ಶ್ರೀನಗರ, ಜಮ್ಮು ಕಾಶ್ಮೀರ :ಹಲವು ತಿಂಗಳುಗಳಿಂದ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ವಶದಲ್ಲಿರುವ ಮಾನವ ಹಕ್ಕುಗಳ ಕಾರ್ಯಕರ್ತ ಖುರ್ರಂ ಪರ್ವೇಜ್ ಅವರ ನಿವಾಸದ ಮೇಲೆ ಎನ್‌ಐಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಭಯೋತ್ಪಾದನೆಗೆ ಹಣಕಾಸು ನೆರವು ನೀಡಿದ ಆರೋಪದ ಮೇಲೆ ಖುರ್ರಂ ಪರ್ವೇಜ್ ಅವರನ್ನು ಕಳೆದ ನವೆಂಬರ್ನಿಂದ ಎನ್ಐಎ ವಶಕ್ಕೆ ಪಡೆದಿದ್ದು, ತಿಹಾರ್ ಜೈಲಿನಲ್ಲಿ ಇರಿಸಲಾಗಿದೆ.
ಶುಕ್ರವಾರವಷ್ಟೇ ಎನ್‌ಐಎ ನ್ಯಾಯಾಲಯ ಖುರ್ರಂ ಪರ್ವೇಜ್ ಬಂಧನವನ್ನು ಮತ್ತಷ್ಟು ವಿಸ್ತರಿಸಿದೆ. ಖುರ್ರಂ ಪರ್ವೇಜ್ ಅವರನ್ನು ನವೆಂಬರ್ 22, 2021ರಂದು ಬಂಧಿಸಲಾಗಿತ್ತು. ಅದಕ್ಕೂ ಮುನ್ನ ಖುರ್ರಂ ಪರ್ವೇಜ್ ಸಂಬಂಧಿಸಿದ ಶ್ರೀನಗರದಲ್ಲಿರುವ ಅವರ ಮನೆ ಮತ್ತು ಜೆಕೆಸಿಸಿಎಸ್ ಕಚೇರಿಯಲ್ಲಿ ದಿನವಿಡೀ ಶೋಧ ನಡೆಸಲಾಗಿತ್ತು.