ಬೆಂಗಳೂರು/ನವದೆಹಲಿ: ಬಾಂಗ್ಲಾದೇಶದ ಮಾನವ ಕಳ್ಳಸಾಗಣೆದಾರರು ಮತ್ತು ಸಾಗಾಣಿಕೆಗೊಳಗಾದ ಸಂತ್ರಸ್ತರಿಗೆ ನಕಲಿ ಗುರುತು ಚೀಟಿ (ಐಡಿ ಪ್ರೂಫ್) ತಯಾರಿಸಿರುವ ಆರೋಪದ ಮೇರೆಗೆ ಶಂಕಿತನ ಬಗ್ಗೆ ಮಾಹಿತಿ ಸಂಗ್ರಹಿಸಲು ಬೆಂಗಳೂರಿನಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಶೋಧ ಕಾರ್ಯ ನಡೆಸಿದೆ.
ಶಂಕಿತ ವ್ಯಕ್ತಿಗೆ ಸಂಬಂಧಿಸಿದ ಬೆಂಗಳೂರಿನ ಎರಡು ಸ್ಥಳಗಳಲ್ಲಿ ಅಧಿಕಾರಿಗಳು ಶೋಧ ನಡೆಸಿದ್ದಾರೆ. ಈ ವೇಳೆ ನಕಲಿ ದಾಖಲೆಗಳು ಮತ್ತು 6 ಡಿಜಿಟಲ್ ಸಾಧನಗಳು ಪತ್ತೆಯಾಗಿದ್ದು, ತನಿಖೆ ಮುಂದುವರೆದಿದೆ.