ನವದೆಹಲಿ:ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮತ್ತು ಮಧ್ಯಪ್ರದೇಶ ಪೊಲೀಸರ ಭಯೋತ್ಪಾದನಾ ನಿಗ್ರಹ ದಳವು ಶನಿವಾರ ಜಂಟಿ ಕಾರ್ಯಚರಣೆ ನಡೆಸಿ ಮಧ್ಯಪ್ರದೇಶದಲ್ಲಿ ಸುಮಾರು 13 ಕಡೆ ದಾಳಿ ಮಾಡಿದ್ದು, ಐಸಿಸ್ ಸಂಬಂಧಿತ ಭಯೋತ್ಪಾದನಾ ಚಟುವಟಿಕೆಗಳನ್ನು ನಡೆಸುತ್ತಿದ್ದ ಮೂವರನ್ನು ಬಂಧಿಸಿದೆ.
ಬಂಧಿತರಿಂದ ಬಂದೂಕು, ಮದ್ದುಗುಂಡು ಡಿಜಿಟಲ್ ಸಾಧನಗಳು ಹಾಗೂ ದೋಷರೋಪಣೆಯ ದಾಖಲೆಗಳನ್ನು ವಶಡಿಸಿಕೊಳ್ಳಲಾಗಿದೆ. ಮೂವರನ್ನು ಸೈಯದ್ ಮಮೂರ್ ಅಲಿ, ಮೊಹಮ್ಮದ್ ಆದಿಲ್ ಖಾನ್ ಮತ್ತು ಮೊಹಮ್ಮದ್ ಶಾಹಿದ್ ಎಂದು ಗುರುತಿಸಲಾಗಿದೆ. ಆರೋಪಿಗಳನ್ನು ಭೋಪಾಲ್ನ ಎನ್‌ಐಎ ವಿಶೇಷ ನ್ಯಾಯಲಯಕ್ಕೆ ಹಾಜರು ಪಡಿಸಲಾಗುವುದು ಎಂದು ಎನ್‌ಐಎ ಮಾಹಿತಿ ನೀಡಿದೆ.
ಬಂಧಿತ ಆರೋಪಿಗಳು ಸಾಮಾಜಿಕ ಜಾಲತಾಣದ ಮೂಲಕ ISIS ಸಂಘಟನೆಯನ್ನು ಪ್ರಚಾರ ಮಾಡುವುದರಲ್ಲಿ ತೊಡಗಿಸಿಕೊಂಡಿದ್ದರು ಮತ್ತು ಭಾರತದಲ್ಲಿ ಹಿಂಸಾತ್ಮಕ ದಾಳಿಗಳನ್ನು ನಡೆಸಲು ಸಂಚು ರೂಪಿಸುವುದಕ್ಕಾಗಿ ಸ್ಥಳೀಯ ಮಸೀದಿ ಮತ್ತು ಮನೆಗಳಲ್ಲಿ 'ದವಾಹ್' ಎಂಬ ಕಾರ್ಯಕ್ರಮಗಳನ್ನು ನಡೆಸುತ್ತಿದ್ದರು. ಜೊತೆಗೆ ಐಸಿಸ್ ಪ್ರಚಾರ ಸಾಮಗ್ರಿಗಳನ್ನು ಪ್ರಚಾರ ಮಾಡುವುದು ಮತ್ತು ಭಯೋತ್ಪಾದಕ ಚಟುವಟಿಕೆ ನಡೆಸಲು ನಿಧಿ ಸಂಗ್ರಹಣೆ ಮಾಡುತ್ತಿದ್ದರು ಎಂದು ವಿಚಾರಣೆ ಮುಖಾಂತರ ತಿಳಿದು ಬಂದಿದೆ.
