ಶಿಮ್ಲಾ: ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಮಾನವೀಯತೆಯೇ ಬೆಚ್ಚಿಬೀಳುವಂತಹ ಘಟನೆ ಜರುಗಿದೆ. ನವಜಾತ ಶಿಶುವಿನ ಶವವನ್ನು ನಾಯಿಗಳು ಕಿತ್ತು ತಿನ್ನಲು ಯತ್ನಿಸುತ್ತಿದ್ದ ಘಟನೆ ಕಂಡುಬಂದಿದೆ. ಶಿಮ್ಲಾದ ಮೆಹ್ಲಿಯಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ ಈ ಶವ ಪತ್ತೆಯಾಗಿದ್ದು, ಕಟ್ಟಡದ ಮೂಲಕ ಹೋಗುತ್ತಿದ್ದ ಕೆಲವರು ಇದನ್ನು ಗಮನಿಸಿದ್ದಾರೆ.
ಮಾಹಿತಿ ಪಡೆದ ಪೊಲೀಸರು ಫೋರೆನ್ಸಿಕ್ ತಂಡ ಮತ್ತು ಶ್ವಾನ ದಳದೊಂದಿಗೆ ಸ್ಥಳಕ್ಕೆ ಧಾವಿಸಿ ಮೃತದೇಹವನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ತನಿಖೆ ಆರಂಭಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.