ಕರ್ನಾಟಕ

karnataka

ETV Bharat / bharat

ದೆಹಲಿ ಮಹಾನಗರ ಪಾಲಿಕೆ ಚುನಾವಣೆ: ತ್ರಿಕೋನ ಸ್ಪರ್ಧೆಗೆ ಅಖಾಡ ಸಜ್ಜು - ನವದೆಹಲಿ ಮಹಾನಗರ ಪಾಲಿಕೆ ಚುನಾವಣೆ

ಬಿಜೆಪಿ, ಆಮ್ ಆದ್ಮಿ ಪಾರ್ಟಿ (ಆಪ್)​ ಹಾಗೂ ಕಾಂಗ್ರೆಸ್​ ನಡುವಿನ ತ್ರಿಕೋನ ಸ್ಪರ್ಧೆಗೆ ದೆಹಲಿ ಮಹಾನಗರ ಪಾಲಿಕೆ ಚುನಾವಣೆಯ ಅಖಾಡ ಸಿದ್ಧವಾಗಿದೆ.

New Delhi Municipal Corporation election begins
ನವದೆಹಲಿ ಮಹಾನಗರ ಪಾಲಿಕೆ ಚುನಾವಣೆ ಆರಂಭ

By

Published : Dec 4, 2022, 7:55 AM IST

ನವ ದೆಹಲಿ: ನವ ದೆಹಲಿ ಮಹಾನಗರ ಪಾಲಿಕೆಯ 250 ವಾರ್ಡ್​ಗಳಿಗೆ ಇಂದು ಬೆಳಗ್ಗೆ 8 ರಿಂದ ಸಂಜೆ 5.30 ರವರೆಗೆ ಚುನಾವಣೆ ನಡೆಯಲಿದ್ದು, ಮತದಾರರು ಮತಗಟ್ಟೆಯತ್ತ ಹೆಜ್ಜೆ ಹಾಕುತ್ತಿದ್ದಾರೆ. ಬಿಜೆಪಿ, ಆಪ್​ ಹಾಗೂ ಕಾಂಗ್ರೆಸ್​ ನಡುವಿನ ತ್ರಿಕೋನ ಸ್ಪರ್ಧೆಗೆ ಪಾಲಿಕೆ ಅಖಾಡ ಸಿದ್ಧವಾಗಿದೆ. 1,349 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದು, 1.45 ಕೋಟಿಗೂ ಹೆಚ್ಚು ಜನರು ಮತ ಚಲಾಯಿಸಲು ಅರ್ಹರಾಗಿದ್ದಾರೆ.

ರಾಜಧಾನಿಯಲ್ಲಿ ನಗರ ಸ್ಥಳೀಯ ಸಂಸ್ಥೆಯ ಚುಕ್ಕಾಣಿ ಹಿಡಿಯಲು ವಿವಿಧ ರಾಜಕೀಯ ಪಕ್ಷಗಳ ನಾಯಕರು ಬೀದಿಗಿಳಿದು ಸಭೆ ಮತ್ತು ಅಂತಿಮ ಹಂತದ ಮನೆ ಮನೆ ಪ್ರಚಾರ ಕೈಗೊಂಡು ಮತ ಯಾಚನೆ ಮಾಡಿದ್ದರು. ಡಿಸೆಂಬರ್ 7ರಂದು ಮತ ಎಣಿಕೆ ನಡೆಯಲಿದೆ.

ದೆಹಲಿಯಲ್ಲಿ ಒಟ್ಟು 1,45,05,358 ಮತದಾರರಿದ್ದಾರೆ. ಈ ಪೈಕಿ 78,93,418 ಪುರುಷರು, 66,10,879 ಮಹಿಳೆಯರು ಮತ್ತು 1,061 ತೃತೀಯಲಿಂಗಿಗಳಿದ್ದಾರೆ. ಚುನಾವಣಾ ಆಯೋಗ 13,638 ಮತಗಟ್ಟೆಗಳನ್ನು ಸ್ಥಾಪಿಸಿದೆ. ಇದಕ್ಕೆ ಬೇಕಾಗಿರುವ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

ಮತದಾರರ ಗುಣಮಟ್ಟದ ಅನುಭವಕ್ಕಾಗಿ 68 ಮಾದರಿ ಮತ್ತು 68 ಪಿಂಕ್ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 68 ಮಾದರಿ ಮತಗಟ್ಟೆಗಳಲ್ಲಿ ಕಾಯುವ ಪ್ರದೇಶ, ಲೌಂಜ್, ಮತದಾರರಿಗೆ ಮಿಠಾಯಿ, ಟೋಫಿ ವಿತರಣೆ, ಸೆಲ್ಫಿ ಬೂತ್ ಮತ್ತು ಅಂಗವಿಕಲರು, ಹಿರಿಯ ನಾಗರಿಕರಿಗೆ ಸಹಾಯ ಮಾಡಲು ನಾಗರಿಕ ರಕ್ಷಣಾ ಸ್ವಯಂಸೇವಕರು ಸೇರಿದಂತೆ ಸೌಲಭ್ಯಗಳನ್ನೂ ಒದಗಿಸಲಾಗಿದೆ. 68 ಪಿಂಕ್ ಮತಗಟ್ಟೆಗಳಲ್ಲಿ ಮಹಿಳಾ ಸಿಬ್ಬಂದಿ ನಿಯೋಜಿಸಿದ್ದು, ಹಾಲುಣಿಸುವ ತಾಯಂದಿರಿಗೆ ಫೀಡಿಂಗ್​ ರೂಂ, ಮತದಾರರೊಂದಿಗೆ ಬರುವ ಚಿಕ್ಕ ಮಕ್ಕಳಿಗಾಗಿ ಶಿಶುವಿಹಾರ, ಮಕ್ಕಳಿಗೆ ಸ್ವಿಂಗ್, ಸೆಲ್ಫಿ ಬೂತ್ ಸೇರಿದಂತೆ ಇತರ ಸೌಲಭ್ಯವಿದೆ.

ಇದನ್ನೂ ಓದಿ:ಗುಜರಾತ್ ವಿಧಾನಸಭಾ ಚುನಾವಣೆ: ಡಿ.5ಕ್ಕೆ ನಿಶಾನ್​ ಶಾಲೆಯಲ್ಲಿ ಪ್ರಧಾನಿ ಮೋದಿ ಮತದಾನ

ABOUT THE AUTHOR

...view details