ನವದೆಹಲಿ: ನೂತನ ಸಂಸತ್ತಿನ ಕಟ್ಟಡವು 2022ರ ಅಕ್ಟೋಬರ್ ವೇಳೆಗೆ ಪೂರ್ಣಗೊಳ್ಳುವ ಗುರಿ ಹೊಂದಿದ್ದು ದೇಶ ಸ್ವಾತಂತ್ರ್ಯವಾಗಿ 75ನೇ ವರ್ಷಕ್ಕೆ ಕಾಲಿಡುವ ಸಂದರ್ಭದಲ್ಲಿ ಬಳಕೆಗೆ ಮುಕ್ತವಾಗಲಿದೆ ಎಂದು ಸರ್ಕಾರ ಇಂದು ಸಂಸತ್ತಿಗೆ ತಿಳಿಸಿದೆ.
ಸೆಂಟ್ರಲ್ ವಿಸ್ಟಾ ಮಾಸ್ಟರ್ ಯೋಜನೆ ಅಭಿವೃದ್ಧಿಯ ಭಾಗವಾಗಿರುವ ಸಾಮಾನ್ಯ ಕೇಂದ್ರ ಕಾರ್ಯದರ್ಶಿ ಕಟ್ಟಡಗಳು, ಕೇಂದ್ರದ ಸಮ್ಮೇಳನ ಕೇಂದ್ರ, ಪ್ರಧಾನ ಮಂತ್ರಿಗಳ ನಿವಾಸ, ವಿಶೇಷ ಭದ್ರತಾ ಪಡೆ (ಎಸ್‌ಪಿಜಿ) ಕಟ್ಟಡ ಹಾಗೂ ಉಪರಾಷ್ಟ್ರಪತಿಗಳ ಎನ್‌ಕ್ಲೇವ್‌ಗೂ 2021ರ ಮೇ 31 ರಂದು ಪರಿಸರ ಸಚಿವಾಲಯದಿಂದ ಪರಿಸರ ಅನುಮತಿ ಪಡೆಯಲಾಗಿದೆ ಎಂದು ಸರ್ಕಾರ ಹೇಳಿದೆ. ಹೊಸ ಸಂಸತ್ತಿನ ಕಟ್ಟಡಕ್ಕೆ ಕಳೆದ ವರ್ಷ ಜೂನ್ 17 ರಂದು ಪರಿಸರ ಸಚಿವಾಲಯ ಒಪ್ಪಿಗೆ ನೀಡಿತ್ತು.
ಕೇಂದ್ರ ವಿಸ್ಟಾ ಅಭಿವೃದ್ಧಿ ಮಾಸ್ಟರ್ ಯೋಜನೆಯಡಿಯಲ್ಲಿ ಪಟ್ಟಿ ಮಾಡಲಾದ ಯಾವುದೇ ಪಾರಂಪರಿಕ ಕಟ್ಟಡಗಳನ್ನು ನೆಲಸಮ ಮಾಡಲಾಗುವುದಿಲ್ಲ. ನ್ಯಾಷನಲ್ ಆರ್ಕೈವ್ಸ್ ಮತ್ತು ನ್ಯಾಷನಲ್ ಮ್ಯೂಸಿಯಂನಲ್ಲಿನ ಎಲ್ಲಾ ವಸ್ತುಗಳು ಹಾಗೆಯೇ ಇರುತ್ತವೆ. ಇದರ ಬಗ್ಗೆ ವಿದ್ವಾಂಸಕರು ಮತ್ತು ಸಂಶೋಧನೆ ನಡೆಸಲಿದ್ದಾರೆ ಎಂದು ಸರ್ಕಾರ ಸಂಸತ್ತಿನಲ್ಲಿ ಹೇಳಿದೆ.