ಕರ್ನಾಟಕ

karnataka

ETV Bharat / bharat

ವಾರದ ಭವಿಷ್ಯ: ವರ್ಷದ ಪ್ರಥಮ ವಾರವು ನಿಮ್ಮ ಬಾಳಿನಲ್ಲಿ ಸಮೃದ್ಧಿ ತರಲಿದೆ - ಈ ವಾರದ ಉತ್ತಮ ದಿನಗಳು

2023ನೇ ವರ್ಷದ ಮೊದಲ ವಾರದ ಭವಿಷ್ಯ ಹೀಗಿದೆ..

New Year 2023 first week Horoscope
ವಾರದ ಭವಿಷ್ಯ

By

Published : Jan 1, 2023, 4:01 AM IST

ಮೇಷ:ವರ್ಷದ ಮೊದಲ ವಾರದ ಮೊದಲ ದಿನವು ನಿಮ್ಮಲ್ಲಿ ಸಾಕಷ್ಟು ಉತ್ಸಾಹವನ್ನು ತುಂಬಲಿದೆ. ಆದರೆ ಒಂದಷ್ಟು ಒತ್ತಡ ನಿಮ್ಮನ್ನು ಕಾಡಬಹುದು. ತಮ್ಮ ಕೌಟುಂಬಿಕ ಬದುಕನ್ನು ಕಾಡುತ್ತಿರುವ ಒತ್ತಡಗಳ ಕಾರಣ ವಿವಾಹಿತ ವ್ಯಕ್ತಿಗಳು ಸಮಸ್ಯೆಗಳನ್ನು ಎದುರಿಸಬಹುದು. ಪ್ರೇಮ ಸಂಬಂಧದಲ್ಲಿರುವ ಜನರು ತಮ್ಮ ಸಂಗಾತಿಯೊಂದಿಗೆ ದೀರ್ಘವಾದ ಡ್ರೈವ್‌ ಗೆ ಹೋಗಲು ಅವಕಾಶ ಪಡೆಯಲಿದ್ದಾರೆ. ಹಣಕಾಸಿನ ವಿಚಾರದಲ್ಲಿ ಈ ವಾರವು ಅನುಕೂಲಕರವಾಗಿದೆ. ಖರ್ಚುವೆಚ್ಚಗಳಲ್ಲಿ ಇಳಿಕೆ ಉಂಟಾಗಲಿದೆ. ಧಾರ್ಮಿಕ ಕೆಲಸಗಳಿಗಾಗಿ ನೀವು ಹಣ ಖರ್ಚು ಮಾಡಲಿದ್ದೀರಿ. ಗೌರವದಲ್ಲಿ ವೃದ್ಧಿ ಉಂಟಾಗಲಿದೆ. ನೀವು ನಿಮ್ಮ ವೃತ್ತಿಪರ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಲಿದ್ದೀರಿ. ಉದ್ಯೋಗದಲ್ಲಿರುವವರು ತಮ್ಮ ಕೆಲಸದ ಕುರಿತು ಎಚ್ಚರಿಕೆಯಿಂದ ಇರಬೇಕು ಹಾಗೂ ಕಠಿಣ ಶ್ರಮ ಪಡಬೇಕು. ವ್ಯವಹಾರ ನಡೆಸುತ್ತಿರುವವರು ಒಂದಷ್ಟು ಏರುಪೇರನ್ನು ಎದುರಿಸಬೇಕಾದೀತು. ವಿದ್ಯಾರ್ಥಿಗಳ ಅಧ್ಯಯನವು ಚೆನ್ನಾಗಿರಲಿದೆ. ಅವರಲ್ಲಿ ಹೆಚ್ಚಿನವರು ತಮ್ಮ ಅಧ್ಯಯನದಲ್ಲಿ ಹೆಚ್ಚಿನ ಪ್ರಯತ್ನ ಪಡಬೇಕಾದ ಅಗತ್ಯವಿಲ್ಲ. ಕಡಿಮೆ ಪ್ರಯತ್ನದೊಂದಿಗೆ ಒಳ್ಳೆಯ ಫಲಿತಾಂಶವನ್ನು ಪಡೆಯಬಹುದು. ನಿಮ್ಮ ಆರೋಗ್ಯದ ವಿಚಾರದಲ್ಲಿ ಚಿಂತೆ ಉಂಟಾಗಬಹುದು. ನಿಮ್ಮ ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು. ಒತ್ತಡವು ನಿಮ್ಮ ಮೇಲೆ ಪ್ರಭಾವ ಬೀರದಂತೆ ನೋಡಿಕೊಳ್ಳಿ. ವಾರದ ಮಧ್ಯ ಭಾಗವು ಪ್ರವಾಸಕ್ಕೆ ಹೋಗಲು ಅತ್ಯುತ್ತಮ.

