ಪುರಿ(ಒಡಿಶಾ) : ಒಮಿಕ್ರಾನ್ ಹಿನ್ನೆಲೆಯಲ್ಲಿ ಶ್ರೀ ಜಗನ್ನಾಥ ದೇವಾಲಯದ ಆಡಳಿತ ಮಂಡಳಿ ಸಾರ್ವಜನಿಕ ದರ್ಶನಕ್ಕಾಗಿ ಹೊಸ ನಿಯಮಗಳನ್ನು ಬಿಡುಗಡೆ ಮಾಡಿದೆ.
ಡಿಸೆಂಬರ್ 10ರಂದು ನಡೆದ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದ್ದು, ಗುರುವಾರ (ನಾಳೆಯಿಂದ) ಹೊಸ ನಿಯಾವಳಿಗಳು(ಪ್ರಮಾಣಿತ ಕಾರ್ಯವಿಧಾನದ ನಿಯಮಾವಳಿ) ಜಾರಿಗೆ ಬರಲಿವೆ ಎಂದು ಆಡಳಿತ ಮಂಡಳಿ ತಿಳಿಸಿದೆ.
ಹೊಸ ನಿಯದನ್ವಯ ಸಾರ್ವಜನಿಕ ದರ್ಶನಕ್ಕಾಗಿ ದೇಗುಲ ತೆರೆದಿರುವ ಎಲ್ಲಾ ದಿನಗಳಲ್ಲಿ ಬೆಳಗ್ಗೆ 05:30 ರಿಂದ ರಾತ್ರಿ 09:30 ರವರೆಗೆ ಭಕ್ತಾಧಿಗಳಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ದೇಗುಲ ಆಡಳಿಯ ಮಂಡಳಿ ಹೊರಡಿಸಿರುವ ಹೊಸ ನಿಯಮಗಳು ಕೋವಿಡ್ ನಿಯಂತ್ರಣ ಮತ್ತು ಹೊಸವರ್ಷ ಆಚರಣೆ ಹಿನ್ನೆಲೆಯಲ್ಲಿ ಅಧಿಕ ಸಂಖ್ಯೆ ಜನ ಸೇರುವ ಸಾಧ್ಯತೆ ಇದೆ. ಈ ಸಂಬಂಧ ಡಿಸೆಂಬರ್ 31 ಮತ್ತು ಜನವರಿ 1 ರಂದು ದೇವರ ಸಾರ್ವಜನಿಕ ದರ್ಶನವನ್ನು ನಿರ್ಬಂಧಿಸಲಾಗಿದೆ. ಉಳಿದಂತೆ ಪ್ರತಿ ಭಾನುವಾರ ದೇಗುಲ ಬಂದ್ ಇರಲಿದೆ ಎಂದು ತಿಳಿಸಿದೆ. ಸದ್ಯ ಒಡಿಶಾದಲ್ಲಿ ಯಾವುದೇ ಒಮಿಕ್ರಾನ್ ಪ್ರಕರಣ ಪತ್ತೆಯಾಗಿಲ್ಲ.
ಇದನ್ನೂ ಓದಿ: ಮೂರು ದಿನಗಳ ಬಾಂಗ್ಲಾ ಪ್ರವಾಸ ಕೈಗೊಂಡ ರಾಷ್ಟ್ರಪತಿ ಕೋವಿಂದ್: ಕುಟುಂಬಸ್ಥರಿಗೆ ಅದ್ದೂರಿ ಸ್ವಾಗತ