ನವದೆಹಲಿ: ಬಾಹ್ಯಾಕಾಶ, ಪರಮಾಣು ಶಕ್ತಿ ಮತ್ತು ಕೃಷಿ ಮುಂತಾದ ಹಲವಾರು ಕ್ಷೇತ್ರಗಳಲ್ಲಿ ಪ್ರತಿಭಾವಂತ ಯುವಕರಿಗೆ ಅವಕಾಶಗಳ ಬಾಗಿಲು ತೆರೆಯಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಶಿಕ್ಷಣ ಕ್ಷೇತ್ರದಲ್ಲಿ ಕೇಂದ್ರ ಬಜೆಟ್ ನಿಬಂಧನೆಗಳ ಅನುಷ್ಠಾನ ಕುರಿತು ವೆಬ್‌ನಾರ್ ಉದ್ದೇಶಿಸಿ ಮಾತನಾಡಿದ ಅವರು, "ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ಸ್ಥಳೀಯ ಭಾಷೆಯ ಬಳಕೆಯನ್ನು ಉತ್ತೇಜಿಸಿದೆ. ಈಗ ಲಭ್ಯವಿರುವ ಅತ್ಯುತ್ತಮ ವಿಷಯವನ್ನು ಸಿದ್ಧಪಡಿಸುವುದು ಪ್ರತಿ ಭಾಷೆಯ ತಜ್ಞರ ಜವಾಬ್ದಾರಿಯಾಗಿದೆ" ಎಂದರು.
"ತಂತ್ರಜ್ಞಾನದ ಈ ಯುಗದಲ್ಲಿ ಇದು ಖಂಡಿತವಾಗಿಯೂ ಸಾಧ್ಯ. ಶಿಕ್ಷಣ, ಕೌಶಲ್ಯ, ಸಂಶೋಧನೆ ಮತ್ತು ನಾವೀನ್ಯತೆಗೆ ಬಜೆಟ್‌ನಲ್ಲಿ ಎರಡನೇ ಸ್ಥಾನವಿದೆ. ಕೇಂದ್ರ ಬಜೆಟ್ ಶಿಕ್ಷಣವನ್ನು ಉದ್ಯೋಗ ಮತ್ತು ಉದ್ಯಮಶೀಲತೆಯ ಸಾಮರ್ಥ್ಯದೊಂದಿಗೆ ಜೋಡಿಸುವ ಪ್ರಯತ್ನ ನಡೆಸುತ್ತಿದೆ. ಈ ಪ್ರಯತ್ನಗಳ ಫಲವಾಗಿ, ವೈಜ್ಞಾನಿಕ ಪ್ರಕಟಣೆಗಳ ವಿಷಯದಲ್ಲಿ ಭಾರತ ಇಂದು ಅಗ್ರ ಮೂರು ರಾಷ್ಟ್ರಗಳಲ್ಲಿದೆ" ಎಂದು ಮೋದಿ ಹೇಳಿದರು.