ಭಯೋತ್ಪದಕಾ ಕೃತ್ಯಗಳನ್ನು ನಡೆಸಲು ಯುವಕರನ್ನು ಪ್ರೇರೇಪಿಸಿ ಸಂಘಟನೆ ನೇಮಕ ಮಾಡಿಕೊಳ್ಳುತ್ತಿದ್ದರು ಮತ್ತು ಅಕ್ರಮವಾಗಿ ಶಸ್ತ್ರಾಸ್ತ ಮತ್ತು ಮದ್ದುಗುಂಡುಗಳನ್ನು ಸಂಗ್ರಹಿಸುತ್ತಿದ್ದರು. ಸೈಯದ್ ಮಮೂರ್ ಅಲಿ ಎಂಬಾತ 'ಫಿಸಾಬಿಲ್ಲಾ' ಎಂಬ ಹೆಸರಿನ ಸ್ಥಳೀಯ ಗುಂಪನ್ನು ರಚಿಸಿದ್ದಲ್ಲದೇ ಅದೇ ಹೆಸರಿನ ವಾಟ್ಸ್ಆ್ಯಪ್ ಗ್ರೂಪ್ ಸಹ ನಡೆಸುತ್ತಿದ್ದನು. ಜೊತೆಗೆ ಅಕ್ರಮವಾಗಿ ಶಸ್ತ್ರಾಸ್ತಗಳನ್ನು ಪೂರೈಸುತ್ತಿದ್ದವರೊಂದಿಗೆ ಸಂಪರ್ಕದಲ್ಲಿದ್ದ ಎಂದು ಎನ್ಎಐ ತಿಳಿಸಿದೆ.
ಎನ್‌ಐಎ ತನಿಖೆಯ ಪ್ರಕಾರ, ಬಂಧಿತರು ಭಾರತದಲ್ಲಿ ಹಿಂಸಾತ್ಮಕ ಕೃತ್ಯಗಳನ್ನು ನಡೆಸಲು ಸ್ಥಳೀಯ ಸಂಘಟನೆ ರಚಿಸುವ ಯೋಜನೆಯನ್ನು ಹೊಂದಿದ್ದರು ಮತ್ತು ಆರೋಪಿಗಳು ಐಸಿಸ್‌ಗೆ ಸೇರಲು ಯುವಕರನ್ನು ಪ್ರೇರೇಪಿಸಲು ಹಲವು ಯೂಟ್ಯೂಬ್, ಇನ್‌ಸ್ಟಾಗ್ರಾಮ್ ಮತ್ತು ವಾಟ್ಸ್ಆ್ಯಪ್ ಚಾನೆಲ್‌ಗಳನ್ನು ನಡೆಸುತ್ತಿದ್ದರು. ಭಾರತದಲ್ಲಿ ಹಿಂಸಾತ್ಮಕ ದಾಳಿಗಾಗಿ ಗನ್, ಐಇಡಿಗಳು ಮತ್ತು ಗ್ರೆನೇಡ್‌ಗಳು ಸೇರಿದಂತೆ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಲು ಯೋಜನೆ ರೂಪಿಸಿದ್ದರು ಎಂದು ವಿಚಾರಣೆ ಮೂಲಕ ತಿಳಿದು ಬಂದಿದೆ ಎನ್‌ಐಎ ಮಾಹಿತಿ ನೀಡಿದೆ.
ಯಾಸಿನ್ ಮಲಿಕ್‌ಗೆ ಮರಣದಂಡನೆ ನೀಡುವಂತೆ ಎನ್‌ಐಎ ಕೊರಿಕೆ : ಭಯೋತ್ಪಾದನೆ ನಿಧಿಪ್ರಕರಣದಲ್ಲಿ ಭಾಗಿಯಾಗಿ ಜೈಲಿನಲ್ಲಿರುವ ಜಮ್ಮು ಮತ್ತು ಕಾಶ್ಮೀರ ಲಿಬರೇಶನ್ ಫ್ರಂಟ್ ಮುಖ್ಯಸ್ಥ ಮೊಹಮ್ಮದ್ ಯಾಸಿನ್ ಮಲಿಕ್‌ಗೆ ರಾಷ್ಟ್ರೀಯ ತನಿಖಾ ಸಂಸ್ಥೆ ಮರಣದಂಡನೆ ವಿಧಿಸಲು ಕೋರಿದೆ. ಎನ್‌ಐಎ ಮಲಿಕ್‌ಗೆ ಮರಣದಂಡನೆ ವಿಧಿಸಲು ಕೋರಿದ್ದರೂ, ಅಸಾಧಾರಣ ಪ್ರಕರಣಗಳಲ್ಲಿ ಮಾತ್ರ ಮರಣದಂಡನೆ ವಿಧಿಸಬೇಕು ಎಂದು ಶುಕ್ರವಾರ ನ್ಯಾಯಾಲಯ ಹೇಳಿದೆ.