ವೃಷಭ:ವರ್ಷದ ಮೊದಲ ವಾರದಲ್ಲಿ ನಿಮಗೆ ಉತ್ತಮ ಫಲ ದೊರೆಯಲಿದೆ. ವಿವಾಹಿತ ಜೋಡಿಗಳ ಕೌಟುಂಬಿಕ ಬದುಕು ಒತ್ತಡದಿಂದ ಕೂಡಿರಲಿದೆ. ನಿಮ್ಮ ಪ್ರೇಮ ಸಂಗಾತಿಯ ಜೊತೆ ಸಂಘರ್ಷ ಉಂಟಾಗದಂತೆ ನೋಡಿಕೊಳ್ಳಲು ನೀವು ಸಾಕಷ್ಟು ಪ್ರಯತ್ನ ಮಾಡಬೇಕಾಗಬಹುದು. ಈ ವಾರವು ಪ್ರೇಮಕ್ಕೆ ಸಂಬಂಧಿಸಿದ ವಿಚಾರಗಳಿಗೆ ಒಳ್ಳೆಯದು. ನಿಮ್ಮ ಪ್ರೇಮ ಸಂಗಾತಿಯನ್ನು ವಿವಾಹವಾಗುವ ವಿಚಾರದಲ್ಲಿ ನೀವು ಸಂತಸ ಪಡೆಯಲಿದ್ದೀರಿ. ವಾರದ ಮೊದಲ ದಿನದಂದು ಮಾನಸಿಕ ಒತ್ತಡ ಮತ್ತು ಖರ್ಚುವೆಚ್ಚಗಳಲ್ಲಿ ಹೆಚ್ಚಳ ಉಂಟಾಗಬಹುದು. ಇದು ನಿಮ್ಮ ಬಜೆಟ್‌ ಅನ್ನು ಹಾಳು ಮಾಡಬಹುದು. ಈಗ ನಿಮ್ಮಲ್ಲಿ ಅದ್ಭುತ ಆತ್ಮವಿಶ್ವಾಸ ಇರಲಿದೆ. ಇದರಿಂದಾಗಿ ನೀವು ಕೆಲಸದಲ್ಲಿ ಯಶಸ್ಸನ್ನು ಪಡೆಯಲಿದ್ದೀರಿ. ಆದಾಯವೂ ಚೆನ್ನಾಗಿರಲಿದೆ. ಉದ್ಯೋಗದಲ್ಲಿರುವ ಜನರು ಕಠಿಣ ಶ್ರಮ ಪಡಲಿದ್ದಾರೆ ಹಾಗೂ ನಿಮ್ಮ ಕಠಿಣ ಶ್ರಮವು ಯಶಸ್ವಿಯಾಗಲಿದೆ. ಜನರು ನಿಮ್ಮ ಕಠಿಣ ಶ್ರಮವನ್ನು ಗುರುತಿಸಲಿದ್ದಾರೆ ಹಾಗೂ ನಿಮ್ಮ ಹಿರಿಯರು ನಿಮ್ಮನ್ನು ಬೆಂಬಲಿಸಲಿದ್ದಾರೆ. ವ್ಯವಹಾರದಲ್ಲಿ ತೊಡಗಿಕೊಂಡಿರುವ ಜನರು ಯಶಸ್ಸನ್ನು ಸಾಧಿಸಲಿದ್ದಾರೆ. ರಿಯಲ್‌ ಎಸ್ಟೇಟ್‌ ಗೆ ಸಂಬಂಧಿಸಿದ ವಿಚಾರಗಳಲ್ಲಿ ಯಶಸ್ಸು ದೊರೆಯಲಿದೆ. ಈ ವಾರವು ವಿದ್ಯಾರ್ಥಿಗಳಿಗೆ ಒಳ್ಳೆಯದು. ಅವರು ತಮ್ಮ ಅಧ್ಯಯನದಲ್ಲಿ ಸಾಕಷ್ಟು ಪ್ರಯತ್ನ ಪಡಲಿದ್ದಾರೆ. ಈ ಪ್ರಯತ್ನ ಅವರಿಗೆ ಒಳ್ಳೆಯ ಫಲಿತಾಂಶ ದೊರೆಯಲಿದೆ. ನಿಮ್ಮ ಆರೋಗ್ಯ ಚೆನ್ನಾಗಿರಲಿದೆ. ಯಾವುದೇ ದೊಡ್ಡ ಸಮಸ್ಯೆ ಎದುರಾಗದು. ವಾರದ ಕೊನೆಯ ಮೂರು ದಿನಗಳು ಪ್ರಯಾಣಕ್ಕೆ ಅತ್ಯುತ್ತಮ.

ಮಿಥುನ:ವಾರದ ಆರಂಭಿಕ ದಿನಗಳು ನಿಮ್ಮ ಪಾಲಿಗೆ ಸಾಮಾನ್ಯ ದಿನಗಳೆನಿಸಲಿವೆ. ವಿವಾಹಿತ ಜನರು ತಮ್ಮ ಕೌಟುಂಬಿಕ ಬದುಕಿನಲ್ಲಿ ಸಾಕಷ್ಟು ಸಂತಸ ಅನುಭವಿಸಲಿದ್ದಾರೆ ಹಾಗೂ ತಮ್ಮ ಜೀವನ ಸಂಗಾತಿಯ ಬೆಂಬಲವನ್ನು ಪಡೆಯಲಿದ್ದಾರೆ. ನಿಮ್ಮ ಜೀವನ ಸಂಗಾತಿಯ ಬುದ್ಧಿಮತ್ತೆಯು ನಿಮಗೆ ಸಂತಸವನ್ನು ನೀಡಲಿದೆ. ಪ್ರೇಮ ಸಂಬಂಧದಲ್ಲಿರುವವರಿಗೆ ಈ ವಾರವು ದುರ್ಬಲ ವಾರವೆನಿಸಲಿದೆ. ನೀವು ಸಾಕಷ್ಟು ಎಚ್ಚರಿಕೆಯಿಂದ ಇರಬೇಕು. ಏಕೆಂದರೆ ಸಂಬಂಧದಲ್ಲಿ ಸಂಘರ್ಷ ಉಂಟಾಗಬಹುದು. ಉದ್ಯೋಗದಲ್ಲಿರುವವರಿಗೆ ಇದು ಸಕಾಲ. ನಿಮ್ಮ ಅನುಭವವು ನಿಮ್ಮ ಪ್ರಯೋಜನಕ್ಕೆ ಬರಲಿದೆ ಹಾಗೂ ಕೆಲಸದ ಕ್ಷೇತ್ರದಲ್ಲಿ ಯಶಸ್ಸನ್ನು ಪಡೆಯಲಿದ್ದೀರಿ. ವ್ಯವಹಾರದಲ್ಲಿರುವವರು ತಮ್ಮ ಕೆಲಸಕ್ಕೆ ಸಂಬಂಧಿಸಿದಂತೆ ತಮ್ಮ ಸ್ಥಿತಿಯನ್ನು ಸುಧಾರಿಸಲಿದ್ದಾರೆ. ಕೆಲಸದಲ್ಲಿ ಪ್ರಗತಿ ಕಾಣಿಸಿಕೊಳ್ಳಲಿದ್ದು ಇದು ನಿಮಗೆ ಸಂತಸ ನೀಡಲಿದೆ. ನಿಮ್ಮ ಆದಾಯದಲ್ಲಿ ಹೆಚ್ಚಳ ಉಂಟಾಗಲಿದೆ. ಆದರೆ ಮಾನಸಿಕ ಒತ್ತಡವು ಹೆಚ್ಚಲಿದೆ. ವಾರದ ಮಧ್ಯದಲ್ಲಿ ನಿಮ್ಮ ಖರ್ಚುವೆಚ್ಚದಲ್ಲಿ ಹೆಚ್ಚಳ ಉಂಟಾಗಲಿದೆ. ಆಸ್ತಿಗೆ ಸಂಬಂಧಿಸಿದಂತೆ ಒಂದಷ್ಟು ವೆಚ್ಚಗಳು ಉಂಟಾಗುವ ಸಾಧ್ಯತೆ ಇದೆ. ಈ ವಾರದಲ್ಲಿ ವಿದ್ಯಾರ್ಥಿಗಳು ಸಾಕಷ್ಟು ಏರುಪೇರನ್ನು ಕಾಣಲಿದ್ದಾರೆ. ಇಂತಹ ಸಂದರ್ಭದಲ್ಲಿ ಅವರು ತಮ್ಮ ಅಧ್ಯಯನಕ್ಕೆ ಹೆಚ್ಚಿನ ಗಮನ ನೀಡಬೇಕು. ಕೆಲವರಿಗೆ ದುರ್ಬಲ ಆರೋಗ್ಯವು ಕಾಡಲಿದೆ. ಹೀಗಾಗಿ ನಿಮ್ಮ ಆಹಾರವನ್ನು ನೀವು ನಿಯಂತ್ರಿಸಬೇಕು. ವಾರದ ಕೊನೆಗಳು ದಿನವು ಪ್ರಯಾಣಕ್ಕೆ ಅತ್ಯುತ್ತಮ.

