ನವದೆಹಲಿ :ಪಂಜಾಬ್ನಲ್ಲಿ 2017-18 ರಲ್ಲಿ ನಡೆದ ಖಲಿಸ್ತಾನ್ ಹೋರಾಟದ ಸಮಯದಲ್ಲಿ ನಡೆದ ಗಲಭೆಗೆ, ಸಂಬಂಧಿಸಿದಂತೆ ಖಲಿಸ್ತಾನಿಭಯೋತ್ಪಾದಕ ಗುರ್ಪತ್ವಂತ್ ಸಿಂಗ್ ಪನ್ನುನ್ ಸೇರಿದಂತೆ 10 ಆರೋಪಿಗಳ ವಿರುದ್ಧ ಪಂಜಾಬ್ನ ಮೊಹಾಲಿಯ ವಿಶೇಷ ನ್ಯಾಯಾಲಯಕ್ಕೆ ಎನ್‌ಐಎ ಚಾರ್ಜ್‌ಶೀಟ್ ಸಲ್ಲಿಸಿದೆ.
ಪಂಜಾಬ್ನ್ನು ಖಲಿಸ್ತಾನ್ ದೇಶವಾಗಿ ಪ್ರತ್ಯೇಕಿಸಬೇಕು ಎಂದು ಆಗ್ರಹಿಸಿ ನಿಷೇಧಿತ ಖಲಿಸ್ತಾನಿ ಉಗ್ರ ಸಂಘಟನೆ ಪ್ರೇರಿತ ಸಿಖ್ ಫಾರ್ ಜಸ್ಟೀಸ್ (ಎಸ್‌ಎಫ್‌ಜೆ) ಸಂಘಟನೆ ರೆಫೆರೆಂಡಮ್ -2020 ಅಭಿಯಾನವನ್ನು ಆನ್ಲೈನ್ ಮತ್ತು ಆಫ್ಲೈನ್ನಲ್ಲಿ ನಡೆಸಿದ್ದವು. ಈ ವೇಳೆ, ಪಂಜಾಬ್ನಲ್ಲಿ ಗಲಭೆ ನಡೆದಿತ್ತು.
ಇದನ್ನೂ ಓದಿ : ಖಲಿಸ್ತಾನ್ ಪ್ರತ್ಯೇಕತಾವಾದಿ ಚಳವಳಿ ಉತ್ತೇಜಿಸಲು ಪ್ಲಾನ್.. ಮುಂದುವರಿದ ಪಾಕ್ ನರಿ ಬುದ್ಧಿ
ಗಲಭೆಯ ಹಿಂದೆ ಖಲಿಸ್ತಾನ್ ಉಗ್ರ ಸಂಘಟನೆ ಕೈವಾಡವಿದ್ದರಿಂದ ಮತ್ತು ವಿದೇಶದಿಂದ ಹಣಕಾಸಿನ ನೆರವು ನೀಡಿ ಸಿಖ್ ಯುವಕರಿಂದ ಗಲಭೆ ಸೃಷ್ಟಿಸಿದ್ದರಿಂದ ಎನ್‌ಐಎ ಪ್ರಕರಣದ ತನಿಖೆ ಕೈಗೆತ್ತಿಕೊಂಡಿತ್ತು. ಇದೀಗ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದೆ. ಜಾರ್ಜ್ ಶೀಟ್ನಲ್ಲಿ ಗುರ್ಪತ್ವಂತ್ ಸಿಂಗ್ ಪನ್ನುನ್, ಪರ್ಗತ್ ಸಿಂಗ್, ಸುಖರಾಜ್ ಸಿಂಗ್, ಬಿಕ್ರಂಜಿತ್ ಸಿಂಗ್, ಮಂಜೀತ್ ಸಿಂಗ್, ಜತಿಂದರ್ ಸಿಂಗ್, ಗುರ್ವಿಂದರ್ ಸಿಂಗ್, ಹರ್ಪ್ರೀತ್ ಸಿಂಗ್, ಕುಲದೀಪ್ ಸಿಂಗ್ , ಹರ್ಮೀತ್ ಸಿಂಗ್ನ್ನು ಆರೋಪಿಗಳೆಂದು ಉಲ್ಲೇಖಿಸಲಾಗಿದೆ.
ಪ್ರತ್ಯೇಕತಾವಾದಿ ಸಂಘಟನೆಯಾದ ಎಸ್‌ಎಫ್‌ಜೆ ಫೇಸ್‌ಬುಕ್, ಟ್ವಿಟರ್, ವಾಟ್ಸ್ಆ್ಯಪ್, ಯೂಟ್ಯೂಬ್ ಚಾನೆಲ್‌ಗಳು ಮತ್ತು ಹಲವಾರು ವೆಬ್‌ಸೈಟ್‌ಗಳ ಮೂಲಕ ದೇಶ ವಿರೋಧಿ ಸಂದೇಶಗಳನ್ನು ಪ್ರಚಾರ ಮಾಡಿ ಭಾರತದ ಶಾಂತಿ, ಸಾಮರಸ್ಯ ಭಂಗಗೊಳಿಸಲು ಪ್ರಯತ್ನಿಸಿದೆ ಎಂದು ದೂರಲಾಗಿದೆ.