ನವದೆಹಲಿ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹಚರರು ಮತ್ತು ಕೆಲವು ಹವಾಲಾ ಆಪರೇಟರ್ ನೆಲೆಗಳ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಇಂದು ದಾಳಿ ನಡೆಸಿದ್ದು, ಓರ್ವನನ್ನು ಬಂಧಿಸಿದೆ. ಸಲೀಂ ಬಂಧಿತ ದಾವೂದ್ ಇಬ್ರಾಹಿಂನ ಸಹಚರ. ಮುಂಬೈನಲ್ಲಿರುವ ಈತನ ನಿವಾಸದ ಮೇಲೆ ಎನ್‌ಐಎ ದಾಳಿ ನಡೆಸಿ ಕೆಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದೆ.
ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹಚರರ ನೆಲೆಗಳ ಮೇಲೆ ಎನ್‌ಐಎ ದಾಳಿ: ಓರ್ವನ ಬಂಧನ - ದಾವೂದ್ ಇಬ್ರಾಹಿಂ ಸಹಚರರ ಹಲವು ಸ್ಥಳಗಳಲ್ಲಿ ಎನ್‌ಐಎ ದಾಳಿ
ದಾವೂದ್ ಸಹಚರರು ಮತ್ತು ಹವಾಲಾ ಆಪರೇಟರ್‌ಗಳಿಗೆ ಸಂಬಂಧಿಸಿದ ಮುಂಬೈನ ಪ್ರಮುಖ ಸ್ಥಳಗಳಲ್ಲಿ ದಾಳಿ ನಡೆಸಲಾಗುತ್ತಿದೆ ಎಂದು ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತಿಳಿಸಿದೆ.
ಮುಂಬೈನ 20ಕ್ಕೂ ಹೆಚ್ಚು ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಮೂಲಗಳ ಪ್ರಕಾರ, ನಗರದ ನಾಗ್ಪಾಡಾ, ಗೋರೆಗಾಂವ್, ಬೋರಿವಲಿ, ಸಾಂತಾಕ್ರೂಜ್, ಮುಂಬ್ರಾ, ಭೇಂಡಿ ಬಜಾರ್ ಮತ್ತು ಹಲವಾರು ಇತರ ಸ್ಥಳಗಳಲ್ಲಿ ದಾಳಿ ನಡೆಸಲಾಗುತ್ತಿದೆ. ಹಲವಾರು ಹವಾಲಾ ಆಪರೇಟರ್‌ಗಳು ಮತ್ತು ಡ್ರಗ್ ಪೆಡ್ಲರ್‌ಗಳು ದಾವೂದ್‌ನೊಂದಿಗೆ ನಿಕಟ ಸಂಬಂಧ ಹೊಂದಿದ್ದಾರೆ ಎನ್ನಲಾಗಿತ್ತು. ಈ ಸಂಬಂಧ ಫೆಬ್ರವರಿಯಲ್ಲಿ ಎನ್‌ಐಎ ಪ್ರಕರಣ ದಾಖಲಿಸಿದೆ. ಗೃಹ ಸಚಿವಾಲಯದ ಆದೇಶದ ಮೇರೆಗೆ, ದಾವೂದ್ ಇಬ್ರಾಹಿಂ, ಡಿ-ಕಂಪನಿ ವಿರುದ್ಧವೂ ಎನ್ಐಎ ಪ್ರಕರಣ ದಾಖಲಿಸಿದ್ದು, ತನಿಖೆ ನಡೆಯುತ್ತಿದೆ.
ಇದನ್ನೂ ಓದಿ:ದಾವೂದ್ ಇಬ್ರಾಹಿಂ ಜೊತೆ ನಂಟು ಕೇಸ್.. ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