ಕರ್ನಾಟಕ

karnataka

ETV Bharat / bharat

ಗುಜರಾತ್​ ಚುನಾವಣೆಗೆ ಆಪ್, ಎಐಎಂಐಎಂ ಎಂಟ್ರಿ.. ಕಾಂಗ್ರೆಸ್, ಬಿಜೆಪಿಗೆ ಪೈಪೋಟಿ

ಈ ಬಾರಿ ಆಮ್ ಆದ್ಮಿ ಪಕ್ಷ ಈ ಎಲ್ಲ ಸ್ಥಾನಗಳ ಮೇಲೆ ಕಣ್ಣಿಟ್ಟಿದೆ. ಆಮ್ ಆದ್ಮಿ ಪಕ್ಷವು ಈಗಾಗಲೇ ತನ್ನ ಅಭ್ಯರ್ಥಿಗಳ ಹೆಸರನ್ನು ಘೋಷಿಸಿದೆ. ಆಮ್ ಆದ್ಮಿ ಪಕ್ಷ ತನ್ನ ಎಲ್ಲ ಕಾರ್ಯಕ್ರಮಗಳನ್ನು ಈ ಪ್ರದೇಶಗಳಲ್ಲಿ ನಡೆಸುತ್ತಿದೆ..

Surat
ಪೈಪೋಟಿ

By

Published : Jan 30, 2021, 3:34 PM IST

ಸೂರತ್/ಭರೂಚ್ :ತ್ವರಿತ ಕೈಗಾರಿಕೀಕರಣದಿಂದಾಗಿ ಸೂರತ್ ವಿಶ್ವದಲ್ಲೇ ವೇಗವಾಗಿ ಬೆಳೆಯುತ್ತಿರುವ ನಗರವಾಗಿ ಹೊರಹೊಮ್ಮಿದೆ. ನಗರದ ಜವಳಿ ಮತ್ತು ವಜ್ರ ಉದ್ಯಮದಲ್ಲಿ ಹೆಚ್ಚಿನ ಕಾರ್ಮಿಕರು ವಲಸೆ ಕಾರ್ಮಿಕರಾಗಿದ್ದು, ಇಲ್ಲಿನ ಪುರಸಭೆ ಚುನಾವಣೆಯಲ್ಲಿ ವಲಸಿಗರು ಪ್ರಮುಖ ಪಾತ್ರವಹಿಸುತ್ತಾರೆ.

ಕಳೆದ 20 ವರ್ಷಗಳಿಂದ ಬಿಜೆಪಿ ಸೂರತ್ ಪುರಸಭೆಯ ಚುಕ್ಕಾಣಿ ಹಿಡಿದಿದೆ. ಕಾಂಗ್ರೆಸ್ ಪ್ರಬಲ ವಿಪಕ್ಷವಾಗಿ ಕಾರ್ಯನಿರ್ವಹಿಸುವಲ್ಲಿ ವಿಫಲವಾಗಿದೆ ಎನ್ನಲಾಗ್ತಿದೆ. 2015ರಲ್ಲಿ 116 ಸದಸ್ಯ ಸ್ಥಾನವುಳ್ಳ ಪುರಸಭೆ ಚುನಾವಣೆಯಲ್ಲಿ ಬಿಜೆಪಿ 79 ಮತ್ತು ಕಾಂಗ್ರೆಸ್ 37 ಸ್ಥಾನ ಗೆದ್ದಿತ್ತು. ಬಿಜೆಪಿ ವಿರೋಧಿ ಪಾಟಿದಾರ್ ಆಂದೋಲನದಿಂದಾಗಿ ಕಾಂಗ್ರೆಸ್ 39 ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಯಿತು.

ಸುಮಾರು 7 ಲಕ್ಷ ಮುಸ್ಲಿಂ ಜನಸಂಖ್ಯೆ :ಪ್ರತಿ ಚುನಾವಣೆಯಲ್ಲೂ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಸ್ಪರ್ಧೆ ನಡೆಯುತ್ತಿತ್ತು. ಆದರೆ, ಈ ಬಾರಿ ಆಮ್ ಆದ್ಮಿ ಪಕ್ಷ (ಎಎಪಿ) ಮತ್ತು ಎಐಎಂಐಎಂ ಎರಡೂ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ.

