ಮಧುರೈ (ತಮಿಳುನಾಡು): ಫೇಸ್ಬುಕ್ನಲ್ಲಿ ಪ್ರಚೋದನಕಾರಿ ಪೋಸ್ಟ್ ಹಾಕಿದ್ದ ಆರೋಪಿಯನ್ನು ಮಧುರೈನಲ್ಲಿ ಎನ್ಐಎ ಅಧಿಕಾರಿಗಳು ಪೊಲೀಸರ ನೆರವಿನೊಂದಿಗೆ ಬಂಧಿಸಿದ್ದಾರೆ.
ಈತ ಭಾರತದಲ್ಲಿ ನಿಷೇಧಿತ ಹಿಜ್ಬ್-ಉತ್-ತಹರ್ ಸಂಘಟನೆಯ ಸದಸ್ಯನಾಗಿದ್ದು, ಬಾವಾ ಬಹ್ರುದ್ದೀನ್ ಅಲಿಯಾಸ್ ಮನ್ನಾ ಬಾವಾ ಜೊತೆ ಹಲವಾರು ಸಂಚು ರೂಪಿಸಿದ್ದಾನೆ ಎಂದು ಎನ್ಐಎ ತನಿಖೆಯಿಂದ ತಿಳಿದುಬಂದಿದೆ.
2020ರಲ್ಲಿ ಫೇಸ್ಬುಕ್ ಪೇಜ್ನಲ್ಲಿ ಮೊಹಮ್ಮದ್ ಇಕ್ಬಾಲ್ ಅಲಿಯಾಸ್ ಸೆಂಥಿಲ್ ಕುಮಾರ್ ಕೆಲ ಸಮುದಾಯಗಳನ್ನು ಅವಹೇಳನ ಮಾಡುವ ಪೋಸ್ಟ್ ಸೇರಿದಂತೆ ಜಾತಿ ಮತ್ತು ಧಾರ್ಮಿಕ ಸಾಮರಸ್ಯದ ವಿರುದ್ಧ ಪೋಸ್ಟ್ ಮಾಡಿ ಸಾರ್ವಜನಿಕ ಶಾಂತಿ ಕದಡುವಂತಹ ಪೋಸ್ಟ್ ಮಾಡಿದ್ದ. ಈ ಹಿನ್ನೆಲೆ ಆತನನ್ನು ಪೊಲೀಸರು ಬಂಧಿಸಿದ್ದರು.