ಕರ್ಕಾಟಕ:ವಾರದ ಆರಂಭಿಕ ಭಾಗವು ನಿಮ್ಮ ಪಾಲಿಗೆ ಉತ್ತಮ. ವಿವಾಹಿತ ವ್ಯಕ್ತಿಗಳ ಕೌಟುಂಬಿಕ ಜೀವನವನ್ನು ಕಾಡುತ್ತಿರುವ ಸಮಸ್ಯೆಗಳು ಬಗೆಹರಿಯಲಿವೆ. ಇದರಿಂದ ಹೊರಬರುವ ದಾರಿಯು ಸ್ಪಷ್ಟವಾಗಿ ಗೋಚರಿಸಲಿದೆ. ಇದಕ್ಕಾಗಿ ನಿಮ್ಮ ಗೆಳೆಯರ ಸಹಾಯವನ್ನು ಪಡೆಯಲಿದ್ದೀರಿ. ಈ ವಾರದಲ್ಲಿ ಪ್ರೇಮಿಗಳು ಸಾಕಷ್ಟು ಏರುಪೇರನ್ನು ಕಾಣಲಿದ್ದಾರೆ. ಆದರೂ ಸಂಬಂಧದಲ್ಲಿ ಪ್ರೇಮವು ಕಾಣಿಸಿಕೊಳ್ಳಲಿದೆ. ಕೆಲಸದ ಕ್ಷೇತ್ರದಲ್ಲಿ ಯಶಸ್ಸು ದೊರೆಯಬಹುದು. ಉದ್ಯೋಗದಲ್ಲಿನ ನಿಮ್ಮ ಸ್ಥಾನವು ದೃಢಗೊಳ್ಳಲಿದೆ. ಸಹೋದ್ಯೋಗಿಗಳಿಂದ ನೀವು ಸಂಪೂರ್ಣ ಸಹಕಾರ ಪಡೆಯಲಿದ್ದೀರಿ. ವ್ಯವಹಾರದ ವಿಚಾರದಲ್ಲಿ ಈ ವಾರವು ಪ್ರಗತಿಯನ್ನು ತಂದು ಕೊಡಲಿದೆ. ದೂರದ ಪ್ರಯಾಣ ಮಾಡುವ ಮೂಲಕ ನಿಮ್ಮ ವ್ಯವಹಾರವನ್ನು ನೀವು ಮುಂದಕ್ಕೆ ಕೊಂಡೊಯ್ಯಲಿದ್ದೀರಿ. ನ್ಯಾಯಾಲಯಕ್ಕೆ ಸಂಬಂಧಿಸಿದ ವಿಚಾರದಲ್ಲಿ ಯಶಸ್ಸು ದೊರೆಯಲಿದೆ. ನಿಮ್ಮ ಖರ್ಚುವೆಚ್ಚದಲ್ಲಿ ಇಳಿಕೆ ಉಂಟಾಗಲಿದೆ. ಯಾವುದಾದರೂ ವಿಷಯವು ನಿಮ್ಮ ಮನಸ್ಸನ್ನು ಕಾಡುತ್ತಿದ್ದರೆ, ಖಂಡಿತವಾಗಿಯೂ ನಿಮ್ಮ ಆಪ್ತರಿಗೆ ಇದನ್ನು ತಿಳಿಸಿ. ನಿಮ್ಮ ಭಾವನೆಗಳನ್ನು ಹಂಚಿಕೊಳ್ಳುವುದರಿಂದ ನಿಮ್ಮ ಮನಸ್ಸಿನ ಮೇಲಿನ ಹೊರೆಯು ಕಡಿಮೆಯಾಗಲಿದೆ. ವಿದ್ಯಾರ್ಥಿಗಳು ಅಧ್ಯಯನದದಲ್ಲಿ ಆಸಕ್ತಿ ತೋರಲಿದ್ದಾರೆ. ಈ ವಾರದಲ್ಲಿ ನಿಮ್ಮ ಆರೋಗ್ಯವು ಚೆನ್ನಾಗಿರಲಿದೆ. ವಾರದ ಆರಂಭಿಕ ಭಾಗವು ಪ್ರವಾಸಕ್ಕೆ ಹೋಗಲು ಅತ್ಯುತ್ತಮ.

