ಕರ್ನಾಟಕ

karnataka

ETV Bharat / bharat

ಹುಡುಗಿಗೋಸ್ಕರ ಪ್ರಾಣ ಸ್ನೇಹಿತನ ಕೊಲೆ: 12ನೇ ತರಗತಿ ವಿದ್ಯಾರ್ಥಿಗಳಿಂದ ನಡೀತು ಕೃತ್ಯ - ಈಟಿವಿ ಭಾರತ ಕರ್ನಾಟಕ

ಹುಡುಗಿ ವಿಚಾರಕ್ಕೋಸ್ಕರ ಮೂವರು ಗೆಳೆಯರು ಸೇರಿ ಪ್ರಾಣಸ್ನೇಹಿತನ ಕೊಲೆ ಮಾಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

student stabbed friend
student stabbed friend

By

Published : Aug 12, 2022, 7:52 PM IST

ನವದೆಹಲಿ:ಹುಡುಗಿ ವಿಚಾರವಾಗಿ ಆರಂಭವಾದ ವಾಗ್ವಾದ ಕೊಲೆಯಲ್ಲಿ ಅಂತ್ಯಗೊಂಡಿರುವ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ. 12ನೇ ತರಗತಿಯಲ್ಲಿ ವ್ಯಾಸಂಗ ಮಾಡ್ತಿದ್ದ ಮೂವರು ಸ್ನೇಹಿತರು ಸೇರಿಕೊಂಡು ಯುವರಾಜ್​ (20) ಎಂಬಾತನ ಕೊಲೆ ಮಾಡಿದ್ದಾರೆ. ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.

ಸಹೋದರಿಯಿಂದ ರಾಖಿ ಕಟ್ಟಿಸಿಕೊಂಡಿದ್ದ ಯುವರಾಜ್​ ಮಾರುಕಟ್ಟೆಗೆ ಬಂದು ಸಿಹಿ ಖರೀದಿ ಮಾಡುತ್ತಿದ್ದನು. ಈ ಸಂದರ್ಭದಲ್ಲಿ ಆತನ ಮೇಲೆ ಮೂವರು ಸ್ನೇಹಿತರು ಚಾಕುವಿನಿಂದ ಹಲ್ಲೆ ನಡೆಸಿ, ಕೊಲೆ ಮಾಡಿದ್ದಾರೆ. ದೆಹಲಿಯ ವಿವೇಕ್​ ವಿಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ:ದೆಹಲಿಯ ರಸ್ತೆಯಲ್ಲಿ ವಿದ್ಯಾರ್ಥಿಯ ಅಟ್ಟಾಡಿಸಿ ಬರ್ಬರ ಹತ್ಯೆ: ಸಿಸಿಟಿವಿ ವಿಡಿಯೋ

ಕಸ್ತೂರಬಾ ನಗರದಲ್ಲಿ ಯುವರಾಜ್​ ಕುಟುಂಬದೊಂದಿಗೆ ವಾಸವಾಗಿದ್ದ. 12ನೇ ತರಗತಿಯಲ್ಲಿ ವ್ಯಾಸಂಗ ಮಾಡ್ತಿದ್ದ ಈತನ ಕುಟುಂಬದಲ್ಲಿ ತಾಯಿ, ಸಹೋದರ, ಸಹೋದರಿ ಮತ್ತು ಇತರೆ ಸಂಬಂಧಿಕರಿದ್ದಾರೆ. ಯುವರಾಜ್​ನ ಸ್ನೇಹಿತನೋರ್ವ ಕಸ್ತೂರ ಬಾ ನಗರದಲ್ಲಿ ವಾಸವಾಗಿದ್ದ ಹುಡುಗಿ ಜೊತೆ ಅಕ್ರಮ ಸಂಬಂಧ ಹೊಂದಿದ್ದನಂತೆ. ಇದೇ ವಿಚಾರವಾಗಿ ಇಬ್ಬರ ನಡುವೆ ವಾಗ್ವಾದ ಶುರುವಾಗಿದ್ದು, ಅದು ತಾರಕ್ಕೇರಿದಾಗ ಕೊಲೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.

ABOUT THE AUTHOR

...view details