ಜೋಧ್‌ಪುರ:ರಾಜಸ್ಥಾನದಲ್ಲಿ ಅಮಾನವೀಯ ಘಟನೆಯೊಂದು ನಡೆದಿರುವುದು ಬೆಳಕಿಗೆ ಬಂದಿದೆ. ನವವಿವಾಹಿತ ದಂಪತಿಗೆ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲು ಅವಕಾಶ ನೀಡಿರಲಿಲ್ಲ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗಿದೆ. ಕೂಡಲೇ ಎಚ್ಚೆತ್ತ ಪೊಲೀಸರು ಆ ಅರ್ಚಕನನ್ನು ಬಂಧಿಸಿದ್ದಾರೆ.
ಏನಿದು ಘಟನೆ: ಕುಕಾ ರಾಮ್ ಅವರ ಮದುವೆ ಸಂಭ್ರಮ ಶನಿವಾರ ನೀಲಕಂಠ ಗ್ರಾಮಕ್ಕೆ ತಲುಪಿತ್ತು. ನವವಿವಾಹಿತ ದಂಪತಿ ತಮ್ಮ ಮದುವೆಯ ನಂತರ ದೇವಸ್ಥಾನದಲ್ಲಿ ತೆಂಗಿನಕಾಯಿ ಅರ್ಪಿಸಲು ಬಯಸಿದ್ದರು.
ಒಳಗೆ ಬರಬೇಡಿ: ವಧು - ವರ ಸೇರಿದಂತೆ ಕುಟುಂಬಸ್ಥರು ದೇವಸ್ಥಾನವನ್ನು ತಲುಪಿದ್ದಾರೆ. ಈ ವೇಳೆ, ದೇವಸ್ಥಾನದ ಅರ್ಚಕರು ಅವರೆಲ್ಲರನ್ನು ಗೇಟ್‌ನಲ್ಲಿ ನಿಲ್ಲಿಸಿ ತೆಂಗಿನಕಾಯಿ ಹೊರಗೆ ನೀಡುವಂತೆ ಹೇಳಿದ್ದಾರೆ. ಇದನ್ನು ಪ್ರಶ್ನಿಸಿದಾಗ ಅವರು ನೀವು ದಲಿತ ಸಮುದಾಯಕ್ಕೆ ಸೇರಿದ್ದೀರಿ. ದೇವಸ್ಥಾನದೊಳಗೆ ಪ್ರವೇಶಿಸಬೇಡಿ ಎಂದು ಅರ್ಚಕರು ಹೇಳಿದ್ದಾರೆ. ಈ ವೇಳೆ ವಾಗ್ವಾದ ನಡೆದಿದೆ.
ಓದಿ:ದಲಿತ ಎಂಬ ಕಾರಣಕ್ಕೆ ಕ್ಷೌರ ನಿರಾಕರಣೆ.. ಪ್ರಕರಣ ದಾಖಲಿಸಿಕೊಳ್ಳಲು ಪೊಲೀಸರು ಹಿಂದೇಟು ಆರೋಪ
ಕೆಲವರ ಬೆಂಬಲ:ಕೆಲವು ಗ್ರಾಮಸ್ಥರು ಸಹ ವಾಗ್ವಾದಕ್ಕೆ ದನಿಗೂಡಿಸಿ ಪೂಜಾರಿಯನ್ನು ಬೆಂಬಲಿಸಿದ್ದಾರೆ. ಇದು ಗ್ರಾಮದ ನಿರ್ಧಾರ ಮತ್ತು ಪೂಜಾರಿಯೊಂದಿಗೆ ವಾದದಲ್ಲಿ ಯಾವುದೇ ಅರ್ಥವಿಲ್ಲ ಎಂದು ಕೆಲವರು ವಾದಿಸಿದ್ದಾರೆ. ನವ ದಂಪತಿ ಕುಟುಂಬಸ್ಥರು ಪಾದ್ರಿಯ ಬಳಿ ಸಾಕಷ್ಟು ಮನವಿ ಮಾಡಿಕೊಂಡರೂ ಉಪಯೋಗವಾಗಿಲ್ಲ. ನಂತರ ಅವರು ಅರ್ಚಕರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.
ಅರ್ಚಕನ ಬಂಧನ: ಈ ಘಟನೆಯಿಂದ ತೀವ್ರ ಬೇಸರಗೊಂಡ ವಧುವಿನ ಸೋದರ ಸಂಬಂಧಿ ತಾರಾ ರಾಮ್ ಅರ್ಚಕನ ವಿರುದ್ಧ ದೂರು ದಾಖಲಿಸಿದ್ದಾರೆ. ಪೂಜಾರಿ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಅರ್ಚಕನ ವಿರುದ್ಧ ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಿದ್ದೇವೆ ಎಂದು ಜಲೋರ್ ಪೊಲೀಸ್ ವರಿಷ್ಠಾಧಿಕಾರಿ ಹರ್ಷವರ್ಧನ್ ಅಗರ್‌ವಾಲಾ ಭಾನುವಾರ ತಿಳಿಸಿದ್ದಾರೆ.
ವಿಡಿಯೋ ವೈರಲ್:ಶನಿವಾರ ನಡೆದಿರುವ ಈ ಘಟನೆಯನ್ನು ಕೆಲವರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಇದನ್ನು ನೋಡಿದ ನೆಟ್ಟಿಗರು ಇದೊಂದು ಅಮಾನವೀಯ ಘಟನೆಯೊಂದು ನೊಂದಿದ್ದಾರೆ.