ಸಿಂಹ: 2023ರ ವರ್ಷದ ಮೊದಲ ವಾರದಲ್ಲಿ ನಿಮಗೆ ಉತ್ತಮ ಫಲ ದೊರೆಯಲಿದೆ. ವಿವಾಹಿತ ವ್ಯಕ್ತಿಗಳು ಪರಸ್ಪರ ಅನ್ಯೋನ್ಯತೆಯನ್ನು ಅನುಭವಿಸಲಿದ್ದಾರೆ. ನಿಮ್ಮ ಸಂಬಂಧವು ನಿಮಗೆ ಸುಂದರ ಅನುಭವ ನೀಡಲಿದೆ. ನಿಮ್ಮ ಸಂಬಂಧದಲ್ಲಿ, ಏನನ್ನು ಹೇಳದೆಯೋ ಪರಸ್ಪರರ ಭಾವನೆಗಳನ್ನು ಅರಿತುಕೊಳ್ಳಲಿದ್ದೀರಿ. ಇದರಿಂದಾಗಿ ನಿಮ್ಮ ಸಂಬಂಧವು ಸಂತಸದಿಂದ ಕೂಡಿರಲಿದೆ. ವಾರದ ಆರಂಭದಲ್ಲಿ ನೀವು ದೀರ್ಘ ಪ್ರವಾಸಕ್ಕೆ ಹೋಗುವ ಸಾಧ್ಯತೆ ಇದೆ. ನೀವು ಧಾರ್ಮಿಕ ಸ್ಥಳಗಳಲ್ಲಿ ಸುತ್ತಾಡಲಿದ್ದೀರಿ. ಇದು ನಿಮ್ಮ ಮನಸ್ಸಿಗೆ ಶಾಂತಿ ತಂದು ಕೊಡಲಿದೆ. ಕೆಲಸಕ್ಕೆ ಸಂಬಂಧಿಸಿದಂತೆ ಮಾಡಿದ ಪ್ರಯತ್ನಗಳು ಫಲಪ್ರದವೆನಿಸಲಿವೆ. ಉದ್ಯೋಗದಲ್ಲಿರುವ ಜನರು ಸದೃಢತೆ ತೋರಲಿದ್ದಾರೆ. ಕೆಲಸದ ಸ್ಥಳದಲ್ಲಿ ನಿಮ್ಮ ಸಾಧನೆಯು ಚೆನ್ನಾಗಿರಲಿದೆ. ವ್ಯವಹಾರದಲ್ಲಿ ತೊಡಗಿರುವವರಿಗೆ ಈ ವಾರವು ತುಂಬಾ ಒಳ್ಳೆಯದು. ನಿಮ್ಮ ಮಹತ್ವಾಕಾಂಕ್ಷೆಗಳು, ನಿಮಗೆ ಮುಂದೆ ಸಾಗಲು ಉತ್ತೇಜನ ನೀಡಲಿವೆ. ನಿರ್ಧಾರ ತೆಗೆದುಕೊಳ್ಳುವ ನಿಮ್ಮ ಸಾಮರ್ಥ್ಯವು ಸುಧಾರಿಸಲಿದೆ. ವಿದ್ಯಾರ್ಥಿಗಳು ಅಧ್ಯಯನದದಲ್ಲಿ ಆಸಕ್ತಿ ತೋರಲಿದ್ದಾರೆ. ನೀವು ಉತ್ತಮ ಫಲಿತಾಂಶ ಪಡೆಯಲಿದ್ದೀರಿ. ನಿಮ್ಮ ಆರೋಗ್ಯದ ಕುರಿತು ಕಾಳಜಿ ವಹಿಸಿ. ವಾರದ ಆರಂಭಿಕ ದಿನಗಳು ಪ್ರವಾಸಕ್ಕೆ ಹೋಗಲು ಉತ್ತಮ.

ಕನ್ಯಾ: ವಾರದ ಆರಂಭಿಕ ದಿನಗಳು ನಿಮ್ಮ ಪಾಲಿಗೆ ದುರ್ಬಲ ಎನಿಸಲಿವೆ. ಆದರೆ ಕಾಲ ಕಳೆದಂತೆ ಪರಿಸ್ಥಿತಿಯಲ್ಲಿ ಸುಧಾರಣೆ ಉಂಟಾಗಲಿದೆ. ವಿವಾಹಿತ ವ್ಯಕ್ತಿಗಳ ಕೌಟುಂಬಿಕ ಬದುಕಿಗೆ ಈ ವಾರ ಒಳ್ಳೆಯದು. ಇನ್ನೊಂದು ಕಡೆ, ಈ ವಾರದಲ್ಲಿ ಪ್ರೇಮಿಗಳು ಸಾಕಷ್ಟು ಏರುಪೇರನ್ನು ಕಾಣಲಿದ್ದಾರೆ. ಆದರೆ ನಿಮ್ಮಿಬ್ಬರ ನಡುವಿನ ಸಂಬಂಧದಲ್ಲಿ ಪ್ರೀತಿ ನೆಲೆಸಲಿದೆ. ಆದರೆ ಅಂತರವೂ ಕಾಣಿಸಿಕೊಳ್ಳಲಿದೆ. ಈ ವಾರದಲ್ಲಿ ಉದ್ಯೋಗದಲ್ಲಿರುವವರಿಗೆ ಯಶಸ್ಸಿನ ಬಾಗಿಲು ತೆರೆಯಲಿದೆ. ನಿಮ್ಮ ಕೆಲಸವನ್ನು ಪ್ರಶಂಸಿಸಲಾಗುತ್ತದೆ ಹಾಗೂ ಮುಂದೆ ಸಾಗಲು ನಿಮಗೆ ಅವಕಾಶ ದೊರೆಯಲಿದೆ. ನೀವು ವ್ಯವಹಾರದಲ್ಲಿ ತೊಡಗಿಕೊಂಡಿದ್ದರೆ, ನಿಮ್ಮ ಅನುಭವದ ಲಾಭ ನಿಮಗೆ ದೊರೆಯಲದಿಎ ಹಾಗೂ ಮಾರುಕಟ್ಟೆಯಲ್ಲಿ ನಿಮ್ಮ ಸ್ಥಾನವನ್ನು ಭದ್ರಪಡಿಸಲು ನಿಮಗೆ ಸಾಧ್ಯವಾಗಲಿದೆ. ನಿಮ್ಮ ಹಣಕಾಸಿನ ಸ್ಥಿತಿಯಲ್ಲಿ ಸುಧಾರಣೆ ಉಂಟಾಗಲಿದೆ. ಆದರೆ ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ನಷ್ಟ ಉಂಟಾಗಲಿದೆ. ವಿದ್ಯಾರ್ಥಿಗಳು ತಮ್ಮ ಅಧ್ಯಯನದ ಮೇಲೆ ಗಮನ ನೀಡಬಹುದು. ಆದರೂ ಕೆಲವೊಂದು ಅಡಚಣೆಗಳು ಉಂಟಾಗಬಹುದು. ನಿಮಗೆ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ಕಾಡಬಹುದು. ಋತುಮಾನದ ಬದಲಾವಣೆಗಳ ಪ್ರಭಾವವನ್ನು ನಿಮ್ಮ ಆರೋಗ್ಯದಲ್ಲಿ ಕಾಣಬಹುದು. ಹೀಗಾಗಿ ನಿಮ್ಮ ಆರೋಗ್ಯದ ಕುರಿತು ಕಾಳಜಿ ವಹಿಸಿ. ವಾರದ ಆರಂಭಿಕ ದಿನಗಳನ್ನು ಹೊರತುಪಡಿಸಿ ನಡುವಿನ ದಿನಗಳು ಪ್ರಯಾಣಿಸಲು ಉತ್ತಮ.

