ಕರ್ನಾಟಕ

karnataka

ETV Bharat / bharat

ಸ್ಕ್ರ್ಯಾಪ್ ಪಾಲಿಸಿ.. ವಾಹನ ಮಾರಾಟ ಕ್ಷೇತ್ರದಲ್ಲಿ ಸುಧಾರಣೆಯ ಮುನ್ಸೂಚನೆ.. - ಸರ್ಕಾರದ ಹೊಸ ವಾಹನ ಸ್ಕ್ರ್ಯಾಪ್ ನೀತಿ

ಹೊಸ ಸ್ಕ್ರ್ಯಾಪ್ ನೀತಿಯು ಕೈಗಾರಿಕೆಗಳಿಗೆ ಪ್ರಯೋಜನ ನೀಡುತ್ತದೆ. ಇದಿಷ್ಟೇ ಅಲ್ಲದೆ ಈ ಕೈಗಾರಿಕಾ ವಲಯವು ವಾಹನ ಬಿಡಿ ಭಾಗಗಳ ತಯಾರಿಕೆಗೆ ಬಳಸಾಲಾಗುವ ಗುಜರಿ ಸಲಕರಣೆಗಳನ್ನು ಆಮದು ಮಾಡಿಕೊಳ್ಳುತ್ತಿತ್ತು. ಆದರೆ, ಇನ್ಮುಂದೆ ಹಳೆಯ ವಾಹನಗಳು ಗುಜರಿಗೆ ಸೇರುವುದರಿಂದ ಆಮದು ಪ್ರಮಾಣ ಸಹ ಇಳಿಕೆಯಾಗಲಿದೆ..

new-scrap-policy-
ಸ್ಕ್ರ್ಯಾಪ್ ಪಾಲಿಸಿ

By

Published : Feb 3, 2021, 4:24 PM IST

ಸೆರೈಕೆಲಾ (ಜಾರ್ಖಂಡ್​​​​): ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಕೇಂದ್ರ ಬಜೆಟ್​​ನಲ್ಲಿ ಹಳೆಯ ವಾಹನ ಮಾಲೀಕರಿಗೆ ಶಾಕ್ ನೀಡಿದ್ದರು. 20 ವರ್ಷ ಮೇಲ್ಪಟ್ಟ ಖಾಸಗಿ ವಾಹನ ಹಾಗೂ 15 ವರ್ಷ ಮೇಲ್ಪಟ್ಟ ವಾಣಿಜ್ಯ ವಾಹನಗಳ ಬಳಕೆ ನಿರ್ಬಂಧಿಸುವ ಸೂಚನೆ ನೀಡಿದ್ದಾರೆ. ಆದರೆ, ಇದರಿಂದ ಜಾರ್ಖಂಡ್​​​​ನ ಸೆರೈಕೆಲಾ ಜಿಲ್ಲೆಯ ಕೈಗಾರಿಕಾ ವಲಯಕ್ಕೆ ಚೇತರಿಕೆಯ ಕನಸು ಕಾಣುತ್ತಿದೆ.

ಸರ್ಕಾರದ ಹೊಸ ವಾಹನ ಸ್ಕ್ರ್ಯಾಪ್ ನೀತಿಯಿಂದ ವಾಹನ ವಲಯವು ಪುನಶ್ಚೇತನಗೊಳ್ಳಲಿದೆ ಎಂಬುದು ಅರ್ಥವಲಯದ ಮಾತಾಗಿದೆ. ಕೈಗಾರಿಕಾ ವಲಯ ಮತ್ತು ವಾಹನ ವಲಯದಲ್ಲಿ ದೀರ್ಘಕಾಲದವರೆಗೆ ಸ್ಕ್ರ್ಯಾಪ್ ನೀತಿಯ ಬೇಡಿಕೆ ಹೆಚ್ಚುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಿದ ನಂತರ ಸರ್ಕಾರ ಅನುಮೋದಿಸಿದೆ.

