ಕರ್ನಾಟಕ

karnataka

ETV Bharat / bharat

Covid: ವಾರಾಣಸಿಯಲ್ಲಿ ತಾಯಿ,  2 ದಿನದ ಮಗು, ಇಬ್ಬರ ವರದಿಯೂ ನೆಗೆಟಿವ್..! - ವಾರಣಾಸಿಯಲ್ಲಿ ಮಗುವಿಗೆ ಕೋವಿಡ್

ವಾರಾಣಸಿಯಲ್ಲಿ ಎರಡು ದಿನಗಳ ಬಳಿಕ ತಾಯಿ ಮತ್ತು ಮಗುವಿಗೆ ತಪಾಸಣೆ ಮಾಡಿದ್ದು, ಇಬ್ಬರ ವರದಿಯೂ ನೆಗೆಟಿವ್ ಬಂದಿದೆ ಎಂದು ವೈದ್ಯಕೀಯ ಅಧೀಕ್ಷಕ ಡಾ.ಕೆ.ಕೆ.ಗುಪ್ತಾ ತಿಳಿಸಿದ್ದಾರೆ.

ವರದಿ ನೆಗೆಟಿವ್
ವರದಿ ನೆಗೆಟಿವ್

By

Published : May 29, 2021, 5:43 PM IST

ವಾರಾಣಸಿ: ಕೊರೊನಾ ನೆಗೆಟಿವ್​​ ಹೊಂದಿದ್ದ ಮಹಿಳೆ ಪಾಸಿಟಿವ್​​​ ಮಗುವಿಗೆ ಜನ್ಮ ನೀಡಿದ್ದಳು. ಎರಡು ದಿನಗಳ ಬಳಿಕ ತಾಯಿ ಮತ್ತು ಮಗುವಿಗೆ ತಪಾಸಣೆ ಮಾಡಿದ್ದು, ಇಬ್ಬರ ವರದಿಯೂ ನೆಗೆಟಿವ್ ಬಂದಿದೆ.

ಮೇ 24 ರಂದು ಮಹಿಳೆಯೊಬ್ಬರು ಕೋವಿಡ್ ಟೆಸ್ಟ್ ಮಾಡಿಸಿಕೊಂಡ ಬಳಿಕ ಹೆರಿಗೆಗೆಂದು ಆಸ್ಪತ್ರೆಗೆ ದಾಖಲಾಗಿದ್ದರು. ತಪಾಸಣೆಯಲ್ಲಿ ಮಹಿಳೆಗೆ ಕೋವಿಡ್ ನೆಗೆಟಿವ್ ವರದಿ ಬಂದಿತ್ತು. ಮೇ 26 ರಂದು ಮಹಿಳೆಯು ಮಗುವಿಗೆ ಜನ್ಮ ನೀಡಿದ ಬಳಿಕ ನಡೆಸಿದ RTPCR ಟೆಸ್ಟ್​ನಲ್ಲಿ ಕೋವಿಡ್ ಇರುವುದು ದೃಢಪಟ್ಟಿತ್ತು. ಇದೀಗ ಇಬ್ಬರ ಕೊರೊನಾ ಟೆಸ್ಟ್ ವರದಿಯೂ ನೆಗೆಟಿವ್ ಬಂದಿದೆ ಎಂದು ವೈದ್ಯಕೀಯ ಅಧೀಕ್ಷಕ ಡಾ.ಕೆ.ಕೆ.ಗುಪ್ತಾ ತಿಳಿಸಿದ್ದಾರೆ.

ಇದನ್ನೂ ಓದಿ:ಗೋವಾದಲ್ಲಿ ಜೂನ್​ 7 ರವರೆಗೆ ಕೊರೊನಾ ಕರ್ಫ್ಯೂ ವಿಸ್ತರಣೆ

ABOUT THE AUTHOR

...view details