ಇನ್ನು ಎನ್‌ಐಎ ಸಲ್ಲಿಸಿರುವ ಅರ್ಜಿಯನ್ನು ದೆಹಲಿ ನ್ಯಾಯಾಲಯ ಸೋಮವಾರ ವಿಚಾರಣೆ ನಡೆಸಲಿದೆ. ಮಲಿಕ್ ಪ್ರಸ್ತುತ ಉಗ್ರಗಾಮಿಗಳಿಗೆ ಹಣ ಸಂಗ್ರಹ ಮತ್ತು ಸಂಪಾದನೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾರೆ. ನ್ಯಾಯಮೂರ್ತಿ ಸಿದ್ಧಾರ್ಥ್ ಮೃದುಲ್ ಮತ್ತು ತಲ್ವಂತ್ ಸಿಂಗ್ ಅವರ ವಿಭಾಗೀಯ ಪೀಠದ ಮುಂದೆ ಎನ್‌ಐಎ ಅರ್ಜಿಯನ್ನು ಸೋಮವಾರ ವಿಚಾರಣೆಗೆ ಪಟ್ಟಿ ಮಾಡಲಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ, ಜಮ್ಮು ಮತ್ತು ಕಾಶ್ಮೀರ ಲಿಬರೇಶನ್ ಫ್ರಂಟ್ (ಜೆಕೆಎಲ್‌ಎಫ್) ಮುಖ್ಯಸ್ಥ ಯಾಸಿನ್ ಮಲಿಕ್ ಪ್ರಕರಣವನ್ನು ಮರುಪರಿಶೀಲಿಸಬೇಕು ಎಂದು ಹೇಳಿದ್ದಾರೆ. ಏಕೆಂದರೆ ಭಾರತದಂತಹ ಪ್ರಜಾಪ್ರಭುತ್ವದಲ್ಲಿ ಪ್ರಧಾನಿ ಹಂತಕರಿಗೂ ಕ್ಷಮೆ ಇದೆ. ಯಾಸಿನ್ ಮಲಿಕ್ ಗೆ ಏಕೆ ಇಲ್ಲ ಎಂದು ಅವರು ಪ್ರಶ್ನಿಸಿದ್ದಾರೆ.
ಕಳೆದ ವರ್ಷ ಭಯೋತ್ಪಾದನೆ ನಿಧಿ ಪ್ರಕರಣದಲ್ಲಿ ದೆಹಲಿ ನ್ಯಾಯಾಲಯದಿಂದ ಜೀವಾವಧಿ ಶಿಕ್ಷೆಗೆ ಗುರಿಯಾದ ಪ್ರತ್ಯೇಕತಾವಾದಿ ನಾಯಕನನ್ನು ಗಲ್ಲಿಗೇರಿಸುವಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಕೋರ್ಟ್ಗೆ ಮನವಿ ಮಾಡಿದ ಒಂದು ದಿನದ ನಂತರ ಅವರು ಈ ಹೇಳಿಕೆ ಹೊರ ಬಿದ್ದಿದೆ. ಇದನ್ನೂ ಓದಿ:ಭಯೋತ್ಪಾದಕರಿಗೆ ಧನ ಸಹಾಯ: ಕಾಶ್ಮೀರದ ಹಲವೆಡೆ ಎನ್‌ಐಎ ದಾಳಿ