ನವದೆಹಲಿ: ಆದಾಯ ತೆರಿಗೆದಾರರು ತೆರಿಗೆ ಪಾವತಿಯಿಂದ ನುಣುಚಿಕೊಳ್ಳುವುದನ್ನು ಕಂಡು ಹಿಡಿಯಲು ಹೊಸ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.
ಈ ಮೂಲಕ ತೆರಿಗೆ ವಂಚಕರನ್ನು ಗುರುತಿಸಿ ಅವರ ಮೇಲೆ ಹೆಚ್ಚು ಟಿಡಿಎಸ್ (ಟ್ಯಾಕ್ಸ್ ಡಿಡಕ್ಟೆಡ್ ಆಟ್ ಸೋರ್ಸ್) ವಿಧಿಸಲು ಸರ್ಕಾರ ನಿರ್ಧಾರ ಮಾಡಿದ್ದು, ಜುಲೈ 1ರಿಂದ ಈ ವ್ಯವಸ್ಥೆ ಜಾರಿಗೆ ಬರಲಿದೆ.
ಕಳೆದ ಎರಡು ವರ್ಷಗಳಿಂದ ಆದಾಯ ತೆರಿಗೆ ಲೆಕ್ಕಪತ್ರ ವಿವರ ಸಲ್ಲಿಕೆ (ಐಟಿಆರ್) ಸಲ್ಲಿಸದ ವ್ಯಕ್ತಿಗಳಿಗೆ ಹೆಚ್ಚಿನ ಟಿಡಿಎಸ್ ವಿಧಿಸಲಾಗುತ್ತದೆ. ತೆರಿಗೆ ಕಟ್ಟದ ವ್ಯಕ್ತಿ ಕೊನೆಯ ಎರಡು ಐಟಿಆರ್‌ಗಳನ್ನು ಸಲ್ಲಿಸಿದ್ದಾನೋ ಇಲ್ಲವೋ ಎಂದು ಪರಿಶೀಲಿಸಲು, ಹೊಸ ತೆರಿಗೆ ಪೋರ್ಟಲ್ ಸೌಲಭ್ಯವನ್ನು ಆದಾಯ ತೆರಿಗೆ ಹೊಂದಲಿದೆ.