ತುಲಾ: 2023ರ ಮೊದಲ ವಾರದಲ್ಲಿ ನಿಮಗೆ ಸಾಮಾನ್ಯ ಫಲ ದೊರೆಯಲಿದೆ. ವಿವಾಹಿತ ಜನರ ವೈವಾಹಿಕ ಜೀವನದಲ್ಲಿ ಒತ್ತಡ ಕಂಡು ಬರಲಿದೆ. ಜೀವನ ಸಂಗಾತಿಯ ಜೊತೆಗಿನ ಸಂವಹನದ ಮೂಲಕ ಪರಿಸ್ಥಿತಿಯನ್ನು ಸರಿಪಡಿಸಬಹುದು. ಪ್ರೇಮ ಸಂಬಂಧಕ್ಕೆ ಪರಿಸ್ಥಿತಿಯು ಸ್ವಲ್ಪ ದುರ್ಬಲವಾಗಿದೆ ಹಾಗೂ ನಿಮ್ಮ ಪ್ರೇಮಿಯನ್ನು ನಿಮ್ಮ ಕುಟುಂಬದ ಸದಸ್ಯರಿಗೆ ನೀವು ಪರಿಚಯಿಸಬಹುದು. ನಿಮ್ಮ ಮನಸ್ಸನ್ನು ಯೋಚನೆಗಳು ಕಾಡಬಹುದು. ಇವು ನಿಮ್ಮನ್ನು ತಲ್ಲೀನರಾಗಿ ಇಡಲಿವೆ. ನಿಮ್ಮ ಬದುಕಿನಲ್ಲಿ ಏರುಪೇರು ಉಂಟಾಗಬಹುದು. ಕೌಟುಂಬಿಕ ಬದುಕಿನಲ್ಲಿ ಸಂತಸ ಕಾಣಿಸಿಕೊಳ್ಳುವ ಜೊತೆಗೆ ಸ್ವಲ್ಪ ಒತ್ತಡವೂ ಕಾಣಿಸಿಕೊಳ್ಳಬಹುದು. ಉದ್ಯೋಗದಲ್ಲಿರುವವರ ಪರಿಸ್ಥಿತಿಯು ಚೆನ್ನಾಗಿರಲಿದೆ ಹಾಗೂ ಅವರ ಕಾರ್ಯಸಾಧನೆಯಲ್ಲಿ ಸುಧಾರಣೆ ಕಾಣಿಸಿಕೊಳ್ಳಲಿದೆ. ವ್ಯಾಪಾರಿಗಳ ಕುರಿತು ಮಾತನಾಡುವುದಾದರೆ, ಅವರು ಹೊಸ ಯೋಜನೆಗಳಿಗೆ ಕೈ ಹಾಕಬೇಕು. ಆಗ ಮಾತ್ರವೇ ಅವರು ಮುಂದೆ ಸಾಗಬಹುದು. ವಿದ್ಯಾರ್ಥಿಗಳು ಅಧ್ಯಯನ ಮಾಡುವ ಇಚ್ಛೆ ತೋರುತ್ತಾರೆ. ಇದು ಅವರಿಗೆ ಒಳ್ಳೆಯ ಫಲಿತಾಂಶವನ್ನು ನೀಡಲಿದೆ. ಈ ವಾರದಲ್ಲಿ ನಿಮ್ಮ ಆರೋಗ್ಯದಲ್ಲಿ ದೌರ್ಬಲ್ಯ ಕಾಡಬಹುದು. ಹೀಗಾಗಿ ನಿಮ್ಮ ಕುರಿತು ಸಾಕಷ್ಟು ಕಾಳಜಿ ವಹಿಸಿ. ವಾರದ ಆರಂಭವು ಪ್ರಯಾಣಿಸಲು ಅನುಕೂಲಕರ.

