ಸೋನಿಪತ್(ಹರಿಯಾಣ): ಸೋನಿಪತ್‌ನಲ್ಲಿ ಮಂಗಳವಾರ ಬೀದಿನಾಯಿ ಬಾಯಲ್ಲಿ ನವಜಾತ ಹೆಣ್ಣು ಶಿಶುವಿನ ಶವ ಪತ್ತೆಯಾಗಿದ್ದು, ಸಂಚಲನ ಮೂಡಿಸಿದೆ. ಖಾನ್ಪುರ್ ಪಿಜಿಐ ಗೇಟ್‌ನಲ್ಲಿ ನವಜಾತ ಹೆಣ್ಣು ಮಗುವಿನ ಮೃತದೇಹ ಪತ್ತೆಯಾಗಿದೆ. ನಾಯಿಯು ಬಾಲಕಿಯನ್ನು ಬಾಯಿಯಲ್ಲಿ ಕಚ್ಚಿಕೊಂಡು ಪಿಜಿಐಗೆ ಪ್ರವೇಶಿಸುತ್ತಿತ್ತು. ಅದೇ ಸಮಯಕ್ಕೆ ಗೇಟ್ನಲ್ಲಿದ್ದ ಸೆಕ್ಯುರಿಟಿ ಗಾರ್ಡ್ ನೋಡಿ ನಾಯಿಯನ್ನು ಹಿಡಿಯಲು ಯತ್ನಿಸಿದಾಗ ನಾಯಿ ಬಾಲಕಿಯ ಶವವನ್ನು ಬಿಟ್ಟು ಓಡಿಹೋಗಿದೆ. ನಂತರ ಭದ್ರತಾ ಸಿಬ್ಬಂದಿ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ ಬಾಲಕಿಯ ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗಾಗಿ ಸಿವಿಲ್ ಆಸ್ಪತ್ರೆಗೆ ರವಾನಿಸಿದ್ದಾರೆ. ಇಂದು ನನ್ನನ್ನು ಸೋನಿಪತ್ ಖಾನ್ಪುರ್ ಪಿಜಿಐನ ಗೇಟ್ ನಂ.2ರಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ನಿಯೋಜಿಸಲಾಗಿತ್ತು. ನವಜಾತ ಹೆಣ್ಣು ಶಿಶುವಿನ ಶವವನ್ನು ಬಾಯಿಯಲ್ಲಿ ಕಚ್ಚಿಕೊಂಡು ನಾಯಿಯೊಂದು ಗೇಟ್ ಒಳಗೆ ಪ್ರವೇಶಿಸುತ್ತಿರುವುದನ್ನು ನೋಡಿದೆ. ಆಗ ಶ್ವಾನವನ್ನು ಹಿಂಬಾಲಿಸಿದಾಗ ನಾಯಿ ಬಾಲಕಿಯ ಶವವನ್ನು ಬಿಟ್ಟು ಓಡಿಹೋಗಿದೆ ಎಂದು ಸೆಕ್ಯುರಿಟಿ ಗಾರ್ಡ್ ಮದನ್ ತಮ್ಮ ದೂರಿನಲ್ಲಿ ಪೊಲೀಸರಿಗೆ ತಿಳಿಸಿದ್ದಾರೆ.
ಸಿಸಿಟಿವಿಯನ್ನು ಪರಿಶೀಲನೆ: ಸಮೀಪದಲ್ಲಿ ಅಳವಡಿಸಲಾದ ಸಿಸಿಟಿವಿಯನ್ನು ಪರಿಶೀಲಿಸುತ್ತಿದ್ದಾರೆ. ಇದರಿಂದ ಶಿಶುವನ್ನು ಇಲ್ಲಿ ಬಿಟ್ಟವರು ಯಾರು ಎಂದು ತಿಳಿಯಬಹುದು. ಇದರೊಂದಿಗೆ ಹೆಣ್ಣು ಮಗುವಿನ ಪೋಷಕರಿಗಾಗಿ ಎಲ್ಲಾ ಆಸ್ಪತ್ರೆಗಳಲ್ಲಿ ಹೊಸ ಹೆರಿಗೆಗಳ ದಾಖಲೆಗಳನ್ನು ಸಹ ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಾನವನ ಪ್ರಾಣದ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲವೇ?: ಮತ್ತೊಂದೆಡೆ ಗುಜರಾತ್ ಹೈಕೋರ್ಟ್‌ನಲ್ಲಿ ಇಂದು ನಡೆದ ವಿಚಾರಣೆ ವೇಳೆ ಬೀದಿ ನಾಯಿಗಳು ಕಚ್ಚಿದ ವಿವಿಧ ಪ್ರಕರಣಗಳ ಕುರಿತು ವಿಚಾರಣೆ ನಡೆಸಲಾಯಿತು. ಈ ಬಗ್ಗೆ ಹೈಕೋರ್ಟ್ ಪ್ರತಿಕ್ರಿಯೆ ನೀಡಿದೆ. ಈ ಇಡೀ ವಿಚಾರದಲ್ಲಿ ತೀವ್ರ ನಿಲುವು ತಳೆದ ಹೈಕೋರ್ಟ್, ನಿಮಗೆ ನಾಯಿ ಸಾಕುವ ಅಭಿಮಾನವಿದ್ದರೆ ಮನೆಯಲ್ಲಿ ಸಾಕಿ. ಪ್ರಾಣಿ ಪ್ರೇಮಿಗಳಿಗೆ ಮಾನವನ ಪ್ರಾಣದ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲವೇ? ಎಂದು ಪ್ರಶ್ನಿಸಿದೆ.