ತಿರುವನಂತಪುರಂ (ಕೇರಳ): ಕೋವಿಡ್-19 ಹಿನ್ನೆಲೆ ಈಗಾಗಲೇ ಜನಜೀವನ ತತ್ತರಿಸಿ ಹೋಗಿದ್ದು, ಈ ನಡುವೆಯೇ ಕೇರಳ ರಾಜ್ಯದಲ್ಲಿ 'ಪ್ಲಾಸ್ಮೋಡಿಯಂ ಓವಲ್' ಎಂಬ ಹೊಸ ರೀತಿಯ ಮಲೇರಿಯಾ ರೋಗಾಣು ಪತ್ತೆಯಾಗಿದೆ ಎಂದು ಕೇರಳ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ತಿಳಿಸಿದ್ದಾರೆ.
ಕೇರಳಕ್ಕೆ ಮತ್ತೊಂದು ಆತಂಕ: ಹೊಸ ಮಲೇರಿಯಾ ರೋಗಾಣು ಪತ್ತೆ - ಪ್ಲಾಸ್ಮೋಡಿಯಂ ಓವಲ್' ಎಂಬ ಮಲೇರಿಯಾ ರೋಗಾಣು ಪತ್ತೆ
ಕೇರಳದಲ್ಲಿ ಸುಡಾನ್‌ನಿಂದ ಪ್ರಯಾಣಿಸಿದ ಸೈನಿಕರೊಬ್ಬರಿಗೆ ನೂತನ ರೀತಿಯ ಲಕ್ಷಣಗಳುಳ್ಳ 'ಪ್ಲಾಸ್ಮೋಡಿಯಂ ಓವಲ್' ಎಂಬ ಮಲೇರಿಯಾ ರೋಗಾಣು ಪತ್ತೆಯಾಗಿದ್ದು, ಭಾರಿ ಆತಂಕ ಮೂಡಿಸಿದೆ.

ಪ್ಲಾಸ್ಮೋಡಿಯಂ ಓವಲ್
ಈ ಕುರಿತು ಟ್ವೀಟ್ ಮೂಲಕ ಮಾಹಿತಿ ನೀಡಿರುವ ಶೈಲಜಾ ಅವರು, ನೂತನ ರೀತಿಯ ಲಕ್ಷಣಗಳುಳ್ಳ 'ಪ್ಲಾಸ್ಮೋಡಿಯಂ ಓವಲ್' ಎಂಬ ಮಲೇರಿಯಾ ರೋಗ ರಾಜ್ಯದಲ್ಲಿ ಪತ್ತೆಯಾಗಿದ್ದು, ಸುಡಾನ್‌ನಿಂದ ಪ್ರಯಾಣಿಸಿದ ಸೈನಿಕನಲ್ಲಿ ಈ ರೋಗದ ಲಕ್ಷಣಗಳು ಕಂಡುಬಂದಿವೆ. ರೋಗಿಯು ಕಣ್ಣೂರಿನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಸಕಾಲಕ್ಕೆ ಸೂಕ್ತ ಚಿಕಿತ್ಸೆ ನೀಡುವುದು ಮತ್ತು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವುದರಿಂದ ರೋಗ ಹರಡುವುದನ್ನು ತಪ್ಪಿಸಬಹುದು. ಯಾರೂ ಭಯ ಪಡುವ ಅಗತ್ಯವಿಲ್ಲ, ಸ್ಪಚ್ಛತೆಯನ್ನು ಕಾಪಾಡಿ ಎಂದು ತಿಳಿಸಿದ್ದಾರೆ.