ಚೆನ್ನೈ (ತಮಿಳುನಾಡು): ಉದಯ ಕುಮಾರ್ ಅಲಿಯಾಸ್ ಯೂಸುಫ್ ಅಸ್ಲಾಂ ಜಾಲತಾಣದಲ್ಲಿ ಮಾಡಿದ್ದ ಪೋಸ್ಟ್ಗೆ ಸಂಬಂಧಿಸಿದಂತೆ ಎನ್ಐಎ, ಶನಿವಾರ ಥೇನಿ ಮತ್ತು ತಿರುನೆಲ್ವೇಲಿಯ ಜಿಲ್ಲೆಗಳಲ್ಲಿ ಶೋಧ ಕಾರ್ಯ ನಡೆಸಿದೆ.
ಶೋಧ ಕಾರ್ಯಾಚರಣೆ ಬಳಿಕ ಅಸ್ಲಾಂನನ್ನು ಚಿನ್ನಮನೂರು ಠಾಣೆಗೆ ಕರೆದೊಯ್ದ ಅಧಿಕಾರಿಗಳು, ಸತತ 12 ಗಂಟೆಗಳ ವಿಚಾರಣೆ ಬಳಿಕ ಬಿಡುಗಡೆ ಮಾಡಿದರು. ಈ ವೇಳೆ ಚಿನ್ನಮನೂರು ಗ್ರಾಮ ಅಧಿಕಾರಿಯ ಸಮ್ಮುಖದಲ್ಲಿ ಅಸ್ಲಾಂ ಲಿಖಿತ ಹೇಳಿಕೆ ಪಡೆದ ಅಧಿಕಾರಿಗಳು, ಅವನನ್ನು ರಿಲೀಸ್ ಮಾಡಿದರು.
ಇತ್ತೀಚಿನ ದಿನಗಳಲ್ಲಿ ಯೂಸುಫ್ ಅಸ್ಲಾಂ ಸಾಮಾಜಿಕ ಜಾಲತಾಣಗಳಲ್ಲಿ ಸಮಾಜದಲ್ಲಿ ಶಾಂತಿ ಕದಡುವ ಸಂಬಂಧಿತ ಪೋಸ್ಟ್ಗಳನ್ನು ಅಪ್ಲೋಡ್ ಮಾಡುತ್ತಿದ್ದ. ಹಾಗಾಗಿ ಅಧಿಕಾರಿಗಳು ಶೋಧ ನಡೆಸಿ ಆತನನ್ನು ವಿಚಾರಣೆಗೆ ಒಳಪಡಿಸಿದ್ದರು. ಅಸ್ಲಾಂಗೆ ಭಯೋತ್ಪಾದನೆ ಸಂಘಟನೆಗಳೊಂದಿಗೆ ಏನಾದರೂ ಸಂಬಂಧವಿದ್ಯಾ ಅನ್ನೋದ್ರ ಬಗ್ಗೆ ತನಿಖಾ ಸಂಸ್ಥೆ ಪರಿಶೀಲನೆ ನಡೆಸುತ್ತಿದೆ.
ಸೋಷಿಯಲ್ ಮೀಡಿಯಾಗಳಲ್ಲಿ ಶಾಂತಿ ಕದಡುವ ಸಂಬಂಧ ಪೋಸ್ಟ್ ಹಾಕಿದ್ದ ಇಬ್ಬರನ್ನು ಇತ್ತೀಚೆಗೆ ಎನ್ಐಎ ಅಧಿಕಾರಿಗಳು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು.