ನವದೆಹಲಿ:ನೂತನ ಸಂಸತ್ ಭವನ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಸಂಸತ್ ಭವನದ ನಿರ್ಮಾಣ ವೆಚ್ಚವು 971 ಕೋಟಿ ರೂಪಾಯಿಯಿಂದ ಸುಮಾರು 1200 ಕೋಟಿ ರೂಪಾಯಿವರೆಗೆ ಏರಿಕೆಯಾಗುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ.
ಉಕ್ಕು, ಎಲೆಕ್ಟ್ರಾನಿಕ್ಸ್ ಮತ್ತು ಇತರ ಸಾಮಗ್ರಿಗಳ ಬೆಲೆ ಏರಿಕೆಯ ಕಾರಣದಿಂದ ಕಟ್ಟಡ ನಿರ್ಮಾಣಕ್ಕೂ ನಿರೀಕ್ಷೆಗಿಂತ ಹೆಚ್ಚು ಖರ್ಚಾಗುತ್ತದೆ. ವೆಚ್ಚ ಹೆಚ್ಚಳದ ಬಗ್ಗೆ ಕೇಂದ್ರ ಲೋಕೋಪಯೋಗಿ ಇಲಾಖೆ ಲೋಕಸಭೆಯ ಸಚಿವಾಲಯದ ಅನುಮೋದನೆಯನ್ನು ಪಡೆಯುವ ಸಾಧ್ಯತೆಯಿದೆ ಎಂದು ಮೂಲಗಳು ಮಾಹಿತಿ ನೀಡಿವೆ.
ಈ ತಿಂಗಳ ಆರಂಭದಲ್ಲಿ, ಹೊಸ ಸಂಸತ್ ಕಟ್ಟಡದ ನಿರ್ಮಾಣದ ನೋಡಲ್ ಏಜೆನ್ಸಿಯಾದ ಸಿಪಿಡಬ್ಲ್ಯೂಡಿ ವೆಚ್ಚ ಹೆಚ್ಚಳಕ್ಕೆ ಲೋಕಸಭಾ ಕಾರ್ಯಾಲಯದ ತಾತ್ವಿಕ ಅನುಮೋದನೆ ಕೋರಿತ್ತು. ನಿರ್ಮಾಣ ಕಾಮಗಾರಿಗಳ ಉಪಯೋಗಿಸುವ ವಸ್ತುಗಳ ಬೆಲೆ ಹೆಚ್ಚಳದ ನಂತರ 1200 ಕೋಟಿ ರೂಪಾಯಿಗೆ ಬೆಲೆ ಹೆಚ್ಚಳವಾಗುವ ಸಾಧ್ಯತೆಯಿದೆ. ಅಂದರೆ ಮೂಲ ಯೋಜನಾ ವೆಚ್ಚಕ್ಕಿಂತ ಸುಮಾರು 223 ಕೋಟಿ ಹೆಚ್ಚಳವಾಗುವ ಸಾಧ್ಯತೆ ಇದೆ.