ವೃಶ್ಚಿಕ:2023ರ ಮೊದಲ ವಾರದಲ್ಲಿ ನಿಮಗೆ ಸಾಮಾನ್ಯ ಫಲ ದೊರೆಯಲಿದೆ. ವಿವಾಹಿತ ವ್ಯಕ್ತಿಗಳ ಕೌಟುಂಬಿಕ ಬದುಕಿನಲ್ಲಿ ಒಂದಷ್ಟು ಒತ್ತಡ ಕಾಣಿಸಿಕೊಳ್ಳಬಹುದು. ಆದರೆ ಪರಸ್ಪರ ಒಪ್ಪಿಗೆ ಮತ್ತು ಅರಿವಿನ ಮೂಲಕ ವಿಷಯದ ಆಳಕ್ಕೆ ಹೋಗಿ ಮತ್ತು ಚೆನ್ನಾಗಿ ಸಮಯವನ್ನು ಕಳೆಯುವ ಮೂಲಕ ಅವರು ಸಮಸ್ಯೆಯನ್ನು ಬಗೆಹರಿಸಬಹುದು. ಪ್ರೇಮದ ಸಂಬಂಧದಲ್ಲಿರುವವರಿಗೆ ಈ ಈ ವಾರವು ತುಂಬಾ ಅನುಕೂಲಕರ. ನಿಮ್ಮ ಸಂಬಂಧವನ್ನು ನೀವು ಮುಕ್ತ ಮನಸ್ಸಿನಿಂದ ಆನಂದಿಸಲಿದ್ದೀರಿ. ಪರಸ್ಪರರ ಸಾಂಗತ್ಯವನ್ನು ಅವರು ಅನುಭವಿಸಲಿದ್ದಾರೆ. ಈ ವಾರವು ಉದ್ಯೋಗಿಗಳ ಪಾಲಿಗೆ ಉತ್ತಮ ಫಲ ನೀಡಲಿದೆ. ನಿಮ್ಮ ಭಡ್ತಿಗೆ ಬೇಕಾಗುವ ಸನ್ನಿವೇಶವು ರೂಪುಗೊಳ್ಳಲಿದೆ. ಹಿರಿಯರೊಂದಿಗಿನ ನಿಮ್ಮ ಸಂಬಂಧವು ಚೆನ್ನಾಗಿರಲಿದೆ. ಇದು ಕೆಲಸದ ಸ್ಥಳದಲ್ಲಿ ನಿಮಗೆ ಲಾಭ ತಂದು ಕೊಡಲಿದೆ. ನಿಮ್ಮ ವರ್ಚಸ್ಸು ಚೆನ್ನಾಗಿರಲಿದೆ. ನಿಮ್ಮ ಸಹೋದ್ಯೋಗಿಗಳೊಂದಿಗೆ ಚೆನ್ನಾಗಿ ವರ್ತಿಸಿ. ಇಲ್ಲದಿದ್ದರೆ ಸಮಸ್ಯೆಗಳು ಉಂಟಾಗಬಹುದು. ವ್ಯಾಪಾರೋದ್ಯಮಿಗಳು ತಮ್ಮ ಕೆಲಸದ ಕುರಿತು ಸಾಕಷ್ಟು ಧನಾತ್ಮಕ ಮನೋಭಾವವನ್ನು ತೋರಲಿದ್ದು, ವಾರದ ಆರಂಭದಿಂದಲೇ ಕೆಲಸಕ್ಕೆ ಆದ್ಯತೆ ನೀಡಲಿದ್ದಾರೆ ಹಾಗೂ ಕಠಿಣ ಶ್ರಮ ಪಡಲಿದ್ದಾರೆ. ಅವರು ತಮ್ಮ ಕೆಲಸಕ್ಕೆ ಹೊಸ ದಿಕ್ಕನ್ನು ನೀಡಲಿದ್ದಾರೆ. ಇದರಿಂದ ಅವರು ಉತ್ತಮ ಲಾಭ ಪಡೆಯಲಿದ್ದಾರೆ. ಹಣಕಾಸಿನ ವಿಚಾರದಲ್ಲಿ ಈ ವಾರವು ಅನುಕೂಲಕರವಾಗಿದೆ. ಒಂದಷ್ಟು ಖರ್ಚುವೆಚ್ಚಗಳು ಉಂಟಾಗಬಹುದು. ಈ ಸಮಯವು ವಿದ್ಯಾರ್ಥಿಗಳಿಗೆ ಒಳ್ಳೆಯದು. ಏನಾದರೂ ಹೊಸತನ್ನು ಕಲಿಯಲು ನಿಮಗೆ ಅವಕಾಶ ದೊರೆಯಲಿದೆ. ಇದರಿಂದಾಗಿ ನಿಮ್ಮ ಅಧ್ಯಯನದಲ್ಲಿ ನಿಮ್ಮ ಪರಿಸ್ಥಿತಿಯು ಚೆನ್ನಾಗಿರಲಿದೆ. ಈ ವಾರದಲ್ಲಿ ನಿಮ್ಮ ಆರೋಗ್ಯದಲ್ಲಿ ಹೆಚ್ಚು ಸಮಸ್ಯೆ ಕಾಣಿಸಿಕೊಳ್ಳದು. ನೀವು ಮಾನಸಿಕ ಒತ್ತಡವನ್ನು ನಿಯಂತ್ರಿಸಿದರೆ, ಈ ವಾರವು ನಿಮಗೆ ಒಳ್ಳೆಯದು. ವಾರದ ಕೊನೆಯ ಎರಡು ದಿನಗಳು ಪ್ರವಾಸಕ್ಕೆ ಹೋಗಲು ಅತ್ಯುತ್ತಮ.

ಧನು: ಈ ವಾರ ನಿಮಗೆ ಉತ್ತಮ ಫಲ ದೊರೆಯಲಿದೆ. ವಿವಾಹಿತ ವ್ಯಕ್ತಿಗಳ ಗೃಹಸ್ಥ ಬದುಕು ಅದೃಷ್ಟದಿಂದ ಕೂಡಿರಲಿದೆ. ಜೀವನ ಸಂಗಾತಿಯ ಆರೋಗ್ಯ ಕೆಡಬಹುದು. ಅವರ ಕುರಿತು ಕಾಳಜಿ ವಹಿಸಿ. ಪ್ರೇಮದ ಸಂಬಂಧದಲ್ಲಿರುವವರಿಗೆ ಈ ಈ ವಾರವು ತುಂಬಾ ಅನುಕೂಲಕರ. ವಾರದ ಆರಂಭದಲ್ಲಿ ನಿಮಗೆ ಹಠಾತ್‌ ಆಗಿ ಒಂದಷ್ಟು ಹಣ ದೊರೆಯಬಹುದು. ಇದು ನಿಮ್ಮ ಸಂತಸವನ್ನು ವೃದ್ಧಿಸಲಿದೆ. ನಿಮ್ಮ ಮನಸ್ಸಿನಲ್ಲಿ ಸಂತಸದ ಭಾವನೆ ಇರಲಿದೆ. ನೀವು ಎಲ್ಲಾದರೂ ವಾಕ್‌ ಗೆ ಹೋಗಬಹುದು. ಕೆಲಸದಲ್ಲಿರುವ ಜನರು ತಮ್ಮ ಕೆಲಸದಲ್ಲಿ ಸ್ಥಿರತೆ ಸಾಧಿಸಲಿದ್ದು ತಮ್ಮ ಕೆಲಸವನ್ನು ಆನಂದಿಸಲಿದ್ದಾರೆ. ವ್ಯವಹಾರದಲ್ಲಿ ತೊಡಗಿಕೊಂಡಿರುವ ಜನರು ತಮ್ಮ ಜಾಣ್ಮೆಯನ್ನು ಬಳಸಿಕೊಳ್ಳಲಿದ್ದು, ಇದರ ಸಂಪೂರ್ಣ ಲಾಭ ಪಡೆಯಲಿದ್ದಾರೆ. ವಿದ್ಯಾರ್ಥಿಗಳ ವಿಚಾರದಲ್ಲಿ ಹೇಳುವುದಾದರೆ ಅವರ ಪಾಲಿಗೆ ಈ ವಾರವು ಒಳ್ಳೆಯದು. ಅಧ್ಯಯನದಲ್ಲಿ ನೀವು ಯಶಸ್ಸು ಸಾಧಿಸಲಿದ್ದೀರಿ. ಸ್ಪರ್ಧೆಯಲ್ಲಿ ಯಶಸ್ಸನ್ನು ಪಡೆದ ನಂತರ ನಿಮ್ಮ ಆತ್ಮವಿಶ್ವಾಸವು ಉತ್ತುಂಗದಲ್ಲಿರಲಿದೆ. ಸದ್ಯಕ್ಕೆ ನಿಮಗೆ ಯಾವುದೇ ಆರೋಗ್ಯ ಸಮಸ್ಯೆ ಕಾಣಿಸದು. ಹೀಗಾಗಿ ನಿಮ್ಮ ಆಹಾರ ಕ್ರಮದ ಕುರಿತು ಎಚ್ಚರಿಕೆ ವಹಿಸಿ. ವ್ಯಾಯಾಮವು ಲಾಭದಾಯಕ ಎನಿಸಲಿದೆ. ವಾರದ ಮೊದಲ ದಿನವು ಪ್ರವಾಸಕ್ಕೆ ಹೋಗಲು ಅತ್ಯುತ್ತಮ.

