ನವದೆಹಲಿ:ಪಾಕಿಸ್ತಾನ ಮೂಲದ ಹೊಸ ಉಗ್ರಗಾಮಿ ಸಂಘಟನೆ ಲಷ್ಕರ್-ಇ-ಮುಸ್ತಫಾ (ಎಲ್‌ಇಎಂ)ಗೆ ಬರುತ್ತಿರುವ ಹಣಕಾಸಿನ ಮೂಲವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತನಿಖೆ ಮಾಡುತ್ತಿದ್ದು, ಈ ವಿಚಾರದಲ್ಲಿ ಮೌಲಾನಾ ಮಸೂದ್ ಅಜರ್ನ ಸಹೋದರ ಮುಫ್ತಿ ರೌಫ್ನ ಪಾತ್ರವನ್ನು ಹುಡುಕುತ್ತಿದೆ.
ಎನ್ಐಎಯ ಹಿರಿಯ ಅಧಿಕಾರಿಯೊಬ್ಬರು 'ಈಟಿವಿ ಭಾರತ'ದೊಂದಿಗೆ ಈ ಕುರಿತು ಮಾಹಿತಿ ನೀಡಿದ್ದು, ಹಣದ ಜಾಡನ್ನು ತನಿಖೆ ಮಾಡಲಾಗುತ್ತಿದೆ ಮತ್ತು ಆದರೆ ಈ ಕುರಿತು ಹೆಚ್ಚಿನ ಮಾಹಿತಿ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಎನ್‌ಐಎ ಸಲ್ಲಿಸಿದ ಇತ್ತೀಚಿನ ಚಾರ್ಜ್ಶೀಟ್ನಲ್ಲಿ, ಲಷ್ಕರ್-ಇ-ಮುಸ್ತಫಾ ಇಂಡಿಯಾ ಮುಖ್ಯಸ್ಥ ಹಿದಾಯತ್ ಉಲ್ಲಾ ಮಲಿಕ್ ಅಥವಾ ಹಸ್ನೈನ್, ಮೌಲಾನಾ ಮಸೂದ್ ಅಜರ್ ಸಹೋದರ ಮುಫ್ತಿ ರೌಫ್,ಅಶಾಕ್ ಅಹ್ಮದ್ ನೆಂಗ್ರೂ, ಡಾಕ್ಟರ್ ಎಂದೇ ಕರೆಸಿಕೊಳ್ಳುತ್ತಿದ್ದ ಭಯೋತ್ಪಾದಕ ನಾಯಕ ಅಬು ತಲ್ಹಾ ಜೊತೆ ಪಾಕಿಸ್ತಾನದ ಮೊಬೈಲ್ ಸಂಖ್ಯೆ ಮೂಲಕ ಸಂಪರ್ಕದಲ್ಲಿದ್ದನೆಂದು ಉಲ್ಲೇಖಿಸಲಾಗಿದೆ.