ಕರ್ನಾಟಕ

karnataka

ETV Bharat / bharat

ಆಸ್ಪತ್ರೆ ಸಿಬ್ಬಂದಿ ಎಡವಟ್ಟಿನಿಂದ ಮಕ್ಕಳಿಗೆ ಅಂಟಿದ ಹೆಚ್‌ಐವಿ: ಮಹಾ ಸರ್ಕಾರಕ್ಕೆ ಎನ್​ಹೆಚ್​ಆರ್​ಸಿ ನೋಟಿಸ್

ನಾಗ್ಪುರದಲ್ಲಿ ರಕ್ತ ವರ್ಗಾವಣೆಯ ಬಳಿಕ ನಾಲ್ವರು ಮಕ್ಕಳು ಹೆಚ್‌ಐವಿ ಸೋಂಕಿಗೆ ತುತ್ತಾದ ಬಗ್ಗೆ ಮಹಾರಾಷ್ಟ್ರ ಸರ್ಕಾರಕ್ಕೆ ಎನ್‌ಹೆಚ್‌ಆರ್‌ಸಿ ನೋಟಿಸ್ ಜಾರಿ ಮಾಡಿದೆ. ಆರು ವಾರಗಳಲ್ಲಿ ಈ ಬಗ್ಗೆ ವಿವರವಾದ ವರದಿಯನ್ನು ಸಲ್ಲಿಸುವಂತೆ ತಿಳಿಸಿದೆ.

four kids test HIV positive after blood transfusion
ಆಸ್ಪತ್ರೆ ಸಿಬ್ಬಂದಿ ಯಡವಟ್ಟಿನಿಂದ ಮಕ್ಕಳಿಗೆ ಅಂಟಿದ ಹೆಚ್‌ಐವಿ

By

Published : May 28, 2022, 10:49 AM IST

ನವದೆಹಲಿ: ಮಹಾರಾಷ್ಟ್ರದ ನಾಗ್ಪುರದಲ್ಲಿ ರಕ್ತ ವರ್ಗಾವಣೆಯ ಬಳಿಕ ನಾಲ್ವರು ಮಕ್ಕಳು ಹೆಚ್‌ಐವಿ ಸೋಂಕಿಗೆ ತುತ್ತಾದ ಬಗ್ಗೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಹೆಚ್‌ಆರ್‌ಸಿ) ಶುಕ್ರವಾರ ಮಹಾರಾಷ್ಟ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ಮಹಾರಾಷ್ಟ್ರ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ನೋಟಿಸ್ ಜಾರಿಗೊಳಿಸಿದ್ದು, ಆರು ವಾರಗಳಲ್ಲಿ ಈ ಬಗ್ಗೆ ವಿವರವಾದ ವರದಿಯನ್ನು ಸಲ್ಲಿಸುವಂತೆ ತಿಳಿಸಿದೆ.

ಘಟನೆ: ನಾಗ್ಪುರದ ಜರಿಪಟ್ಕಾ ಪ್ರದೇಶದ ಖಾಸಗಿ ಆಸ್ಪತ್ರೆಯಲ್ಲಿ ಥಲಸ್ಸೇಮಿಯಾ ಕಾಯಿಲೆಗೀಡಾದ ನಾಲ್ವರು ಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಇವರಿಗೆ 15 ದಿನಗಳಿಗೊಮ್ಮೆ ರಕ್ತ ವರ್ಗಾವಣೆ ಮಾಡಲಾಗುತ್ತದೆ. ರಕ್ತ ನಿಧಿಯಿಂದ ಉಚಿತವಾಗಿ ನೀಡಲಾಗುವ ರಕ್ತವನ್ನು ವೈದ್ಯರು ಪರೀಕ್ಷೆ ನಡೆಸದೇ ಮಕ್ಕಳಿಗೆ ನೀಡಿದ್ದರು. ಮಕ್ಕಳಿಗೆ ನೀಡಲಾದ ರಕ್ತದಲ್ಲಿ ಹೆಚ್​ಐವಿ ಸೋಂಕಿನ ಅಂಶವಿದ್ದು, ಮಕ್ಕಳು ಭೀಕರ ಸೋಂಕಿಗೆ ತುತ್ತಾಗಿದ್ದಾರೆ. ನಾಲ್ವರಲ್ಲಿ ಒಂದು ಮಗು ಸಾವನ್ನಪ್ಪಿದೆ.

ಇದನ್ನೂ ಓದಿ:ವೈದ್ಯರ ಯಡವಟ್ಟಿಗೆ ಥಲಸ್ಸೇಮಿಯಾ ಪೀಡಿತ ನಾಲ್ವರು ಮಕ್ಕಳಿಗೆ ಹೆಚ್​ಐವಿ.. ಒಂದು ಮಗು ಸಾವು

ಈ ಪ್ರಕರಣದ ತನಿಖೆ ಕುರಿತು ಆರು ವಾರಗಳಲ್ಲಿ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರದ ಆಹಾರ ಮತ್ತು ಔಷಧ ಇಲಾಖೆ ಕಾರ್ಯದರ್ಶಿಗೆ ಸಹ ನೋಟಿಸ್ ಜಾರಿ ಮಾಡಲಾಗಿದೆ. ತಪ್ಪಿತಸ್ಥರ ವಿರುದ್ಧ ತೆಗೆದುಕೊಂಡ ಕ್ರಮ ಅಥವಾ ತೆಗೆದುಕೊಳ್ಳಲು ಪ್ರಸ್ತಾಪಿಸಲಾದ ಕ್ರಮದ ಕುರಿತು ವರದಿಯನ್ನು, ಜೊತೆಗೆ ಚಿಕಿತ್ಸೆ ಮತ್ತು ಪರಿಹಾರದ ಕುರಿತು ವರದಿ ನಿರೀಕ್ಷಿಸಲಾಗುತ್ತಿದೆ ಎಂದು ಎನ್‌ಹೆಚ್‌ಆರ್‌ಸಿ ತಿಳಿಸಿದೆ.

ABOUT THE AUTHOR

...view details