ಕರ್ನಾಟಕ

karnataka

ETV Bharat / bharat

ಮುಂದಿನ ವರ್ಷ ದೀಪಾವಳಿಗೆ ಅರಬ್​​ ನಾಡಲ್ಲಿ ಹೊಸ ಹಿಂದೂ ದೇವಾಲಯ ಓಪನ್​​ - ಸಿಂಧಿ ಗುರು ದರ್ಬಾರ್ ದೇವಾಲಯ

ಜೆಬೆಲ್ ಅಲಿಯಲ್ಲಿರುವ ದೇವಾಲಯವು ಯುಎಇಯ ಅತ್ಯಂತ ಹಳೆಯ ಹಿಂದೂ ದೇವಾಲಯಗಳಲ್ಲಿ ಒಂದಾದ ಸಿಂಧಿ ಗುರು ದರ್ಬಾರ್ ದೇವಾಲಯದ ವಿಸ್ತರಣೆಯಾಗಿದೆ ಎಂದು ಖಲೀಜ್ ಟೈಮ್ಸ್ ವರದಿ ಮಾಡಿದೆ.

New Hindu temple to open in Dubai by Diwali next year
ಅರಬ್ಭ ನಾಡಲ್ಲಿ ಹೊಸ ಹಿಂದೂ ದೇವಾಲಯ ಓಪನ್​​

By

Published : Jan 26, 2021, 6:26 AM IST

ದುಬೈ (ಯುಎಇ): ಮುಂದಿನ ವರ್ಷ ದೀಪಾವಳಿಯಂದು ದುಬೈನಲ್ಲಿ ನಿರ್ಮಿಸಿರುವ ಹೊಸ ಹಿಂದೂ ದೇವಾಲಯ ಲೋಕಾರ್ಪಣೆಗೋಳ್ಳಲಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

ಜೆಬೆಲ್ ಅಲಿಯಲ್ಲಿರುವ ದೇವಾಲಯವು ಯುಎಇಯ ಅತ್ಯಂತ ಹಳೆಯ ಹಿಂದೂ ದೇವಾಲಯಗಳಲ್ಲಿ ಒಂದಾದ ಸಿಂಧಿ ಗುರು ದರ್ಬಾರ್ ದೇವಾಲಯದ ವಿಸ್ತರಣೆಯಾಗಿದೆ ಎಂದು ಖಲೀಜ್ ಟೈಮ್ಸ್ ವರದಿ ಮಾಡಿದೆ.

ಸಿಂಧಿ ಗುರು ದರ್ಬಾರ್ ದೇವಾಲಯದ ಟ್ರಸ್ಟಿಗಳಲ್ಲಿ ಒಬ್ಬರಾದ ರಾಜು ಶ್ರಾಫ್, ದೇವಾಲಯದ ವಾಸ್ತುಶಿಲ್ಪವು ವಿಶಿಷ್ಟವಾದ ಅರೇಬಿಯನ್ ಸೌಂದರ್ಯವನ್ನು ಹೊಂದಿರುತ್ತದೆ ಮತ್ತು 11 ಹಿಂದೂ ದೇವತೆಗಳಿಗೆ ನೆಲೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಓದಿ : 72ನೇ ಗಣರಾಜ್ಯೋತ್ಸವ: ರಾಷ್ಟ್ರ ರಾಜಧಾನಿಯಲ್ಲಿ ಬಿಗಿ ಭದ್ರತೆ

"ಒಂದು ಮತ್ತು ಎರಡು ನೆಲಮಾಳಿಗೆಯನ್ನು ಹಾಕುವುದು, ಈಗ ಪೂರ್ಣಗೊಂಡಿದೆ. ದೀಪಾವಳಿ 2022 ರ ಸಮಯಲಕ್ಕೆ ದೇವಾಲಯ ಓಪನ್​ ಮಾಡುವ ಯೋಚನೆಯಲ್ಲಿದ್ದೇವೆ ಎಂದು ಶ್ರಾಫ್ ಹೇಳಿದ್ದಾರೆ. ದೇವಾಲಯಕ್ಕೆ ಫೆಬ್ರವರಿ 2020 ರಲ್ಲಿ ಅಡಿಪಾಯ ಹಾಕಲಾಗಿತ್ತು.

ABOUT THE AUTHOR

...view details