ಆದ್ದರಿಂದ ಜಾಗತಿಕ ಆರ್ಥಿಕ ಹಿಂಜರಿತದ ನಂತರ ಕೊರೊನಾದಿಂದ ಕುಸಿದಿರುವ ಆಟೋಮೊಬೈಲ್ ವಲಯದಲ್ಲಿ ಇದು ಮುಂದಿನ ದಿನಗಳಲ್ಲಿ ಭಾರಿ ಪರಿಣಾಮ ಬೀರುತ್ತದೆ. 20 ವರ್ಷಕ್ಕಿಂತ ಹಳೆಯದಾದ ಖಾಸಗಿ ವಾಹನಗಳು ರಸ್ತೆಯಲ್ಲಿ ಓಡುವುದಿಲ್ಲ, ಇದು ವಾಹನ ಉದ್ಯಮದಲ್ಲಿ ಬದಲಾವಣೆ ತರುವ ಸೂಚನೆ ದೊರೆತಿದೆ.

ಹಳೆಯ ವಾಹನಗಳು ರಸ್ತೆಯಿಂದ ಹೊರಹೋಗದಂತೆ ಆ ಜಾಗದಲ್ಲಿ ಹೊಸ ವಾಹನಗಳ ಭರಾಟೆ ಹೆಚ್ಚಾದ್ರೆ ವಾಹನ ಮಾರಾಟ ಪ್ರಮಾಣ ಗಣನೀಯವಾಗಿ ಏರಿಕೆಯಾಗಲಿದೆ.

ಅದಕ್ಕೆ ಸಂಬಂಧಿಸಿದ ಉಕ್ಕಿನ ಉದ್ಯಮದ ಮೇಲೂ ಇದು ಪರಿಣಾಮ ಬೀರುತ್ತದೆ. ವಾಹನಗಳ ಟೈರ್‌ಗಳು, ಟ್ಯೂಬ್‌ಗಳು, ಬ್ಯಾಟರಿಗಳು ಸೇರಿದಂತೆ ಇತರ ಪರಿಕರಗಳು ಸಹ ಅವುಗಳ ಮಾರಾಟವನ್ನು ಹೆಚ್ಚಿಸುತ್ತವೆ ಮತ್ತು ಇದು ಕೈಗಾರಿಕೆಗಳಿಗೆ ಪ್ರಯೋಜನವನ್ನು ನೀಡುತ್ತದೆ ಮತ್ತು ಜನರಿಗೆ ಉದ್ಯೋಗವನ್ನು ನೀಡುತ್ತದೆ.

ಹೊಸ ಸ್ಕ್ರ್ಯಾಪ್ ನೀತಿಯು ಕೈಗಾರಿಕೆಗಳಿಗೆ ಪ್ರಯೋಜನ ನೀಡುತ್ತದೆ. ಇದಿಷ್ಟೇ ಅಲ್ಲದೆ ಈ ಕೈಗಾರಿಕಾ ವಲಯವು ವಾಹನ ಬಿಡಿ ಭಾಗಗಳ ತಯಾರಿಕೆಗೆ ಬಳಸಾಲಾಗುವ ಗುಜರಿ ಸಲಕರಣೆಗಳನ್ನು ಆಮದು ಮಾಡಿಕೊಳ್ಳುತ್ತಿತ್ತು. ಆದರೆ, ಇನ್ಮುಂದೆ ಹಳೆಯ ವಾಹನಗಳು ಗುಜರಿಗೆ ಸೇರುವುದರಿಂದ ಆಮದು ಪ್ರಮಾಣ ಸಹ ಇಳಿಕೆಯಾಗಲಿದೆ.

ಇದನ್ನೂ ಓದಿ:ದುರ್ಬಲಗೊಂಡಿರುವ ಸಾರ್ವಜನಿಕ ಆರೋಗ್ಯ ವ್ಯವಸ್ಥೆಗೆ ‘ಆರೋಗ್ಯ ಬಜೆಟ್’ ಪುನಶ್ಚೇತನ ನೀಡಬಹುದೇ?

ABOUT THE AUTHOR

...view details