ಇದು ಕಾಂಗ್ರೆಸ್ ಮತ್ತು ಬಿಜೆಪಿ ಮೇಲೆ ನೇರ ಪರಿಣಾಮ ಬೀರಲಿದೆ. ಅಸಾದುದ್ದೀನ್ ಓವೈಸಿ ಪಕ್ಷದ ಬೆಂಬಲಿಗರು ಮುಸ್ಲಿಮರು. ಸೂರತ್‌ನಲ್ಲಿ ಸುಮಾರು 7 ಲಕ್ಷ ಮುಸ್ಲಿಮರಿರುವುದರಿಂದ ರಾಜ್ಯದಲ್ಲಿ AIMIM ಸುಲಭವಾಗಿ ನೆಲೆಯೂರಬಹುದು. ಇದು ಕಾಂಗ್ರೆಸ್ ಮೇಲೆ ನೇರ ಪರಿಣಾಮ ಬೀರಲಿದೆ.

ಪಾಟಿದಾರ್ ಪ್ರಾಬಲ್ಯದ ಸ್ಥಾನಗಳ ಮೇಲೆ ಆಪ್ ಕಣ್ಣು:2015ರಲ್ಲಿ ಪಾಟೀದಾರ್ ಆಂದೋಲನದಿಂದಾಗಿ ಪಾಟೀದಾರ್ ಪ್ರಾಬಲ್ಯವಿರುವ ಪ್ರದೇಶಗಳಾದ ವರಾಚಾ, ಕಪೋದ್ರಾ ಮತ್ತು ಕಾರಂಜ್ ಜನರು ಬಿಜೆಪಿ ವಿರುದ್ಧ ಕಾಂಗ್ರೆಸ್​ಗೆ ಮತ ಚಲಾಯಿಸಿದ್ದರು. ಇದಕ್ಕಾಗಿಯೇ ಕಾಂಗ್ರೆಸ್ ಈ ಪ್ರದೇಶಗಳಿಂದ ಹೆಚ್ಚಿನ ಸ್ಥಾನಗಳನ್ನು ಗೆದ್ದಿದೆ.

ಈ ಬಾರಿ ಆಮ್ ಆದ್ಮಿ ಪಕ್ಷ ಈ ಎಲ್ಲ ಸ್ಥಾನಗಳ ಮೇಲೆ ಕಣ್ಣಿಟ್ಟಿದೆ. ಆಮ್ ಆದ್ಮಿ ಪಕ್ಷವು ಈಗಾಗಲೇ ತನ್ನ ಅಭ್ಯರ್ಥಿಗಳ ಹೆಸರನ್ನು ಘೋಷಿಸಿದೆ. ಆಮ್ ಆದ್ಮಿ ಪಕ್ಷ ತನ್ನ ಎಲ್ಲ ಕಾರ್ಯಕ್ರಮಗಳನ್ನು ಈ ಪ್ರದೇಶಗಳಲ್ಲಿ ನಡೆಸುತ್ತಿದೆ.

ಬಿಜೆಪಿಯ ಬಗ್ಗೆ ಅಸಮಾಧಾನಗೊಂಡಿರುವ ಮತ್ತು ಕಾಂಗ್ರೆಸ್‌ಗೆ ಮತ ಚಲಾಯಿಸಲು ಇಷ್ಟಪಡದ ಮತದಾರರನ್ನು ಸೆಳೆಯಲು ಆಮ್ ಆದ್ಮಿ ಪಕ್ಷ ಪ್ರಯತ್ನಿಸುತ್ತಿದೆ. ಈ ಪ್ರದೇಶಗಳಲ್ಲಿ ಸುಮಾರು 15 ಲಕ್ಷ ಜನರು ಸೌರಾಷ್ಟ್ರ ಮತ್ತು ಉತ್ತರ ಗುಜರಾತ್ ಮೂಲದವರಾಗಿದ್ದು, ಅವರು ಪುರಸಭೆ ನಿಗಮ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿದ್ದಾರೆ.

ಕುತೂಹಲ ಮೂಡಿಸಿರುವ ಎಲೆಕ್ಷನ್ :30 ವಾರ್ಡ್​​ಗಳ 120 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಬಿಜೆಪಿ, ಕಾಂಗ್ರೆಸ್ ಜತೆಗೆ ಆಪ್, ಎಐಎಂಐಎಂ ಪಕ್ಷಗಳೂ ಪ್ರಬಲ ಪೈಪೋಟಿ ನೀಡುತ್ತಿವೆ.

ABOUT THE AUTHOR

...view details