ಕರ್ನಾಟಕ

karnataka

ETV Bharat / bharat

ಐಸಿಸ್​ ಜೊತೆ ನಂಟು ಹಿನ್ನೆಲೆ: ಒಂಬತ್ತು ಸ್ಥಳಗಳಲ್ಲಿ ಎನ್​ಐಎ ಶೋಧ - ರಾಷ್ಟ್ರೀಯ ತನಿಖಾ ಸಂಸ್ಥೆ

ಫೆಬ್ರುವರಿಯಲ್ಲಿ ವಾಹನ ತಪಾಸಣೆ ಸಮಯದಲ್ಲಿ ನಾಲ್ವರು ಆರೋಪಿಗಳೊಂದಿಗೆ ಸಾರ್ವಜನಿಕರು ಹಾಗೂ ಪೊಲೀಸ್​ ಅಧಿಕಾರಿಗೆ ಬೆದರಿಕೆ ಹಾಕಿ ಪೊಲೀಸ್​ ಅಧಿಕಾರಿ ಕೊಲೆ ಯತ್ನ ನಡೆಸಿದ್ದ ಮಾಯಿಲಾಡುತುರೈನ ಎಂಡಿ ಸಾಥಿಕ್ ಬಚ್ಚಾ ಅಲಿಯಾಸ್ ಐಸಿಎಎಂಎ ಸಾದಿಕ್‌ಗೆ ಸಂಬಂಧಿಸಿದ ಪ್ರಕರಣ ಇದಾಗಿದೆ.

NIA conducts searches in TN, Pondy,
ಒಂಬತ್ತು ಸ್ಥಳಗಳಲ್ಲಿ ಶೋಧ ಕಾರ್ಯ ಕೈಗೊಂಡ ಎನ್​ಐಎ

By

Published : Jun 10, 2022, 12:56 PM IST

ಚೆನ್ನೈ :ನಿಷೇಧಿತ ಐಸಿಸ್‌ನೊಂದಿಗೆ ನಂಟು ಹೊಂದಿರುವ ವ್ಯಕ್ತಿಗಳ ಗುಂಪಿನ ತನಿಖೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ ಗುರುವಾರ ಚೆನ್ನೈ ಮತ್ತು ತಮಿಳುನಾಡಿನ ಮೈಲಾಡುತುರೈ ಮತ್ತು ನೆರೆಯ ಪುದುಚೇರಿಯ ಕಾರೈಕಲ್‌ನ ಒಂಬತ್ತು ಸ್ಥಳಗಳಲ್ಲಿ ಶೋಧ ನಡೆಸಿದ್ದು, ಶೋಧದಲ್ಲಿ ದೋಷಾರೋಪಣೆಯ ದಾಖಲೆಗಳು, ಡಿಜಿಟಲ್ ಸಾಧನಗಳು ಮತ್ತು ಕೈಬರಹದ ಟಿಪ್ಪಣಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎನ್​ಐಎ ತಿಳಿಸಿದೆ.

ಇದೇ ವರ್ಷದ ಫೆಬ್ರುವರಿಯಲ್ಲಿ ವಾಹನ ತಪಾಸಣೆ ಸಮಯದಲ್ಲಿ ನಾಲ್ವರು ಆರೋಪಿಗಳೊಂದಿಗೆ ಸಾರ್ವಜನಿಕರು ಹಾಗೂ ಪೊಲೀಸ್​ ಅಧಿಕಾರಿಗೆ ಬೆದರಿಕೆ ಹಾಕಿ ಪೊಲೀಸ್​ ಅಧಿಕಾರಿ ಮೇಲೆ ಕೊಲೆ ಯತ್ನ ನಡೆಸಿದ್ದ ಮಾಯಿಲಾಡುತುರೈನ ಎಂಡಿ ಸಾಥಿಕ್ ಬಚ್ಚಾ ಅಲಿಯಾಸ್ ಐಸಿಎಎಂಎ ಸಾದಿಕ್‌ಗೆ ಸಂಬಂಧಿಸಿದ ಪ್ರಕರಣ ಇದಾಗಿದೆ ಎಂದು ಮಾಹಿತಿ ನೀಡಿದೆ.

ಒಂಬತ್ತು ಸ್ಥಳಗಳಲ್ಲಿ ಶೋಧ ಕಾರ್ಯ ಕೈಗೊಂಡ ಎನ್​ಐಎ

ಆರೋಪಿಗಳು ಖಿಲಾಫತ್ ಪಾರ್ಟಿ ಆಫ್ ಇಂಡಿಯಾ, ಖಿಲಾಫತ್ ಫ್ರಂಟ್ ಆಫ್ ಇಂಡಿಯಾ, ಇಂಟೆಲೆಕ್ಚುವಲ್ ಸ್ಟೂಡೆಂಟ್ಸ್ ಆಫ್ ಇಂಡಿಯಾದಂತಹ ಸಂಘಟನೆಗಳನ್ನು ರಚಿಸುವ ಮೂಲಕ ಮತ್ತು ನಿಷೇಧಿತ ಸಂಘಟನೆಗಳಾದ ಐಸಿಸ್​ ಮತ್ತು ಅಲ್ ಖೈದಾದೊಂದಿಗೆ ತಮ್ಮನ್ನು ಸಂಯೋಜಿಸುವ ಮೂಲಕ ಭಾರತದಲ್ಲಿ ಪ್ರತ್ಯೇಕತೆಯ ದ್ವೇಷ ಪ್ರಚೋದಿಸುವಲ್ಲಿ ತೊಡಗಿಸಿಕೊಂಡಿದೆ ಎಂದು ಎನ್​​ಐಎ ಹೇಳಿದೆ.

ಆರಂಭದಲ್ಲಿ ಮೈಲಾಡುತುರೈನಲ್ಲಿ ಪೊಲೀಸ್ ಪ್ರಕರಣ ದಾಖಲಾಗಿತ್ತು. ಏಪ್ರಿಲ್‌ನಲ್ಲಿ ಎನ್​ಐಎ ಮರು ದಾಖಲು ಮಾಡಿಕೊಂಡಿತ್ತು. ಇಂದು ನಡೆಸಿದ ಶೋಧದಲ್ಲಿ, 16 ಡಿಜಿಟಲ್ ಸಾಧನಗಳು, 6 ಮೊಂಡಾದ ಶಸ್ತ್ರಾಸ್ತ್ರಗಳು ಮತ್ತು ಲೋಹದ ರಾಡ್‌ಗಳು, 2 ನಂಚಾಕುಗಳು ಮತ್ತು ಹಲವಾರು ದೋಷಾರೋಪಣೆ ದಾಖಲೆಗಳು, ಕೈಬರಹದ ಟಿಪ್ಪಣಿಗಳು ಇತ್ಯಾದಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಇದನ್ನೂ ಓದಿ :ಪ್ರೇಮ, ಮದುವೆ ಆಮೇಲೆ ದರೋಡೆ.. ವಾರ್ಷಿಕೋತ್ಸವದ ಬಳಿಕ ಯುವಕನಿಗೆ ಗೊತ್ತಾಯ್ತು ನಾನು 7ನೇ ಪತಿ ಅಂತಾ!

ABOUT THE AUTHOR

...view details