ಪಾಟ್ನಾ(ಬಿಹಾರ) :ವರದಕ್ಷಿಣೆಗೋಸ್ಕರ ರಾಕ್ಷಸನಾದ ಪತಿಯೋರ್ವ ಕಟ್ಟಿಕೊಂಡ ಹೆಂಡತಿಯನ್ನ ಆಕೆಯ ತಾಯಿಯ ಮನೆಯಲ್ಲೇ ಬೆಂಕಿ ಹಚ್ಚಿ ಸುಟ್ಟು ಹಾಕಿರುವ ಘಟನೆ ಪಾಟ್ನಾದಲ್ಲಿ ನಡೆದಿದೆ. ಈ ಕೃತ್ಯದ ಬೆನ್ನಲ್ಲೇ ಆರೋಪಿ ಸ್ಥಳದಿಂದ ತಲೆಮರೆಸಿಕೊಂಡಿದ್ದು, ಆತನಿಗೋಸ್ಕರ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ. ಬಿಹಾರದ ಬಿಹ್ತಾದಲ್ಲಿ ಈ ಘಟನೆ ನಡೆದಿದ್ದು, ಕಳೆದ ಮೂರು ತಿಂಗಳ ಹಿಂದೆ ಮದುವೆಯಾಗಿದ್ದ ನವವಿವಾಹಿತೆ ರಿಯಾ ಕುಮಾರಿ ಸಾವನ್ನಪ್ಪಿದ್ದಾಳೆ.
ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಕೌಡಿಯಾ ಗ್ರಾಮದ ನಿವಾಸಿ ರಾಜೀವ್ ರಂಜನ್ ಕಳೆದ ಫೆಬ್ರವರಿ ತಿಂಗಳಲ್ಲಿ ರಿಯಾ ಕುಮಾರಿ ಜೊತೆ ಮದುವೆ ಮಾಡಿಕೊಂಡಿದ್ದ. ಮದುವೆ ನಂತರ ಗಂಡನ ಮನೆಯವರು ವರದಕ್ಷಿಣೆಗೋಸ್ಕರ ಮೇಲಿಂದ ಮೇಲೆ ಪೀಡಿಸಲು ಶುರು ಮಾಡಿದ್ದಾರೆ. ಹಣದ ವಿಚಾರವಾಗಿ ಅತ್ತೆ ಸಹ ಅನೇಕ ಸಲ ಹಲ್ಲೆ ನಡೆಸಿದ್ದಳಂತೆ.