ಕರ್ನಾಟಕ

karnataka

ETV Bharat / bharat

ಜಮ್ಮುಕಾಶ್ಮೀರದಲ್ಲಿ 2ನೇ ದಿನವೂ ಎನ್‌ಐಎ ಶೋಧ; ಮತ್ತೆ ಮೂವರ ಬಂಧನ - ಜಮ್ಮು ಕಾಶ್ಮೀರ

ಜಮ್ಮುಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯಲ್ಲಿ ಎನ್‌ಐಎ 2ನೇ ದಿನದವಾದ ಇಂದೂ ಕೂಡ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಮೂವರವನ್ನು ವಶಕ್ಕೆ ಪಡೆದಿದೆ. ನಿನ್ನೆಯಷ್ಟೇ ಮೂರನ್ನು ಬಂಧಿಸಿರುವ ಅಧಿಕಾರಿಗಳು, ತನಿಖೆಗೆ ಸಂಬಂಧಿಸಿದಂತೆ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದೆ.

nia raids continue in kashmir for second day three detained
ಜಮ್ಮು-ಕಾಶ್ಮೀರದಲ್ಲಿ 2ನೇ ದಿನವೂ ಎನ್‌ಐಎ ಶೋಧ; ಮತ್ತೆ ಮೂವರು ಬಂಧನ

By

Published : Jul 12, 2021, 10:45 PM IST

ಶ್ರೀನಗರ: ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಸತತ ಎರಡನೇ ದಿನ ಜಮ್ಮು ಮತ್ತು ಕಾಶ್ಮೀರದಲ್ಲಿ ಶೋಧ ಕಾರ್ಯ ಮುಂದುವರಿಸಿದೆ. ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯ ಎರಡು ಸ್ಥಳಗಳಲ್ಲಿ ತೀವ್ರ ಶೋಧ ನಡೆಸಿ ಉಗ್ರರಿಗೆ ಸಹಕಾರ ನೀಡುತ್ತಿದ್ದ ಶಂಕೆಯ ಮೇಲೆ ಮೂವರನ್ನು ಬಂಧಿಸಲಾಗಿದೆ.

ಐಸಿಸ್ ಬಳಸುತ್ತಿರುವ 'ವಾಯ್ಸ್ ಆಫ್ ಹಿಂದ್' ನಿಯತಕಾಲಿಕೆಗೆ ಸಂಬಂಧಿಸಿದ ಪ್ರಕರಣದಲ್ಲಿ ಭಯೋತ್ಪಾದಕರೊಂದಿಗೆ ಸಹಕರಿಸಿದ ಶಂಕೆ ಮೇಲೆ ಮೂವರು ಅರೆಸ್ಟ್‌ ಮಾಡಿದೆ. ಸ್ಥಳೀಯ ನಿವಾಸಿಗಳಾದ ಅಕಿಬ್ ಅಹ್ಮದ್ ಸೋಫಿ (ಅಲಿಯಾಸ್ ನದೀಮ್), ಮೊಹಮ್ಮದ್ ಆರೀಫ್ ಸೋಫಿ ಸಹೋದರರ ಮನೆಯಲ್ಲಿ ತಪಾಸಣೆ ನಡೆಸಲಾಗಿದೆ ಎಂದು ಎನ್ಐಎ ಮೂಲಗಳು ತಿಳಿಸಿವೆ. ಬಳಿಕ ಇಬ್ಬರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ಏತನ್ಮಧ್ಯೆ, ಗಂಜಿವಾರಾದಲ್ಲಿ ಭೌಗೋಳಿಕ ಮುದ್ರಣಾಲಯದ ಮೇಲೆ ದಾಳಿ ನಡೆಸಿ ಆರೀಫ್ ಹುಸೇನ್ ಖಾದ್ರಿ ಎಂಬ ವ್ಯಕ್ತಿಯನ್ನು ಬಂಧಿಸಲಾಗಿದೆ. ಲ್ಯಾಪ್‌ಟಾಪ್ ಮತ್ತು ಹಲವು ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ಜಮ್ಮು-ಕಾಶ್ಮೀರದಲ್ಲಿ 2ನೇ ದಿನವೂ ಎನ್‌ಐಎ ಶೋಧ; ಮತ್ತೆ ಮೂವರು ಬಂಧನ

ನಿನ್ನೆಯೂ ಎನ್ಐಎ ಕಾಶ್ಮೀರದ ಹಲವಾರು ಭಾಗಗಳಲ್ಲಿ ವ್ಯಾಪಕ ಶೋಧ ನಡೆಸಿತು. ಯುವಕರನ್ನು ಭಯೋತ್ಪಾದನಾ ಸಿದ್ಧಾಂತಕ್ಕೆ ಪ್ರಚೋದಿಸುತ್ತಿದ್ದ ಆರೋಪದ ಮೇಲೆ ಮೂವರನ್ನು ಬಂಧಿಸಿತ್ತು.ಉಮರ್ ನಿಸಾರ್, ತನ್ವೀರ್ ಅಹ್ಮದ್ ಭಟ್ ಮತ್ತು ರಮೀಜ್ ಅಹ್ಮದ್ ಅವರನ್ನು ಬಂಧಿಸಲಾಗಿದೆ. ಇವರೆಲ್ಲರೂ ಅನಂತ್‌ನಾಗ್ ಜಿಲ್ಲೆಯವರು. ಡಿಜಿಟಲ್ ಸಾಧನಗಳು ಐಸಿಸ್ ನೊಂದಿಗೆ ಸಂಪರ್ಕ ಹೊಂದಿದ್ದರು ಎನ್ನಲಾಗಿದೆ. ಇವರಿಂದ ಟೀ ಶರ್ಟ್‌ಗಳನ್ನು ವಶಪಡಿಸಿಕೊಂಡಿದೆ ಎಂದು ವರದಿಯಾಗಿದೆ.

ABOUT THE AUTHOR

...view details