ಜೈಪುರ್(ರಾಜಸ್ಥಾನ):ರಾಜಸ್ಥಾನದ ಉದಯ್ಪುರದಲ್ಲಿ ನಡೆದ ಹಿಂದೂ ವ್ಯಕ್ತಿಯ ಕೊಲೆ ಪ್ರಕರಣದ ತನಿಖೆ ಎನ್ಐಎನಿಂದ ನಡೆಯುತ್ತಿದ್ದು, ಇದಕ್ಕೆ ಸಂಬಂಧಿಸಿದಂತೆ ದಿನದಿಂದ ದಿನಕ್ಕೆ ಹೊಸ ಹೊಸ ಮಾಹಿತಿ ಹೊರಬೀಳಲು ಶುರುವಾಗಿವೆ. ಸದ್ಯದ ಮಾಹಿತಿ ಪ್ರಕಾರ ದಾವತ್-ಎ-ಇಸ್ಲಾಮಿ ಸಂಘಟನೆಗೆ ಸಂಬಂಧಿಸಿದ 40 ಮಂದಿಗೋಸ್ಕರ ಎನ್ಐಎ ತೀವ್ರ ಶೋಧ ಕಾರ್ಯ ನಡೆಸುತ್ತಿದೆ.
ಇವರಿಗೆಲ್ಲ ಪಾಕಿಸ್ತಾನದಿಂದ ಆನ್ಲೈನ್ ತರಬೇತಿ ನೀಡಲಾಗುತ್ತಿತ್ತು ಎಂಬ ಮಾಹಿತಿ ತಿಳಿದು ಬಂದಿದೆ. ಮೊಬೈಲ್ ಸಂಖ್ಯೆ ಆಧಾರದ ಮೇಲೆ ಎನ್ಐಎ ಮತ್ತು ಎಸ್ಐಟಿ 40 ಜನರನ್ನ ಗುರಿಯಾಗಿಸಿದ್ದು, ಅವರಿಗೋಸ್ಕರ ಶೋಧಕಾರ್ಯ ಆರಂಭಗೊಂಡಿದೆ. ಲಭ್ಯವಾಗಿರುವ ಮಾಹಿತಿ ಪ್ರಕಾರ, ಲಿಸ್ಟ್ನಲ್ಲಿರುವ 40 ಮಂದಿ ರಾಜಸ್ಥಾನದ ಆರು ಜಿಲ್ಲೆಗಳಿಗೆ ಸೇರಿದ್ದು, ಕಳೆದ ಒಂದು ವರ್ಷದಿಂದ ದಾವತ್ - ಎ - ಇಸ್ಲಾಮಿ ಸಂಘಟನೆ ಜೊತೆ ಗುರುತಿಸಿಕೊಂಡಿದ್ದರಂತೆ. ಇವರಿಗೆ ವಾಟ್ಸ್ಆ್ಯಪ್ ಮತ್ತು ಇತರ ಸಾಮಾಜಿಕ ಜಾಲತಾಣಗಳ ಮೂಲಕ ಪಾಕ್ನಿಂದ ತರಬೇತಿ ನೀಡಲಾಗುತ್ತಿತ್ತು ಎಂದು ಹೇಳಲಾಗ್ತಿದೆ.