ಕರ್ನಾಟಕ

karnataka

ETV Bharat / bharat

ಭಯೋತ್ಪಾದಕರ ನಿಧಿ ಪ್ರಕರಣ.. ಜಮ್ಮು ಕಾಶ್ಮೀರದ ಹಲವು ಸ್ಥಳಗಳ ಮೇಲೆ ಎನ್​​ಐಎ ದಾಳಿ - ಭಯೋತ್ಪಾದಕರ ನಿಧಿ ಪ್ರಕರಣ

ದಕ್ಷಿಣ ಕಾಶ್ಮೀರದ ಕುಲ್ಗಾಮ್ ಮತ್ತು ಪುಲ್ವಾಮಾ ಜಿಲ್ಲೆಗಳು ಹಾಗೂ ಉತ್ತರ ಕಾಶ್ಮೀರದ ಕೆಲವು ಪ್ರದೇಶಗಳಲ್ಲಿ ಹಾಗೂ ಜಮ್ಮುವಿನ ಹಲವು ಸ್ಥಳಗಳಲ್ಲಿ ದಾಳಿ ನಡೆಸಿ, ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದೆ ಎಂದು ವರದಿಯಾಗಿದೆ. ಈ ಸಂಬಂಧ ಎನ್‌ಐಎ ಒಬ್ಬ ವ್ಯಕ್ತಿಯನ್ನು ಬಂಧಿಸಿದೆ.

nia raids several locations in kashmir
ಭಯೋತ್ಪಾದಕರ ನಿಧಿ ಪ್ರಕರಣ.. ಜಮ್ಮು ಕಾಶ್ಮೀರದ ಹಲವು ಸ್ಥಳಗಳ ಮೇಲೆ ಎನ್​​ಐಎ ದಾಳಿ

By

Published : Dec 23, 2022, 10:26 AM IST

ನವದೆಹಲಿ: ಲಷ್ಕರ್-ಎ-ತೊಯ್ಬಾ ಮತ್ತು ಹಿಜ್ಬ್-ಉಲ್-ಮುಜಾಹಿದ್ದೀನ್ ಮತ್ತು ಇತರ ಭಯೋತ್ಪಾದಕ ಗುಂಪುಗಳನ್ನೊಳಗೊಂಡಿರುವ ಭಯೋತ್ಪಾದಕ ನಿಧಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಷ್ಟ್ರೀಯ ತನಿಖಾ ಸಂಸ್ಥೆ ಎನ್​​ಐಎ ಜಮ್ಮು ಮತ್ತು ಕಾಶ್ಮೀರದ ಅನೇಕ ಸ್ಥಳಗಳಲ್ಲಿ ದಾಳಿ ನಡೆಸುತ್ತಿದೆ.

ದಕ್ಷಿಣ ಕಾಶ್ಮೀರದ ಕುಲ್ಗಾಮ್ ಮತ್ತು ಪುಲ್ವಾಮಾ ಜಿಲ್ಲೆಗಳು ಹಾಗೂ ಉತ್ತರ ಕಾಶ್ಮೀರದ ಕೆಲವು ಪ್ರದೇಶಗಳಲ್ಲಿ ಹಾಗೂ ಜಮ್ಮುವಿನ ಹಲವು ಸ್ಥಳಗಳಲ್ಲಿ ದಾಳಿ ನಡೆಸಿ, ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದೆ ಎಂದು ವರದಿಯಾಗಿದೆ. ಈ ಸಂಬಂಧ ಎನ್‌ಐಎ ಒಬ್ಬ ವ್ಯಕ್ತಿಯನ್ನು ಬಂಧಿಸಿದೆ.

ಇದೊಂದು ಭಯೋತ್ಪಾದಕ ನಿಧಿ ಪ್ರಕರಣವಾಗಿದ್ದು, ಅನೇಕ ಭಯೋತ್ಪಾದಕ ಗುಂಪುಗಳಾದ ಲಷ್ಕರ್-ಎ-ತೈಬಾ ಮತ್ತು ಹಿಜ್ಬ್-ಉಲ್-ಮುಜಾಹಿದ್ದೀನ್ ವಿರುದ್ಧ ನಾವು ಕ್ರಮ ತೆಗೆದುಕೊಳ್ಳುತ್ತಿದ್ದೇವೆ ಎಂದು ಎನ್​ಐಎ ಮೂಲಗಳು ಹೇಳಿವೆ. ಈ ಹಿಂದೆ ಎನ್‌ಐಎ ಹಲವು ಎಫ್‌ಐಆರ್‌ಗಳನ್ನು ದಾಖಲಿಸಿತ್ತು. ಈ ಎಲ್ಲ ಎಫ್‌ಐಆರ್‌ಗಳ ಆಧಾರದ ಮೇಲೆ ಈ ದಾಳಿ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಇದನ್ನು ಓದಿ:ನಕಲಿ ಛಾಪಾ ಕಾಗದ ಹಗರಣ: ವೆಬ್ ಸರಣಿ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ತೆಲಗಿ ಪುತ್ರಿ, ಇಂದು ವಿಚಾರಣೆ ಸಾಧ್ಯತೆ

ABOUT THE AUTHOR

...view details