ಫರಿದಾಬಾದ್:ನೂತನವಾಗಿ ಆಯ್ಕೆಯಾದ ಸರಪಂಚ್‌ಗೆ 500ರ ನೋಟುಗಳಿಂದ ಕೂಡಿದ 11 ಲಕ್ಷ ರೂಪಾಯಿ ಮಾಲೆ ಹಾಕಿ ಸನ್ಮಾನ ಮಾಡಲಾಗಿದೆ. ಹರಿಯಾಣದ ಫರಿದಾಬಾದ್ ಜಿಲ್ಲೆಯ ಫತೇಪುರ್ ತಾಗಾ ಗ್ರಾಮದಲ್ಲಿ ಈ ಘಟನೆ ನಡೆದಿದೆ
ನೂತನ ಸರಪಂಚ್ ಆಸ್ ಮೊಹಮ್ಮದ್ ಎಂಬುವರು ಬೃಹತ್ ಹಾರವಾಗಿದ್ದ ಕಾರಣ ಕಟ್ಟಡದ ಮೊದಲ ಮಹಡಿಯಲ್ಲಿ ನಿಂತಿದ್ದರು. ಶುಕ್ರವಾರ ರಾತ್ರಿ ಆಸ್ ವಿಜಯಿ ಎಂದು ಘೋಷಿಸಿದ ಬಳಿಕ ವಿಶಿಷ್ಟ ಆಚರಣೆ ನಡೆದಿದೆ. ಸ್ಥಳೀಯ ಯುವಕನೊಬ್ಬ ಸರಪಂಚ್‌ಗೆ ಹಾರ ಹಾಕಿರುವ ಫೋಟೋ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾನೆ. ಇದೀಗ ಫೋಟೋ ಸಖತ್ ವೈರಲ್ ಆಗಿದೆ.