ನವದೆಹಲಿ: 15ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಕೋರಿಕೆಯ ಮೇರೆಗೆ ಚೀನಾ - ಭಾರತ ಮಾತುಕತೆ ನಡೆದಿವೆ ಎಂದು ಚೀನಾ ನೀಡಿರುವ ಹೇಳಿಕೆಯನ್ನು ಭಾರತ ಸರ್ಕಾರದ ಮೂಲಗಳು ನಿರಾಕರಿಸಿವೆ.
ಚೀನಾದ ವಿದೇಶಾಂಗ ಸಚಿವಾಲಯ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ, ''ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಆಗಸ್ಟ್ 23 ರಂದು ಮನವಿ ಮಾಡಿದ್ದು, ಬಳಿಕ ಬ್ರಿಕ್ಸ್ ಶೃಂಗಸಭೆ ಸಂದರ್ಭದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ'' ಎಂದು ತಿಳಿಸಿದೆ. ಆದರೆ ದ್ವಿಪಕ್ಷೀಯ ಸಭೆಗಾಗಿ ಚೀನಾ ಕಡೆಯಿಂದ ಕೆಲ ವಿನಂತಿಗಳು ಬಾಕಿ ಉಳಿದಿವೆ ಎಂದು ಭಾರತ ವಿದೇಶಾಂಗ ಇಲಾಖೆ ಮೂಲಗಳು ತಿಳಿಸಿವೆ. ಭಾರತ ಮತ್ತು ಚೀನಾ ನಾಯಕರು ಬ್ರಿಕ್ಸ್ ಶೃಂಗಸಭೆ ಸಂದರ್ಭ ಸಂಭಾಷಣೆ ನಡೆಸಿದ್ದಾರೆ ಎಂದು ಮೂಲಗಳು ದೃಢಪಡಿಸಿವೆ.
ಇಬ್ಬರು ನಾಯಕರು ಪ್ರಸ್ತುತ ಚೀನಾ - ಭಾರತ ಸಂಬಂಧಗಳ ಸುಧಾರಣೆ ಹಾಗೂ ಇನ್ನಿತರ ಸಮಸ್ಯೆಗಳ ಕುರಿತಂತೆ ಪ್ರಾಮಾಣಿಕವಾದ ಸಮಾಲೋಚನೆ ಮಾಡಿದ್ದಾರೆ. ಚೀನಾ-ಭಾರತದ ಸಂಬಂಧಗಳ ಸುಧಾರಣೆ ಉಭಯ ರಾಷ್ಟ್ರಗಳ ನಡುವಣ ಮೊದಲ ಆದ್ಯತೆ ಆಗಿದೆ ಎಂಬುದನ್ನು ಅಧ್ಯಕ್ಷ ಕ್ಸಿ ಒತ್ತಿ ಹೇಳಿದರು. ಎರಡು ದೇಶಗಳ ಜನರ ನಡುವಣ ಶಾಂತಿ- ಸೌಹಾರ್ದತೆ ಕಾಪಾಡುವುದು, ದಕ್ಷಿಣ ಏಷ್ಯಾ ಭಾಗದಲ್ಲಿ ಶಾಂತಿ, ಸ್ಥಿರತೆ ಕಾಪಾಡುವುದು ಮತ್ತು ಜಾಗತಿಕ ದೃಷ್ಟಿಯಿಂದಲೂ ಒಳ್ಳೆಯದು ಎಂಬುದನ್ನ ಚೀನಾ ಅಧ್ಯಕ್ಷರು ಪ್ರತಿಪಾದಿಸಿದರು ಎಂದು ಚೀನಾ ವಿದೇಶಾಂಗ ಸಚಿವಾಲಯ ಹೇಳಿಕೆ ನೀಡಿತ್ತು.
ಇಬ್ಬರು ನಾಯಕರು ಚೀನಾ ಮತ್ತು ಭಾರತ ಸಂಬಂಧ ಹಾಗೂ ಇನ್ನಿತರ ಅಂತಾರಾಷ್ಟ್ರೀಯ ವಿಷಯಗಗಳನ್ನು ವಿನಿಮಯ ಮಾಡಿಕೊಂಡಿದ್ದಾರೆ. ಉಭಯ ದೇಶ ದೇಶಗಳ ಸಂಬಂಧ ಸುಧಾರಿಸುವುದಿಂದ ಸಾಮಾನ್ಯ ಹಿತಾಸಕ್ತಿಗಳನ್ನು ಪೂರೈಸಿಕೊಳ್ಳಬಹುದು'' ಎಂದು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಪ್ರತಿಪಾದಿಸಿದರು ಎಂದು ಚೀನಾ ವಿದೇಶಾಂಗ ಇಲಾಖೆ ವಕ್ತಾರರು ಹೇಳಿದರು.