ನವದೆಹಲಿ : ಯುರೋಪ್ನ ಸೈಪ್ರಸ್ನಲ್ಲಿ ತಲೆಮರೆಸಿಕೊಂಡಿದ್ದ ಖಲಿಸ್ತಾನಿ ಭಯೋತ್ಪಾದಕ ಗುರ್ಜೀತ್ ಸಿಂಗ್ ನಿಜ್ಜಾರ್ನನ್ನು ನವದೆಹಲಿ ವಿಮಾನ ನಿಲ್ದಾಣದಲ್ಲಿ ಎನ್ಐಎ ಅಧಿಕಾರಿಗಳು ಬಂಧಿಸಿದ್ದಾರೆ.
ಖಲಿಸ್ತಾನ್ ಪ್ರತ್ಯೇಕತೆಗಾಗಿ ಸಿಖ್ಖರನ್ನು ದಂಗೆಯೇಳಿಸಲು ಸಾಮಾಜಿಕ ಜಾಲತಾಣಗಳಲ್ಲಿ ಪಿತೂರಿ ನಡೆಸಿದ ಪ್ರಕರಣದಲ್ಲಿ ಗುರ್ಜೀತ್ ಸಿಂಗ್ ನಿಜ್ಜಾರ್ ಪ್ರಮುಖ ಆರೋಪಿಯಾಗಿದ್ದಾನೆ. ಈತನೊಂದಿಗೆ ಹರ್ಪಾಲ್ ಸಿಂಗ್ ಮತ್ತು ಮೊಯಿನ್ ಖಾನ್ ಕೂಡ ಸಂಚಿನ ರುವಾರಿಗಳಾಗಿದ್ದಾರೆ ಎಂದು ಆರೋಪಿಸಲಾಗಿದೆ. ಗುರ್ಜೀತ್ ಸಿಂಗ್ ನಿಜ್ಜಾರ್ ಪೊಲೀಸರಿಂದ ತಲೆಮರೆಸಿಕೊಂಡು ಯುರೋಪ್ನಲ್ಲಿ ನೆಲೆಸಿದ್ದ.