ವಿಶಾಖಪಟ್ಟಣ :ಸಿಪಿಐ (ಮಾವೋವಾದಿ) ಸಂಘಟನೆಯನ್ನು ಬೆಂಬಲಿಸುತ್ತಾ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ 7 ಜನರ ವಿರುದ್ಧ ಎನ್ಐಎ ಚಾರ್ಜ್ ಶೀಟ್ ದಾಖಲಿಸಿದೆ.
ಸಿಪಿಐ (ಮಾವೋವಾದಿ) ಕೇಂದ್ರ ಸಮಿತಿಯ ಸದಸ್ಯರಾದ ಪಂಗಿ ನಾಗಣ್ಣ, ಅಕ್ಕಿರಾಜು ಹರಿಗೋಪಾಲ್, ಅಮರುಲ ಬಂಧು ಮಿತ್ರುಲ ಸಂಘಂ (ಎಬಿಎಂಎಸ್) ನ ಬೊಪ್ಪುಡಿ ಅಂಜಮ್ಮ, ಚೈತ್ಯನ್ಯ ಮಹಿಳಾ ಸಂಘಂ ( ಸಿಎಂಎಸ್ ನ ರಿಯಲ್ ರಾಜೇಶ್ವರಿ, ವಿರಾಸಂನ ಮನುಕೊಂಡ ಶ್ರೀನಿವಾಸ್ ರಾವ್ , ಪ್ರಗತಿಶೀಲ ಕಾರ್ಮಿಕ ಸಮಖ್ಯ (ಪಿಕೆಎಸ್) ನ ಅಂದುಲುರಿ ಅನ್ನಪೂರ್ಣ ಮತ್ತು ಜಂಗಲ ಕೋಟೇಶ್ವರ್ ರಾವ್ ವಿರುದ್ಧ ಚಾರ್ಜ್ಶೀರ್ಟ್ ಸಲ್ಲಿಕೆಯಾಗಿದೆ.
ಆಂಧ್ರ ಪ್ರದೇಶ ಮತ್ತು ಅಕ್ಕಪಕ್ಕದ ರಾಜ್ಯಗಳಲ್ಲಿ ನಿಷೇಧಿತ ನಕ್ಸಲ್ ಸಂಘಟನೆ ಸಿಪಿಐ (ಮಾವೋವಾದಿ )ನ ಕಾನೂನು ಬಾಹಿರ ಚಟುವಟಿಕೆಗಳಿಗೆ ಇವರು ಬೆಂಬಲ ನೀಡುತ್ತಿದ್ದರು ಎಂದು ಎನ್ಐಎ ತನ್ನ ಚಾರ್ಜ್ ಶೀಟ್ನಲ್ಲಿ ಆರೋಪಿಸಿದೆ. ಆರೋಪಿಗಳ ವಿರುದ್ಧ ಯುಎ (ಪಿ) ನ ಸ್ಫೋಟಕ ಪದಾರ್ಥಗಳ ಕಾಯ್ದೆ ಮತ್ತು ಭಾರತೀಯ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.