ಚೆನ್ನೈ, ತಮಿಳುನಾಡು :ಭಾರತದ ಜಲಗಡಿ ಪ್ರವೇಶಿಸಿದ್ದ 11 ಮಂದಿ ಇರಾನಿಯನ್ನರನ್ನು ಚೆನ್ನೈ ಕರಾವಳಿಯಲ್ಲಿ ಭಾರತೀಯ ನೌಕಾಪಡೆಯ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಈಗ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಮತ್ತು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್ಸಿಬಿ) ಈ ಕುರಿತಂತೆ ತನಿಖೆ ಆರಂಭಿಸಿವೆ. ಅಂಡಮಾನ್ ನಿಕೋಬಾರ್ ದ್ವೀಪಗಳ ಇಂದಿರಾ ಪಾಯಿಂಟ್ ಬಳಿ ಈ ದೋಣಿಯನ್ನು ಭಾರತೀಯ ಕರಾವಳಿ ಕಾವಲು ಪಡೆ ವಶಕ್ಕೆ ತೆಗೆದುಕೊಂಡಿತ್ತು.
ಈಗ ಬಂಧಿಸಲ್ಪಟ್ಟವರು ಮಾದಕ ವಸ್ತು ಕಳ್ಳಸಾಗಣೆದಾರರಾಗಿದ್ದು, ಕೋಸ್ಟ್ ಗಾರ್ಡ್ ಇಂಟರ್‌ಸೆಪ್ಟರ್ ಬೋಟ್ ಅನ್ನು ಕಂಡು ತಮ್ಮ ದೋಣಿಯಲ್ಲಿದ್ದ ಮಾದಕವಸ್ತುವನ್ನು ಸಮುದ್ರಕ್ಕೆ ಎಸೆದಿದ್ದಾರೆ. ಆದ್ದರಿಂದಾಗಿ ಏನನ್ನೂ ಕಂಡು ಹಿಡಿಯಲು ಸಾಧ್ಯವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಮಾದಕವಸ್ತು ಕಳ್ಳಸಾಗಣೆ ಜಾಲದಲ್ಲಿ ಯಾವುದಾದರೂ ಸಂಘಟನೆ ಭಾಗಿಯಾಗಿದೆಯೇ ಎಂದು ತಿಳಿದುಕೊಳ್ಳಲು ರಾಷ್ಟ್ರೀಯ ತನಿಖಾ ಸಂಸ್ಥೆಯು ತನಿಖೆಯನ್ನು ಮುಂದುವರೆಸಿದೆ.
- https://flo.uri.sh/visualisation/5637976/embed