ಕರ್ನಾಟಕ

karnataka

ETV Bharat / bharat

ಅಯ್ಯೋ ದುರ್ವಿಧಿಯೇ.. ಮದುವೆಯಾಗಿ ಮೂರೇ ದಿನಕ್ಕೆ ಮಸಣ ಸೇರಿದ ನವದಂಪತಿ! - ಚೆನ್ನೈ ಅಪರಾಧ ಸುದ್ದಿ

ಕೆಲವು ದಿನಗಳ ಹಿಂದೆ ಮದುವೆಯಾಗಿದ್ದ ನವದಂಪತಿ ಭೀಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ಚೆನ್ನೈ ಬಳಿ ಸಂಭವಿಸಿದೆ.

newly married couple killed, newly married couple killed in road accident, newly married couple killed in road accident at chennai, Chennai crime news, ನವದಂಪತಿ ಸಾವು, ಭೀಕರ ರಸ್ತೆ ಅಪಘಾತದಲ್ಲಿ ನವದಂಪತಿ ಸಾವು, ಚೆನ್ನೈನಲ್ಲಿ ಭೀಕರ ರಸ್ತೆ ಅಪಘಾತದಲ್ಲಿ ನವದಂಪತಿ ಸಾವು, ಚೆನ್ನೈ ಅಪರಾಧ ಸುದ್ದಿ,
ಮದುವೆಯಾಗಿ ಮೂರೇ ದಿನಕ್ಕೆ ಮಸಣ ಸೇರಿದ ನವದಂಪತಿ

By

Published : Nov 2, 2021, 5:10 AM IST

Updated : Nov 2, 2021, 6:26 AM IST

ಚೆನ್ನೈ: ಮಪ್ಪೆಡು ಬಳಿಯ ಪೆರುಂಬಕ್ಕಂ-ಅರಕ್ಕೋಣಂ ರಸ್ತೆಯಲ್ಲಿ ಭಾನುವಾರ ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನವವಿವಾಹಿತ ದಂಪತಿ ಸಾವನ್ನಪ್ಪಿದ್ದಾರೆ.

ಅರಕ್ಕೋಣಂನ ಎಂ.ಮನೋಜ್ ಕುಮಾರ್ (31), ಚೆನ್ನೈನ ಪೆರುಂಬಕ್ಕಂನ ಕಾರ್ತಿಕಾ (30) ಅವರು ಅಕ್ಟೋಬರ್ 28ರಂದು ವಿವಾಹವಾಗಿದ್ದರು. ಸಪ್ತಪದಿ ತುಳಿದು ಮೂರನೇ ದಿನಕ್ಕೆ ಆ ದಂಪತಿ ಕಾರು ಅಪಘಾತದಲ್ಲಿ ಸ್ಥಳದಲ್ಲೇ ಭೀಕರವಾಗಿ ಸಾವನ್ನಪ್ಪಿ ಮಸಣ ಸೇರಿದ್ದಾರೆ.

ಮದುವೆಯಾಗಿ ಮೂರೇ ದಿನಕ್ಕೆ ಮಸಣ ಸೇರಿದ ನವದಂಪತಿ

ಹೌದು, ಮನೋಜ್​ ಕುಮಾರ್​ ದಂಪತಿ ಚೆನ್ನೈನಿಂದ ಕಾರಿನಲ್ಲಿ ಮನೆಗೆ ಮರಳುತ್ತಿದ್ದರು. ಈ ವೇಳೆ ಕಾಂಕ್ರೀಟ್ ಮಿಕ್ಸರ್ ಟ್ರಕ್ ನವದಂಪತಿ ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ಪಲ್ಟಿಯಾಗಿದೆ. ಕಾರಿನ ಸಮೇತ ದಂಪತಿ ಸಂಪೂರ್ಣ ನಜ್ಜು-ಗುಜ್ಜಾಗಿದ್ದು, ದಾರುಣವಾಗಿ ಸಾವನ್ನಪ್ಪಿದ್ದಾರೆ. ಈ ಘಟನೆ ಬಳಿಕ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.

ಮಪ್ಪೇಡು ಪೊಲೀಸ್ ಠಾಣೆಯ ಸಿಬ್ಬಂದಿ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಶವಗಳನ್ನು ಹೊರತೆಗೆಯಲು ಕೆಲ ಗಂಟೆಗಳ ಕಾಲ ಹರಸಾಹಸ ಪಟ್ಟರು. ಈ ವೇಳೆ ಟ್ರಾಫಿಕ್‌ ಕೂಡ ಅಸ್ತವ್ಯಸ್ತವಾಗಿ, ಒಂದು ಕಿ.ಮೀ.ಗೂ ಹೆಚ್ಚು ವಾಹನಗಳು ರಸ್ತೆಯಲ್ಲಿ ಸಾಲುಗಟ್ಟಿ ನಿಂತಿದ್ದವು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಘಟನೆ ಕುರಿತು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Last Updated : Nov 2, 2021, 6:26 AM IST

ABOUT THE AUTHOR

...view details