ನವದೆಹಲಿ:ನೂತನ ಸಚಿವ ಸಂಪುಟ ರಚನೆ ವಿಚಾರವಾಗಿ ದೆಹಲಿಯಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಗಳವಾರವೂ ಹೈಕಮಾಂಡ್ ಜೊತೆ ಸುದೀರ್ಘವಾಗಿ ಚರ್ಚೆ ನಡೆಸಿದ್ದಾರೆ. ಚರ್ಚೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವರಿಷ್ಠರೊಂದಿಗೆ ಮಂಗಳವಾರ ಸಂಜೆ ಅಂತಿಮವಾಗಿ ಮಾತುಕತೆ ನಡೆಸಿದ್ದೇನೆ. ಬುಧವಾರ ಬೆಳಗ್ಗೆ ಶುಭ ಸುದ್ದಿ ಸಿಗಲಿದ್ದು, ಬೆಳಗ್ಗೆಯೇ ಸೂಚನೆ ಸಿಕ್ಕರೆ ಬೇಗ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ನಡೆಯಲಿದೆ ಎಂದಿದ್ದಾರೆ.
ಜನಪರ ಆಡಳಿತ ಗಮನದಲ್ಲಿಟ್ಟುಕೊಂಡು ಸಂಪುಟ ರಚನೆಯಾಗಲಿದೆ. ಸಾಮಾಜಿಕ ನ್ಯಾಯ, ವಲಸಿಗರ ಬಗ್ಗೆ ಚರ್ಚೆ ಆಗಿದೆ. ಜೆ. ಪಿ. ನಡ್ಡಾ ಅವರಿಗೆ ಕೆಲ ಸ್ಪಷ್ಟನೆ ನೀಡಲಾಗಿದೆ. ಬೆಳಗ್ಗೆ ಅಂತಿಮ ನಿರ್ಣಯ ತಿಳಿಸುವುದಾಗಿ ಅವರು ಹೇಳಿದ್ದಾರೆ. ಆ ಬಳಿಕ ನಾನು ಸಚಿವರ ಪಟ್ಟಿಯನ್ನು ರಾಜಭವನಕ್ಕೆ ಕಳಿಸಲಿದ್ದೇನೆ ಎಂದರು.
ಬೆಳಗ್ಗೆಯೇ ಮಾಹಿತಿ ಸಿಗುವ ವಿಶ್ವಾಸವಿದ್ದು, ಹಾಗಾದರೆ ಇಂದು ಸಂಜೆಯೊಳಗೆ ಪ್ರಮಾಣವಚನ ನಡೆಯಲಿದೆ. ಸಚಿವರ ಸಂಖ್ಯೆ ಕುರಿತಂತೆ, ಒಂದಿಬ್ಬರನ್ನು ಸೇರಿಸುವ ಹಾಗೂ ಉಪ ಮುಖ್ಯಮಂತ್ರಿಗಳ ಸೇರ್ಪಡೆ ಬಗ್ಗೆ ಇನ್ನೂ ಅಂತಿಮವಾಗಿಲ್ಲ. ಈ ಕುರಿತಂತೆ ಅಂತಿಮ ನಿರ್ಣಯವನ್ನು ಹೈಕಮಾಂಡ್ ಕೈಗೊಳ್ಳಲಿದ್ದು, ಅಲ್ಲಿಂದ ಮಾಹಿತಿ ಬಂದ ಕೂಡಲೇ ನಾನೇ ಅಂತಿಮ ಪಟ್ಟಿಯನ್ನು ಮಾಡಿ ಪ್ರಕಟ ಮಾಡಲಿದ್ದೇನೆ. ಮತ್ತೆ ಹೈಕಮಾಂಡ್ ನಾಯಕರನ್ನು ಭೇಟಿ ಆಗುವುದಿಲ್ಲ. ಬೆಳಗ್ಗೆಯೇ 6.10ರ ಸಮಯದ ವಿಮಾನದಲ್ಲಿ ನಾನು ಬೆಂಗಳೂರಿಗೆ ತೆರಳಲಿದ್ದೇನೆ. ಅಂತಿಮ ಪಟ್ಟಿ ಬಗ್ಗೆ ಹೈಕಮಾಂಡ್ನಿಂದ ಫೋನ್ ಮೂಲಕ ನನಗೆ ಮಾಹಿತಿ ಬರಲಿದೆ ಎಂದು ತಿಳಿಸಿದರು.
ವಿಜಯೇಂದ್ರಗೆ ಸಚಿವ ಸ್ಥಾನ?