಎ ಈ ಮೂರು ಸ್ಥಳಗಳು ಸೇರಿದಂತೆ ಐದು ವಿಭಿನ್ನ ಸ್ಥಳಗಳಲ್ಲಿ ಬೃಹತ್ ಶೋಧ ಕಾರ್ಯಾಚರಣೆ ನಡೆಸಿತು ಮತ್ತು ಭಾರತ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಕ್ಕಾಗಿ ಏಳು ಜನರನ್ನು ಬಂಧಿಸಿತು.

ಬಂಧಿತರಲ್ಲಿ ಇಬ್ಬರು ಮಹಿಳೆಯರು (ಮಿಝಾ ಸಿದ್ದಿಕ್ ಮತ್ತು ಶೆಫಾ ಹಾರಿಸ್) ಮತ್ತು ಐವರು ಪುರುಷರು ಸೇರಿದ್ದಾರೆ. ಟೆಲಿಗ್ರಾಮ್, ಇನ್‌ಸ್ಟಾಗ್ರಾಮ್ ಮತ್ತು ಹೂಪ್ ಆ್ಯಪ್​ಗಳ ಮೂಲಕ ಭಾರತ ವಿರೋಧಿ ಮತ್ತು ಐಎಸ್ ಪ್ರಚಾರದಲ್ಲಿ ತೊಡಗಿಸಿಕೊಂಡಿರುವುದು ವಿಚಾರಣೆಯಲ್ಲಿ ಕಂಡುಬಂದಿದೆ ಎಂದು ಅಧಿಕಾರಿ ಹೇಳಿದ್ದಾರೆ.

ಓದಿ:ಮಾಲ್​, ಸಿನಿಮಾ ಮಂದಿರಕ್ಕೆ ಶೇ.50ರಷ್ಟು ಮಿತಿ... ಸರ್ಕಾರದ ಕೈಗೊಂಡ ಕ್ರಮಗಳ ವಿವರ ಇಲ್ಲಿದೆ

ಮಹಿಳಾ ಸದಸ್ಯರ ಪಾಲ್ಗೊಳ್ಳುವಿಕೆ ಪರಿಸ್ಥಿತಿ ಇನ್ನಷ್ಟು ಹದಗೆಡಿಸಿದೆ. ಐಎಸ್‌ ಸಂಪರ್ಕ ಹೊಂದಿದ ಸದಸ್ಯರು ಆನ್‌ಲೈನ್ ಮೂಲಕ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ. ಅವರು ಐಎಸ್ ಪ್ರಚಾರ ಚಾನೆಲ್ ಅನ್ನು ಮುನ್ನಡೆಸುತ್ತಾರೆ ಮತ್ತು ಯುವಕರನ್ನು ಆಮೂಲಾಗ್ರಗೊಳಿಸುತ್ತಾರೆ. ಅದರ ಜೊತೆಗೆ ಅವರು ಹಣ ಕೂಡಾ ಸಂಗ್ರಹಿಸುತ್ತಾರೆ ಮತ್ತು ಯುವಕರನ್ನು ನೇಮಿಸಿಕೊಳ್ಳುತ್ತಾರೆ ಎಂದು ಅಧಿಕಾರಿಯೊಬ್ಬರು ಈ ಟಿವಿ ಭಾರತಕ್ಕೆ ತಿಳಿಸಿದ್ದಾರೆ.

ಎನ್‌ಐಎ ಮತ್ತು ಕರ್ನಾಟಕ ಪೊಲೀಸ್​ ಜಂಟಿ ಕಾರ್ಯಾಚರಣೆಯಲ್ಲಿ ಸೋಮವಾರ ಐಎಸ್ ಕಾರ್ಯಕರ್ತೆ ದೀಪ್ತಿ ಮಾರ್ಲಾ ಅಲಿಯಾಸ್ ಮರ್ಯಮ್ ಎಂಬ ಮಹಿಳೆಯನ್ನು ಮಂಗಳೂರಿನಲ್ಲಿ ಬಂಧಿಸಿದೆ.

For All Latest Updates

ABOUT THE AUTHOR

...view details