ಕರ್ನಾಟಕ

karnataka

ಕೇರಳದಲ್ಲಿ ಪತ್ತೆಯಾಗಿದೆ ಮತ್ತೊಂದು ಮಲೇರಿಯಾ!

By

Published : Dec 11, 2020, 9:39 PM IST

ಕೇರಳದಲ್ಲಿ ಪ್ಲಾಸ್ಮೋಡಿಯಂ ಓವಲ್​​ ಎಂಬ ಮಲೇರಿಯಾ ರೋಗ ಪತ್ತೆಯಾಗಿದೆ ಎಂದು ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಮಾಹಿತಿ ನೀಡಿದ್ದಾರೆ.

New genus of Malaria detected in Kerala; KK Shailaja
ಪ್ಲಾಸ್ಮೋಡಿಯಂ ಓವಲ್​​

ತಿರುವನಂತಪುರಂ:ದೇಶದಲ್ಲಿಕೊರೊನಾ ವೈರಸ್ ​ನಿಯಂತ್ರಣಕ್ಕೆ ಬರುತ್ತಿರುವ ಬೆನ್ನಲ್ಲೇ ಕೇರಳದಲ್ಲಿ ಮತ್ತೊಂದು ವೈರಸ್ ಪತ್ತೆಯಾಗಿದ್ದು, ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.

ಕೇರಳದಲ್ಲಿ ಪ್ಲಾಸ್ಮೋಡಿಯಂ ಓವಲ್​​ ಎಂಬ ಮಲೇರಿಯಾ ರೋಗ ಪತ್ತೆಯಾಗಿದೆ ಎಂದು ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಮಾಹಿತಿ ನೀಡಿದರು. ಈ ರೋಗವನ್ನು ಪತ್ತೆ ಹಚ್ಚಿ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡಲಾಗಿದ್ದು, ಸೋಂಕು ಹರಡದಂತೆ ತಡೆಯಲಾಗಿದೆ ಎಂದರು.

ಸೂಡಾನ್ ದೇಶದಿಂದ ಬಂದ ಸೈನಿಕರೊಬ್ಬರಲ್ಲಿ ಈ ಸೋಂಕು ಪತ್ತೆಯಾಗಿದೆ. ಮಲೇರಿಯಾ ರೋಗಲಕ್ಷಣಗಳನ್ನು ಹೊಂದಿದ್ದ ಈತ ಚಿಕಿತ್ಸೆಗಾಗಿ ಕಣ್ಣೂರು ಜಿಲ್ಲಾ ಆಸ್ಪತ್ರೆಗೆ ಆಗಮಿಸಿದ್ದರು. ಈ ವೇಳೆ ಪ್ಲಾಸ್ಮೋಡಿಯಮ್ ಓವಲ್ ಸೋಂಕಿರುವುದು ಗೊತ್ತಾಗಿದೆ ಎಂದರು.

ಇದೊಂದು ಹೊಸ ರೀತಿಯ ಮಲೇರಿಯಾವಾಗಿದ್ದು, ಸೈನಿಕನಿಗೆ ಕೋವಿಡ್​ ಮಾರ್ಗಸೂಚಿಗಳ ಪ್ರಕಾರವೇ ಸಂಪೂರ್ಣ ಚಿಕಿತ್ಸೆ ಒದಗಿಸಲಾಗಿದೆ. ಸಕಾಲಿಕ ಚಿಕಿತ್ಸೆ ಮತ್ತು ತಡೆಗಟ್ಟುವ ಕ್ರಮಗಳಿಂದ ಸೋಂಕು ಹರಡುವುದನ್ನು ತಪ್ಪಿಸಬಹುದು ಎಂದು ಸಚಿವರು ಟ್ವೀಟ್ ಮಾಡಿದ್ದಾರೆ.

ಪ್ಲಾಸ್ಮೋಡಿಯಮ್ ಓವಲ್​​ ಸೋಂಕು ಹೆಚ್ಚಾಗಿ ಆಫ್ರಿಕಾದಲ್ಲಿ ಕಂಡುಬರುತ್ತದೆ. ಆದರೆ, ಇತರ ಮಲೇರಿಯಾ ಪ್ರಕರಣಗಳಂತೆ ಮಾರಕವಲ್ಲ. ವಿವಾಕ್ಸ್ ಮತ್ತು ಫಾಲ್ಸಿಫಾರಮ್ ಮಲೇರಿಯಾದ ಕುಲವಾಗಿದೆ.

ಭಾರತದಲ್ಲಿ ಕೊರೊನಾ ವೈರಸ್ ಕೂಡ ಮೊದಲ ಬಾರಿಗೆ ಕೇರಳದಲ್ಲೇ ಪತ್ತೆಯಾಗಿದ್ದು. ತ್ರಿಶೂರ್​ ಜಿಲ್ಲೆ ಸೇರಿದ ವಿದ್ಯಾರ್ಥಿಯೊಬ್ಬರಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಹಾಗೆಯೇ 2018ರಲ್ಲೂ ಕೋಜಿಕ್ಕೋಡ್ ಜಿಲ್ಲೆಯಲ್ಲಿ ನಿಫಾ ವೈರಸ್ ಮೊದಲ ಬಾರಿಗೆ ಪತ್ತೆಯಾಗಿತ್ತು. ಹೀಗಾಗಿ, ಮಲೇರಿಯಾದ ಮತ್ತೊಂದು ಸೋಂಕು ಕಾಣಿಸಿಕೊಂಡಿದ್ದು ರಾಜ್ಯದ ಜನತೆ ಭೀತಿಗೆ ಒಳಗಾಗಿದ್ದಾರೆ.

ABOUT THE AUTHOR

...view details