ಮಕರ:ಈ ವಾರ ನಿಮಗೆ ಸಾಮಾನ್ಯ ಫಲ ದೊರೆಯಲಿದೆ. ವಿವಾಹಿತ ಜೋಡಿಗಳ ಕೌಟುಂಬಿಕ ಬದುಕು ಎಂದಿನಂದೆ ಮುಂದೆ ಸಾಗಲಿದೆ. ಮಾನಸಿಕ ಸಮಸ್ಯೆಗಳು ನಿಮ್ಮ ಜೀವನ ಸಂಗಾತಿಯ ಜೊತೆಗೆ ಸಂಘರ್ಷವನ್ನುಂಟು ಮಾಡದಂತೆ ನೋಡಿಕೊಳ್ಳಿ. ಬದಲಾಗಿ ನಿಮ್ಮ ವೈವಾಹಿಕ ಬದುಕು ಚೆನ್ನಾಗಿರುವಂತೆ ಅವರನ್ನು ಚೆನ್ನಾಗಿ ನೋಡಿಕೊಳ್ಳಿ. ಪ್ರೇಮ ಸಂಬಂಧದಲ್ಲಿರುವವರಿಗೆ ತಮ್ಮ ಪ್ರೇಮಿಯೊಂದಿಗೆ ಭಾವನೆಗಳನ್ನು ಹಂಚಿಕೊಳ್ಳಲು ಅವಕಾಶ ದೊರೆಯಲಿದೆ. ಇದು ನಿಮ್ಮ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳ್ಳಲಿದೆ ಹಾಗೂ ಧನಾತ್ಮಕತೆಯನ್ನು ತರಲಿದೆ. ವಾರದ ಆರಂಭಿಕ ಸಮಯವನ್ನು ಹೊರತುಪಡಿಸಿ ಉಳಿದ ಸಮಯವು ನಿಮ್ಮ ಪಾಲಿಗೆ ಚೆನ್ನಾಗಿರಲಿದೆ. ನಿಮ್ಮ ಮಾನಸಿಕ ಒತ್ತಡದಿಂದ ಹೊರಬರಲು ಯತ್ನಿಸಿ ಹಾಗೂ ಏನಾದರೂ ಹೊಸತನ್ನು ಮಾಡಲು ಯತ್ನಿಸಿ. ನಿಮ್ಮ ಕೆಲಸವು ನಿಮಗೆ ಯಶಸ್ಸನ್ನು ತಂದು ಕೊಡಲಿದೆ ಮಾತ್ರವಲ್ಲದೆ ನಿಮ್ಮ ಪ್ರತಿ ಕೆಲಸವನ್ನು ನೀವು ಪೂರ್ಣಗೊಳಿಸಲಿದ್ದೀರಿ. ನೀವು ಉದ್ಯೋಗದಲ್ಲಿದ್ದರೆ, ಕೆಲಸದಲ್ಲಿ ನಿಮ್ಮ ಸ್ಥಾನವನ್ನು ಭದ್ರಪಡಿಸಲು ಈಗಲೇ ಸಿದ್ಧರಾಗಿ. ಈ ನಿಟ್ಟಿನಲ್ಲಿ ಪ್ರಯತ್ನವನ್ನು ಮುಂದುವರಿಸಿ. ವ್ಯವಹಾರದಲ್ಲಿ ತೊಡಗಿಕೊಂಡಿರುವ ಜನರು ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಲು ಅವಕಾಶ ಪಡೆಯಲಿದ್ದಾರೆ ಹಾಗೂ ಅವರ ನಂಬಿಕೆಯು ಗಟ್ಟಿಗೊಳ್ಳಲಿದೆ. ವಿದ್ಯಾರ್ಥಿಗಳು ತಮ್ಮ ಅಧ್ಯಯನಕ್ಕೆ ಹೆಚ್ಚಿನ ಗಮನ ನೀಡಬೇಕು. ಇದಕ್ಕಾಗಿ ವೇಳಾಪಟ್ಟಿಯನ್ನು ರೂಪುಗೊಳಿಸುವುದು ಹಾಗೂ ಮುಂದಕ್ಕೆ ಸಾಗುವುದು ಪ್ರಯೋಜನಕಾರಿ ಎನಿಸಲಿದೆ. ನಿಮ್ಮ ಆರೋಗ್ಯದ ಕುರಿತು ಕಾಳಜಿ ವಹಿಸಿ. ಆಹಾರದ ಕುರಿತು ಸಹ ಎಚ್ಚರಿಕೆ ವಹಿಸಿ.

ಕುಂಭ: ಈ ವಾರ ನಿಮಗೆ ಸಾಮಾನ್ಯ ಫಲ ದೊರೆಯಲಿದೆ. ವಿವಾಹಿತ ಜನರು ತಮ್ಮ ವೈವಾಹಿಕ ಜೀವನದಲ್ಲಿ ಸಮಸ್ಯೆ ಎದುರಿಸಲಿದ್ದಾರೆ. ಇದಕ್ಕಾಗಿ ಅವರು ತಮ್ಮ ಜೀವನ ಸಂಗಾತಿಯೊಂದಿಗೆ ಮಾತನಾಡಬೇಕು. ಪ್ರೇಮ ಸಂಬಂಧದಲ್ಲಿರುವ ಜನರು ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ನಿಮ್ಮ ಮನಸ್ಸಿನ ಭಾವನೆಗಳನ್ನು ವ್ಯಕ್ತಪಡಿಸಲು ನಿಮಗೆ ಸಾಧ್ಯವಾಗಲಿದೆ. ಸದ್ಯಕ್ಕೆ ನಿಮ್ಮ ಖರ್ಚುವೆಚ್ಚದಲ್ಲಿ ಹೆಚ್ಚಳ ಉಂಟಾಗಲಿದೆ. ಆದರೆ ಆದಾಯವೂ ಚೆನ್ನಾಗಿರಲಿದೆ. ವಾರದ ಆರಂಭಿಕ ದಿನಗಳಲ್ಲಿ ನಿಮ್ಮ ಗೆಳೆಯರೊಂದಿಗೆ ನೀವು ಎಲ್ಲಾದರೂ ಹೋಗಲಿದ್ದೀರಿ. ರಿಯಲ್‌ ಎಸ್ಟೇಟ್‌ ಗೆ ಸಂಬಂಧಿಸಿದ ವಿಚಾರದಲ್ಲಿ ಯಶಸ್ಸು ದೊರೆಯಲಿದೆ. ನಿಮ್ಮ ಕುಟುಂಬದ ಸದಸ್ಯರಿಂದ ನೀವು ನೆರವು ಪಡೆಯುವ ಸಾಧ್ಯತೆ ಇದೆ. ಈ ವಾರವು ಉದ್ಯೋಗಿಗಳ ಪಾಲಿಗೆ ಉತ್ತಮ ಫಲ ನೀಡಲಿದೆ. ನಿಮ್ಮ ಮನಸ್ಸಿನ ಇಚ್ಛೆಗೆ ಅನುಗುಣವಾಗಿ ನೀವು ಕೆಲಸ ಮಾಡಿದರೆ ನಿಮಗೆ ಯಶಸ್ಸು ದೊರೆಯಲಿದೆ. ವ್ಯವಹಾರದಲ್ಲಿ ತೊಡಗಿಕೊಂಡಿರುವ ಜನರು ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ವಿದ್ಯಾರ್ಥಿಗಳು ಅಧ್ಯಯನದದಲ್ಲಿ ಆಸಕ್ತಿ ತೋರಲಿದ್ದಾರೆ. ಅವರು ತಮ್ಮ ಅಧ್ಯಯನದಿಂದ ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ನಿಮ್ಮ ಆರೋಗ್ಯದಲ್ಲಿ ಕುಸಿತ ಕಾಣಿಸಿಕೊಳ್ಳಬಹುದು. ಹೀಗಾಗಿ ನಿಮ್ಮ ಆರೋಗ್ಯದ ಕುರಿತು ನೀವು ಕಾಳಜಿ ವಹಿಸಬೇಕು. ವಾರದ ಆರಂಭಿಕ ಮತ್ತು ಮಧ್ಯದ ದಿನಗಳು ಪ್ರಯಾಣಿಸಲು ಉತ್ತಮ.

ಮೀನ:ಈ ವಾರ ನಿಮಗೆ ಅತ್ಯುತ್ತಮ ಫಲ ದೊರೆಯಲಿದೆ. ಆದರೂ ಸದ್ಯಕ್ಕೆ ನಿಮ್ಮ ಒಡಹುಟ್ಟಿದವರಿಗೆ ಸಮಸ್ಯೆಗಳುಂಟಾಗಬಹುದು. ವಿವಾಹಿತ ವ್ಯಕ್ತಿಗಳು ತಮ್ಮ ಕೌಟುಂಬಿಕ ಜೀವನವನ್ನು ಆನಂದಿಸಲಿದ್ದಾರೆ. ಸದ್ಯಕ್ಕೆ ನಿಮ್ಮ ಪ್ರೇಮ ಬದುಕಿನಲ್ಲಿ ಪ್ರಣಯಭರಿತ ಕ್ಷಣಗಳನ್ನು ಕಳೆಯಲು ನಿಮಗೆ ಅವಕಾಶ ದೊರೆಯಲಿದೆ. ವಾರದ ಆರಂಭದಲ್ಲಿ ಹಣ ಬರಲಿದೆ. ಇದು ನಿಮ್ಮ ಹಣಕಾಸಿನ ಸ್ಥಿತಿಯನ್ನು ಗಟ್ಟಿಗೊಳಿಸಲಿದೆ. ಈ ವಾರದಲ್ಲಿ ನಿಮಗೆ ಹಣ ಹರಿದು ಬರಲಿದೆ. ನಿಮ್ಮ ದೈಹಿಕ ಸಮಸ್ಯೆಗಳಲ್ಲಿ ಇಳಿಕೆ ಉಂಟಾಗಲಿದೆ. ನಿಮ್ಮ ಇಚ್ಛೆಯು ಪೂರ್ಣಗೊಳ್ಳಲಿದೆ. ಆಕಾಂಕ್ಷೆಗಳು ಪೂರ್ಣಗೊಳ್ಳುವ ಕಾರಣ ನಿಮ್ಮ ಮನಸ್ಸಿನಲ್ಲಿ ಸಂತಸದ ಭಾವನೆ ಇರಲಿದೆ. ಉದ್ಯೋಗದಲ್ಲಿರುವವರಿಗೆ ಜಾಣ್ಮೆಯಿಂದ ಮುಂದೆ ಸಾಗಲು ಇದು ಸಕಾಲ. ವ್ಯವಹಾರದಲ್ಲಿ ಒಳ್ಳೆಯ ಲಾಭ ದೊರೆಯಲಿದೆ. ವಿದೇಶಿ ಸಂಪರ್ಕಗಳಿಂದ ನಿಮಗೆ ಲಾಭ ದೊರೆಯಲಿದೆ. ನೀವು ಸಾಕಷ್ಟು ಧೈರ್ಯ ತೋರಲಿದ್ದೀರಿ. ವಿದ್ಯಾರ್ಥಿಗಳು ತಮ್ಮ ಅಧ್ಯಯನದಲ್ಲಿ ಆಸಕ್ತಿ ತೋರಲಿದ್ದಾರೆ. ಅವರು ತಮ್ಮ ಅಧ್ಯಯನದಿಂದ ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ಈ ವಾರದಲ್ಲಿ ಆರೋಗ್ಯಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರಮುಖ ಸಮಸ್ಯೆಗಳು ಕಾಣಿಸಿಕೊಳ್ಳುವುದಿಲ್ಲ.

ABOUT THE AUTHOR

...view details